Headlines

ಮಹಾಕುಂಭ ಮೇಳ ಕಾಲ್ತುಳಿತಕ್ಕೆ ಬೆಳಗಾವಿಯ ಇಬ್ಬರು ಬಲಿ

ಪ್ರಯಾಗರಾಜ ಕುಂಭಮೇಳದಲ್ಲಿ ಕಾಲ್ತುಳಿತ‌ ಪ್ರಕರಣದಲ್ಲಿ ‌ಬೆಳಗಾವಿಯ ತಾಯಿ-ಮಗಳು ಮೃತಪಟ್ಟಿದ್ದಾರೆ. ಕಾಲ್ತುಳಿತದಲ್ಲಿ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿ ಆಗದೇ ಬೆಳಗಾವಿಯ ತಾಯಿ ಮಗಳು ಮೃತಪಟ್ಟಿದ್ದಾರೆ. ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50) ಮೇಘಾ ಹತ್ತರವಾಟ ಮೃತ ದುರ್ದೈವಿಗಳು ಮೂರು ದಿನಗಳ ‌ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಪ್ರಯಾಣ. ಮಾಡಿದ್ದರು.13 ಜನರ ತಂಡದಲ್ಲಿ ಪ್ರಯಾಣ ಬೆಳೆಸಿದ್ದರು

Read More

ಒಂದು ಕ್ಲಬ್. ಲಕ್ಷ ರೂ ಹಫ್ತಾ..

ಬೆಳಗಾವಿಯಲ್ಲಿ ಎಲ್ಲಿ ನೋಡಿದಲ್ಲಿ ಕ್ಲಬ್ ಗಳು. ನಿಯಂತ್ರಣ ಎನ್ನುವುದೇ ಇಲ್ಲ. ಕೈ ಕಟ್ಟಿ ಕುಳಿತ ಇಲಾಖೆ ಬೆಳಗಾವಿ. ಕ್ಲಬ್ ಒಂದು. ತಿಂಗಳ ಮಾಮೂಲಿ ಲಕ್ಷ ಲಕ್ಷ ರೂ.! ಬೆಳಗಾವಿ.ಸಧ್ಯದ ಪರಿಸ್ಥಿತಿ ಯನ್ನು ಗಮನಿಸಿದರೆ ಗಡಿನಾಡ ಬೆಳಗಾವಿಯಲ್ಲಿ ಅಕ್ರಮ ದಂಧೆಯ ಅಡ್ಡೆಗಳು ನಾಯಿ ಕೊಡೆಗಳಂತೆ ತಲೆಎತ್ತಿಕೊಂಡಿವೆ.ಅವುಗಳ ನಿಯಂತ್ರಣ ಮಾಡಬೇಕಾದವರು ಕೈಕಟ್ಟಿಕೊಂಡು ಕುಳಿತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ.ಇದೆಲ್ಲದರ ನಡುವೆ ಕ್ಲಬ್ ನಡೆಸುವ ವ್ಯಕ್ತಿಯೊಬ್ಬ ಬಿಚ್ಚಿಟ್ಟ ಹಫ್ತಾ ರಹಸ್ಯ ಇಡೀ ಇಲಾಖೆಯನ್ನು ಬೆಚ್ಚಿ ಬೀಳಿಸುವಂತಿದೆ.ಪೊಲೀಸ್ ಆಯುಕ್ತರನ್ನು ಹೊರತುಪಡಿಸಿ ಕೆಲ…

Read More

ಏಸೀಲಿ ಸಭೆ ಬೇಡ – ಹೊಲದಲ್ಲೇ ತೀರ್ಮಾನ!”

ಹಿರೇಬಾಗೇವಾಡಿ ರೈತರ ಐತಿಹಾಸಿಕ ಘೋಷಣೆ: RCU ರಸ್ತೆ ವಿರುದ್ಧ ಕಠಿಣ ನಿಲುವು ಬೆಳಗಾವಿ:ಹಿರೇಬಾಗೇವಾಡಿ ರೈತರು ಮತ್ತೊಮ್ಮೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ (RCU) ವಿರುದ್ಧ ಸಿಡಿದೆದ್ದಿದ್ದಾರೆ. ಗುಡ್ಡದ ಮಲ್ಲಪ್ಪನ ಜಾಗೆಯ ಮೂಲಕ ವಿವಿಗೆ ಹೋಗುವ ರಸ್ತೆ ನಿರ್ಮಾಣದಲ್ಲಿ ರೈತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ, ರೈತರು ಅಭೂತಪೂರ್ವ ತೀರ್ಮಾನ ಕೈಗೊಂಡಿದ್ದಾರೆ . ನಮ್ಮ ಭೂಮಿಯ ವಿಚಾರ ಏಸಿ ಕೊಠಡಿಯಲ್ಲಿ ಅಲ್ಲ, ನಮ್ಮ ಹೊಲದ ಮಧ್ಯೆ ತೀರ್ಮಾನವಾಗಬೇಕು.ರೈತರ ಯಾವುದೇ ಪೂರ್ವಾನುಮತಿ ಇಲ್ಲದೇ ಇದ್ದ ರಸ್ತೆಯನ್ನು ಬಿಟ್ಟು, ಫಲವತ್ತಾದ ಜಮೀನಿನೊಳಗೆ…

Read More

ಸೈಕಲ್ ಫೇರಿ ಶಾಸಕನ ಅಸಲಿ‌ ಕಹಾನಿ..!

ಅಭಯ ಪಾಟೀಲರು ತಮ್ಮ ಕ್ಷೇತ್ರದ ಜನತೆಗೆ ನೀಡಿರುವ ಅತ್ಯಂತ ಅಮೂಲ್ಯ ಕೊಡುಗೆ ಎಂದರೆ – ಪ್ರತಿನಿಧಿತ್ವದ ಆಶಯವನ್ನು ಕೇವಲ ಚುನಾವಣಾ ಘೋಷಣೆಯಾಗಿ ಇರಿಸದೆ, ಅದನ್ನು ದೈನಂದಿನ ಜೀವನದ ಅಭ್ಯಾಸವಾಗಿ ಪರಿವರ್ತಿಸಿರುವ ಶೈಲಿ. ಅವರು ಸೈಕಲ್ ಸವಾರರಾಗಿ ಹಾದಿ ಹಿಡಿದರೂ, ಅವರು ಕಟ್ಟಿದ ನಂಬಿಕೆಯ ರಸ್ತೆ ಬಹುಶಃ ಅಕ್ಷರಶಃ ಭದ್ರತೆಗೂ, ಭವಿಷ್ಯಕ್ಕೂ ದಾರಿತೋರುತ್ತಿದೆ.* ಸೈಕಲ್ ಫೇರಿ ಶಾಸಕರ ಸಂದೇಶ: ಅಭಯ ಪಾಟೀಲ ಜನಮೆಚ್ಚಿದ ರಾಜಕಾರಣದ ವಿಶೇಷ.. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅಭಯ ಪಾಟೀಲ ಎಂಬ ಹೆಸರು ಕೇಳಿದಾಗಲೇ ಎರಡು…

Read More

ಪಿಕೆಗಳ ಕಣ್ಣೀರ ಕಥೆ ಕೇಳೊರ್ಯಾರು?

ಬೆೆಳಗಾವಿ.ಸಧ್ಯದ ಪರಿಸ್ಥಿತಿಯಲ್ಲಿ ಬೆಳಗಾವಿ ಪಾಲಿಕೆಯಲ್ಲಿ 138 ಎನ್ನುವ ಶಬ್ದ ಕೇಳಿದಾಕ್ಷಣ ಕೆಲವರಿಗೆ ಒಂದು ರೀತಿಯ ಭಯ ಶುರುವಾಗಿದೆ,ಈ 138 ರ ಹಿಂದಿನ ಕಥೆಯನ್ನು ಕೇಳಿದರೆ ಅಯ್ಯೋ ಅನಿಸದೇ ಇರದು, ಅಂದ ಹಾಗೆ ಇಷ್ಟು ಸಂಖ್ಯೆಯಲ್ಲಿ ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಗೋಳು ಕೇಳಿದರೆ ಕರುಳು ಚುರ್ ಎನ್ನುತ್ತದೆ, ಕಳೆದ ಸುಮಾರು ಎರಡು ತಿಂಗಳಿಂದ ಅವರು ನಿತ್ಯ ಕೆಲಸ ನಿರ್ವಹಿಸಿದರೂ ಕೂಡ ಅವರು ಸಂಬಳಕ್ಕಾಗಿ ಪರದಾಟ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ,ಇಲ್ಲಿ 138 ಜನ ಪಿಕೆಗಳ ನೇಮಕಾತಿಯಲ್ಲಿಯೇ…

Read More

ಒಂದೇ ದಿನದಲ್ಲಿ ಕಳ್ಳನನ್ನು ಬಂಧಿಸಿದ ಖಾಕಿ ಪಡೆ- ಭೇಷ ಎಂದ ಆಯುಕ್ತರು

ಬೆಳಗಾವಿ. ಸರಗಳ್ಳನೊಬ್ಬನನ್ನು ಬಂಧಿಸಿದ ಶಹಾಪುರ ಪೊಲೀಸರು ಸುಮಾರು‌4 ಲಕ್ಷ 47 ಸಾವಿರ ರೂ ಮೌಲ್ಯದ ಚಿನ್ನದ ಸರಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಕಳೆದ ದಿನವಷ್ಟೆ ಬಂಧಿತ ಕಳ್ಳ ಮಹಿಳೆಯ ಕೊರಳಲ್ಲಿನ ಚಿನ್ಬದ ಸರವನ್ನು ದೋಚಿ ಫರಾರಿಯಾಗಿದ್ದನು.ಈ ಪ್ರಕರಣವನ್ನು ಬೆನ್ನಟ್ಟಿದ ಶಹಾಪುರ ಪೊಲೀಸರು ಸಂಗಮೇಶ್ವರ ನಗರದ ಸಮಾನ ಅಹ್ಮದ ರಿಯಾಜ ಅಹ್ಮದ ನಕ್ಕರಚಿ ಎಂಬಾತನನ್ನು ಬಂಧಿಸಿದ್ದಾರೆ.ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ‌ಮತ್ತು ಎಸಿಪಿ ಮಾರ್ಗದರ್ಶನದಲ್ಲಿ ಶಹಾಪುರ ಸಿಪಿಐ ಎಸ್.ಎಸ್.ಸೀಮಾನಿ ನೇತೃತ್ವದ ತಂಡಬಂಧಿಸಿದೆ

Read More

ಜೋಡಕುರಳಿಯಲ್ಲಿ ಬಿಜೆಪಿ ಪ್ರಚಾರ

ಜೋಡಕುರಳಿಚಿಕ್ಕೋಡಿಯ ಜೋಡಕುರಳಿ ಗ್ರಾಮದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರ ಪರವಾಗಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಪಕ್ಷದ ಪ್ರಮುಖರ ಸಭೆ‌ ನಡೆಸಿ, ಚುನಾವಣೆ ಪೂರ್ವತಯಾರಿ ಕುರಿತು ಸಭೆ ನಡೆಸಿ ಮಾತನಾಡಿದರು. ದೇಶದ ವಿಕಾಸಕ್ಕಾಗಿ ಕೇಂದ್ರದ ಮೋದಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಈ ಯೋಜನೆಗಳಿಂದಾಗಿ ಜನರ ಜೀವನ ಉಜ್ವಲವಾಗಿದೆ. ಮುಂದೆಯೂ ಕೂಡ ಸುವರ್ಣ ಯುಗ ಕಾಣಬೇಕಾದಲ್ಲಿ ನರೇಂದ್ರ ಮೋದಿಜಿ ಅವರು ಮತ್ತೊಮ್ಮೆ…

Read More

ಕಡಾಡಿ ಹೋರಾಟ- ಕಾರ್ಮಿಕರಿಗೆ ಆಶಾದೀಪ!

ಬೆಳಗಾವಿಗೆ ಮತ್ತೆ ಉಸಿರು:100 ಹಾಸಿಗೆಗಳ ಇ.ಎಸ್.ಐ.ಸಿ. ಆಸ್ಪತ್ರೆಗೆ ಕೇಂದ್ರದ ಮರು ಟೆಂಡರ್ ಅನುಮೋದನೆ ಬೆಳಗಾವಿ ಗಡಿನಾಡು ಬೆಳಗಾವಿ ಜಿಲ್ಲೆಯ ಕಾರ್ಮಿಕರ ಸಮುದಾಯಕ್ಕೆ ಬಹುಪಾಲು ನಿರೀಕ್ಷಿತವಾಗಿದ್ದ 100 ಹಾಸಿಗೆಗಳ ಇ.ಎಸ್.ಐ.ಸಿ ಆಸ್ಪತ್ರೆ ಯೋಜನೆಗೆ ಕೊನೆಗೂ ಜೀವ ಬಂದಿದೆ ! ಎರಡು ವರ್ಷಗಳ ರಾಜ್ಯದ ನಿರ್ಲಕ್ಷ್ಯವೊಂದೇ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯನ್ನು ಗಾಳಿಗೆ ಎಸೆದಂತಾಗಿತ್ತು. ಆದರೆ, ಇತ್ತೀಚೆಗೆ ಮರು ಟೆಂಡರ್ಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್ ಬಂದಿದೆ. ಇದರಿಂದ ಜನರ ಆರೋಗ್ಯದ ಹಕ್ಕಿಗೆ ಹೊಸ ಬೆಳಕಿನ ಕಿರಣವಾಗಿದೆ. ನಿರ್ಲಕ್ಷ್ಯದಿಂದ ನಿರ್ಣಯದವರೆಗೆ… 2023ರ…

Read More

ಮೋದಿ ದಾರಿಯಲ್ಲಿ ಬೆಳಗಾವಿ ಹಿರೇಮಠ

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಚ ಭಾರತದ ಕಲ್ಪನೆಯಂತೆ ಬೆಳಗಾವಿ ಸರ್ವಲೋಕಾ ಸೇವಾ ಫೌಂಡೇಶನ್ ಸಂಸ್ಥಾಪಕ, ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ನೇತೃತ್ವದಲ್ಲಿ ಮುಕ್ಕಾದ ದೇವರ ಫೋಟೋಗಳನ್ನು ಗಿಡ, ಮರಗಳ ಕೆಳಗಡೆ ಇಡುವ ಬದಲು ಶಾಸ್ತ್ರೋಕ್ತವಾಗಿ ಅದನ್ನು ವಿಸರ್ಜನೆ ಮಾಡಬೇಕೆಂದು ಜನರಲ್ಲಿ ಜಾಗೃತಿ‌ ಮೂಡಿಸಿ ನಗರದ ಪ್ರಮುಖ ಸ್ಥಳಗಳಲ್ಲಿ ಬಿತ್ತಿ ಪತ್ರ ಹಚ್ಚುವ ಮೂಲಕ ಮಾದರಿಯಾಗಿದ್ದಾರೆ. ದೇವರ ಫೋಟೋಗಳನ್ನು ಖುಷಿಯಿಂದ ತಂದು ‌ಮನೆಯಲ್ಲಿ ಪೂಜೆ ಮಾಡುವುದು ಸರ್ವೇಸಾಮಾನ್ಯ. ಆದರೆ ಅದೇ ಫೋಟೋ ಮುಕ್ಕಾದಾಗ ಅದನ್ನು ಮರ,…

Read More
error: Content is protected !!