ಪತ್ರಕರ್ತರು ಸಾಮಾಜಿಕಕಳಕಳಿ ಹೊಂದಬೇಕು..!
ಬೆಳಗಾವಿ.ಪತ್ರಕರ್ತರು ಸುದ್ದಿಯ ವಾಸ್ತವ ಅಂಶವನ್ನು ಗುರುತಿಸಿ ಪ್ರಕಟಿಸುವ ಮೂಲಕ ಸಾಮಾಜಿಕ ಕಳಕಳಿ ಹೊಂದಬೇಕು ಎಂದು ಶಾಸಕ ಆಸೀಫ್ ಶೇಠ ಹೇಳಿದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಸಂ ಯುಕ್ತಾಶ್ರಯದಲ್ಲಿ ನಡೆದ ಪತ್ರಕರ್ತರ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಪತ್ರಕರ್ತರು ಸಮಾಜದ ಕನ್ನಡಿಯಿದ್ದಂತೆ. ಜನತೆಗೆ ವರದಿ ನೀಡುವ ಮೂಲಕ ಅವರಲ್ಲಿ ಒಂದು ರೀತಿಯ ಜನಾಭಿಪ್ರಾಯ ಮೂಡಿಸಬಹುದು ಎಂದರು. ಪಾರದರ್ಶಕ ವರದಿಯ ಮೂಲಕ ಜನೆತೆಗೆ ಸತ್ಯಾಂಶವನ್ನು ತಿಳಿಸಿಕೊಡಬೇಕು. ಸತ್ಯ, ಸುಳ್ಳುಗಳನ್ನು ಪರಿಶೀಲಿಸಿ ವರದಿಗೆ ಮುಂದಾಗಬೇಕು…

