Headlines

ಅತ್ಯಾಚಾರಿಗೆ ಗುಂಡೇಟು

ಬೆಳಗಾವಿದರೋಡೆ, ಗ್ಯಾಂಗ್ ರೇಪ್ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ನೀಡಿದ ಘಟನೆ ಕಿತ್ತೂರು ಪಟ್ಟಣದ ಹೊರ ವಲಯದಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ. ಆರೋಪಿ ರಮೇಶ್ ಕಿಲ್ಲಾರ್ ನನ್ನು ಬೆಳಗಿನ ಜಾವ 6 ಗಂಟೆಗೆ ಆರೋಪಿ ಬಂಧಿಸಲು ಹೋದಾಗ ಘಟನೆ ನಡೆದಿದೆ.ಪೊಲೀಸ್ ಪೇದೆ ಷರೀಫ್ ದಫೇದಾರ್ ಗೆ ಚಾಕು ಇರಿದು ಪರಾರಿಯಾಗುವ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಪಿಎಸ್‌ಐ ಪ್ರವೀಣ್ ಗೊಂಗೊಳ್ಳಿ ಎಚ್ಚರಿಕೆ ನೀಡಿದರೂ ದಾಳಿ ಮಾಡಿ ತಪ್ಪಿಸಿಕೊಳ್ಳಲು ‌ಪ್ರಯತ್ನ ಹಿನ್ನೆಲೆ ಆರೋಪಿ ಕಾಲಿಗೆ ಗುಂಡೇಟು ನೀಡಿದ್ದಾರೆ.ಡಕಾಯಿತಿ,…

Read More

ಭಾವೈಕ್ಯತೆಯ ಸಂದೇಶ ಸಾರಿದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್

ಗಣೇಶ ಮೂರ್ತಿ ಪ್ರತಿಷ್ಠಾಪಿಸಿಭಾವೈಕ್ಯತೆಯ ಸಂದೇಶ ಸಾರಿದ ಜಿಲ್ಲಾಧಿಕಾರಿಬೆಳಗಾವಿ: ವಿವಿಧತೆಯಲ್ಲಿ ಏಕತೆಯ ಹಾಗೂ ಮಾನವೀಯತೆಯ ಬಗ್ಗೆ ಸಂದೇಶ ಸಾರುವ ಬೆಳಗಾವಿಯ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಹಿಂದೂಗಳ ಪವಿತ್ರಧಾರ್ಮಿಕ ಹಬ್ಬದ ಗಣೇಶ ಚತುರ್ಥಿಯಂದು ಗಣೇಶನ ಮೂರ್ತಯನ್ನು ಹೊತ್ತು ತಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ಮತ್ತೊಮ್ಮೆ ಭಾವೈಕ್ಯದ ಸಂದೇಶ ಸಾರಿದ್ದಾರೆ. ಬುಧವಾರ ಜಿಲ್ಲಾಧಿಕಾರಿಗಳು ತಮ್ಮ ಪರಿವಾರದೊಂದಿಗೆ ಚೆನ್ನಮ್ಮ ವೃತ್ತದಲ್ಲಿ ಇರುವ ಗಣೇಶ ಮಂದಿರಕ್ಕೆ ಆಗಮಿಸಿ ಗಣೇಶ ಮೂರ್ತಿಗೆ ದೇವಾಲಯದಲ್ಲಿ ಅರ್ಚಕರಿಂದ ವಿಶೇಷ ಪೂಜೆ ಸಲ್ಲಿಸಿ, ಸಾಂಪ್ರದಾಯಿಕವಾಗಿ ಪರಿಸರಪ್ರೇಮಿ…

Read More

ಅಧ್ಯಕ್ಷೆ–ಉಪಾಧ್ಯಕ್ಷರು ಸೇರಿ 28 ಮಂದಿ ವಜಾ- ಆರು ವರ್ಷಗಳ ಅನರ್ಹತೆ

ಅಧ್ಯಕ್ಷೆ–ಉಪಾಧ್ಯಕ್ಷರು ಸೇರಿ 28 ಮಂದಿ ವಜಾ, ಆರು ವರ್ಷಗಳ ಅನರ್ಹತೆ ಆಸ್ತಿ ವರ್ಗಾವಣೆ ಲೋಪ. ಶಿಂಧಿಕುರಬೇಟ ಪಂಚಾಯತ ಸದಸ್ಯರಿಗೆ ಕಠಿಣ ಶಿಕ್ಷೆ ಬೆಳಗಾವಿ, ಆ.28 –ಗೋಕಾಕ ತಾಲ್ಲೂಕಿನ ಶಿಂಧಿಕುರಬೇಟ ಗ್ರಾಮ ಪಂಚಾಯಿತಿಯಲ್ಲಿ ನಡೆದ ನಿಯಮಬಾಹಿರ ಆಸ್ತಿ ವರ್ಗಾವಣೆ ಪ್ರಕರಣಕ್ಕೆ ಸರ್ಕಾರ ದೊಡ್ಡ ಬಿಸಿ ಮುಟ್ಟಿಸಿದೆ . ಅಧ್ಯಕ್ಷೆ–ಉಪಾಧ್ಯಕ್ಷರೊಂದಿಗೆ 26 ಮಂದಿ ಸದಸ್ಯರು ಸೇರಿ ಒಟ್ಟು 28 ಜನರನ್ನೇ ಅಧಿಕಾರದಿಂದ ಕೆಳಗಿಳಿಸಿ, ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಅನರ್ಹಗೊಳಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ…

Read More

ಲೋಕಾಯುಕ್ತ ಬಲೆಗೆ ಬಿದ್ದ ಭೂ ವಿಜ್ಞಾನಿ

ಲೋಕಾಯುಕ್ತ ಬಲೆಗೆ ಬಿದ್ದ ಭೂ ವಿಜ್ಞಾನಿಬೆಳಗಾವಿ.ಜಪ್ತಾದ ಮರಳನ್ನು ವಿಲೇವಾರಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂ ವಿಜ್ಞಾನಿ ಇಲಾಖೆಯ ಒಬ್ಬರು ಲೋಕಾಯುಕ್ತರು ಬೀಸಿದ ಬಲೆಗೆಸಿಕ್ಕಿ ಬಿದ್ದಿದ್ದಾರೆ.ಫಿಯರ್ಾದಿದಾರ ಶೀತಲ ಗೋಪಾಲ ಸನದಿ (ಅಥಣಿ, ಹುಳಿಕಟ್ಟಿ ಗಲ್ಲಿ) ನೀಡಿದ ದೂರಿನ ಆಧಾರದ ಮೇಲೆ ಈ ಕಾಯರ್ಾಚರಣೆ ನಡೆದಿದೆ. ಏನು ಘಟನೆ?ಫಿಯರ್ಾದಿದಾರ ಶೀತಲ ಅವರ ಪರಿಚಯದ ಗುತ್ತಿಗೆದಾರ ಬಿ.ಕೆ. ಮಗದುಮ್ಮ ಅವರಿಗೆ, ಐನಾಪೂರ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ, ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಐಗಳಿ ಗ್ರಾಮದ ಸೀಜ್ ಮಾಡಿರುವ…

Read More

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹಟ್ಟಿಹೊಳಿ ಹಿಂಪಡೆಯಲು ಕಾರಣವೇನು?

ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರ ಬ್ಯಾಂಕ್ ಚುನಾವಣೆ ಈಗ ತಲೆಕೆಳಗಾಗಿ ರಾಜಕೀಯ ಬಿರುಕುಗಳನ್ನು ಬಯಲಿಗೆಳೆಯುತ್ತಿದೆ. ಪರಿಷತ್ ಸದಸ್ಯ ಹಾಗೂ ಸಚಿವ ಲಕ್ಷ್ಮಿ ಹೆಬ್ಬಾಳ್ವರ್ ಸಹೋದರ ಚನ್ನರಾಜ್ ಹಟ್ಟಿಹೊಳಿ, ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ನಾಲ್ಕೈದು ತಿಂಗಳಿಂದ ಭರ್ಜರಿ ಸಿದ್ಧತೆ ನಡೆಸಿದ್ದರೂ, ಅಚಾನಕ್ ಹಿಂದೆ ಸರಿದಿರುವುದು ಜಿಲ್ಲೆಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ತಿರುವಿನ ಹಿನ್ನಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನುವುದು ಸ್ಪಷ್ಟ. ಸ್ವತಃ ವಿಡಿಯೋ ಹೇಳಿಕೆ ನೀಡಿರುವ ಜಾರಕಿಹೊಳಿ, “ನನ್ನ ಮನವೊಲಿಕೆಯ ಪರಿಣಾಮವಾಗಿ ಚನ್ನರಾಜ್…

Read More

ಗಣೇಶ ಮಹಾಪ್ರಸಾದ- ಮಹಾ ರಾಜಕೀಯ

ಮಹಾಪ್ರಸಾದ ವಿವಾದ: ಧಾರ್ಮಿಕ ಉತ್ಸವದಿಂದ ಜಾತಿ ರಾಜಕೀಯದ ಅಂಗಳಕ್ಕೆ!. ಜಿಲ್ಲಾಡಳಿತ- ಪಾಲಿಕೆ ನಡುವೆ ಸಮನ್ವಯದ ಕೊರತೆ. ಡಿಸಿ ವಿಷಾದಿಸಿದರೂ ಬಿಡದ ವಿಘ್ನ‌ ಸಂತೋಷಿಗಳು. ಪಾಲಿಕೆ ನಗರಸೇವಕರು ಕೇಳಿದ್ದರಲ್ಲಿ ತಪ್ಪೇನಿದೆ? ಮಹಾಪ್ರಸಾದ ಬೇಡ ಅಂದಿಲ್ಲ. ದೊಡ್ಡ ಕಾರ್ಯಕ್ರಮ ಕ್ಕೆ ಕೌನ್ಸಿಲ್ ಠರಾವ್ ಅಗತ್ಯ ಎಂದಿದ್ದ ನಗರಸೇವಕರು. ಪಾಲಿಕೆಯನ್ನೇ ದೂರವಿಟ್ಡು ಗಣೇಶೋತ್ಸವ ಮಂಡಳದೊಂದಿಗೆ ಸಭೆ ನಡೆಸಿದ್ದ ಪೊಲೀಸ್, ಜಿಲ್ಲಾಡಳಿತ ಇ ಬೆಳಗಾವಿ ವಿಶೇಷ.. ಬೆಳಗಾವಿ ನಗರದಲ್ಲಿ ಗಣೇಶೋತ್ಸವ ಎಂದರೆ ಜನ ಸಮುದ್ರ. ಲಕ್ಷಾಂತರ ಭಕ್ತರು ಒಂದೇ ದಿನದಲ್ಲಿ ಬೀದಿಗಿಳಿದು ಮೆರವಣಿಗೆಯ…

Read More

“2 ವರ್ಷ ಬಿಜೆಪಿಯವರ ಕೆಲಸವೇ ಆರೋಪ, ವಿರೋಧ” – ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: “ಕಾಂಗ್ರೆಸ್‌ ಸರ್ಕಾರ ಎಷ್ಟೇ ಮಹತ್ವದ ಕೆಲಸ ಮಾಡಿದರೂ, ಬಿಜೆಪಿಯವರು ವಿರೋಧಿಸುವುದೇ ಅವರ ಸ್ವಭಾವ. ಇನ್ನೂ ಎರಡೂ ವರ್ಷಗಳ ಕಾಲ ಆರೋಪ ಮಾಡುವುದು, ವಿರೋಧಿಸುವುದನ್ನು ಬಿಟ್ಟರೆ ಅವರಿಗೆ ಬೇರೆ ಯಾವುದೇ ಕೆಲಸವಿಲ್ಲ” ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಟೀಕಿಸಿದರು. ಮಂಗಳವಾರ ನಗರದ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರಿಂದ ನಾಡಹಬ್ಬ ದಸರಾ ಉದ್ಘಾಟನೆ ನಡೆಯುತ್ತಿರುವುದು ರಾಜ್ಯಕ್ಕೆ ಹೆಮ್ಮೆ ವಿಚಾರ ಎಂದು ಹೇಳಿದರು. “ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ…

Read More

ಶುಭ ಗೆ ಸ್ಮಾರ್ಟ ಹೆಚ್ಚುವರಿ ಹೊಣೆ

ಬೆಳಗಾವಿ ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಶ್ರೀಮತಿ ಸೈಯಿದಾ ಅಫ್ರಿನಾ ಭಾನು ಎಸ್ ಅವರನ್ಬು ಎತ್ತಂಗಡಿ‌ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ ಅಫ್ರೀನಾ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ತೆರವಾಗಿರುವ ಸ್ಮಾರ್ಟ ಎಂಡಿ ಸ್ಥಾನದ ಹೆಚ್ಚುವರಿ ಜವಾಬ್ದಾರಿಯನ್ನು ಪಾಲಿಕೆ ಆಯುಕ್ತೆ ಶುಭ ಬಿ. ಅವರಿಗೆ ವಹಿಸಲಾಗಿದೆ

Read More

ಡಿಸಿ ಹೇಳಿಕೆ- ಧರ್ಮ ಸೂಕ್ಷ್ಮತೆ ಎಚ್ಚರಿಸಿದ ಸಭಾನಾಯಕ

ಬೆಳಗಾವಿ, ಆ. 25 (ಸಂಯುಕ್ತ ಕರ್ನಾಟಕ)ಗಣೇಶೋತ್ಸವ ಸಿದ್ಧತೆಗಳ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ನೀಡಿದ “ಲಕ್ಷ ಜನರಿಗೆ ಪಾಲಿಕೆಯಿಂದ ಮಹಾಪ್ರಸಾದ” ಎಂಬ ಹೇಳಿಕೆ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಭಾರೀ ಗದ್ದಲ ಎಬ್ಬಿಸಿತು. ಪಕ್ಷ ಬೇಧ ಮರೆತ ನಗರಸೇವಕರು ಜಿಲ್ಲಾಡಳಿತದ ವಿರುದ್ಧ ಗರಂ ಆಗಿ “ಶಿಷ್ಟಾಚಾರ ಉಲ್ಲಂಘನೆ – ಪಾಲಿಕೆಗೆ ಅವಮಾನ” ಎಂದು ನೇರ ವಾಗ್ದಾಳಿ ನಡೆಸಿದರು. *ಮೊಟ್ಟ ಮೊದಲ ಬಾರಿಗೆ ಡಿಸಿಯೇ ಚರ್ಚೆಯ ಗುರಿ!* ಗಡಿನಾಡ ಬೆಳಗಾವಿಯ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಜಿಲ್ಲಾಧಿಕಾರಿಯ…

Read More

ತರಕಾರಿ ಸಗಟು ಮಾರುಕಟ್ಟೆ ಭೂ ಬದಲಾವಣೆ ಆದೇಶ ರದ್ದು

ಬೆಳಗಾವಿ: ಬೆಳಗಾವಿ ನಗರದ ಹೃದಯ ಭಾಗದಲ್ಲಿರುವ ರಿ.ಸ. ನಂ. ೬೭೭, ೬೭೮, ೬೭೯/೧, ೬೮೦/೧, ೬೮೬/೧, ೬೮೬/೨, ೬೯೬, ೬೯೭/೨, ೬೯೮/೧ ಮತ್ತು ೬೯೮/೨ ಸೇರಿ ಒಟ್ಟು ೧೦ ಎಕರೆ ೨೦ ಗುಂಟೆ ಜಮೀನುಗಳನ್ನು ಕೃಷಿ ವಲಯದಿಂದ ವಾಣಿಜ್ಯ (ತರಕಾರಿ ಸಗಟು ಮಾರುಕಟ್ಟೆ) ವಲಯಕ್ಕೆ ಪರಿವರ್ತನೆ ಮಾಡಿದ ಸರ್ಕಾರದ ೨೦೧೪ರ ಡಿಸೆಂಬರ್ ೧೧ರ ಆದೇಶವನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ನೀಡಿದ ಮಾಹಿತಿಯಂತೆ, ಈ ಭೂ ಉಪಯೋಗ ಬದಲಾವಣೆ ಪ್ರಕ್ರಿಯೆಯಲ್ಲಿ ಸುಳ್ಳು ದಾಖಲೆಗಳು ಹಾಗೂ ಸತ್ಯ…

Read More
error: Content is protected !!