ಯಳ್ಳೂರು ಹೋರಾಟದ ಭೂಮಿ- ಪವಾರ್
ಬೆಳಗಾವಿ“ಯಳ್ಳೂರು’ ಕೇವಲ ಒಂದು ಗ್ರಾಮವಲ್ಲ, ಇದು ಹೋರಾಟದ ಭೂಮಿ, ಶೈಕ್ಷಣಿಕ ಕ್ರಾಂತಿಯ ಪುಟಗಳನ್ನು ಬರೆದ ಸ್ಥಳ ಎಂದು ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಹೇಳಿದರು. ಯಳ್ಳೂರಿನ ಸರ್ಕಾರಿ ಮರಾಠಿ ಮಾದರಿ ಶಾಲೆಯ ಶತಕೋತ್ತರ ಸುವರ್ಣ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.“ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಈ ಗ್ರಾಮಕ್ಕೆ ವಿಶೇಷ ಮಹತ್ವವಿತ್ತು. ಇಲ್ಲಿ ಜನರು ಅನ್ಯಾಯದ ವಿರುದ್ಧ ಧೈರ್ಯದಿಂದ ಎದ್ದು ನಿಂತರು. ಈ ಹೋರಾಟದ ಆತ್ಮವನ್ನೇ ಶಾಲೆಯು ತಮ್ಮ ಮಕ್ಕಳಿಗೆ ಶಿಕ್ಷಣ ರೂಪದಲ್ಲಿ ನೀಡಿತು ಎಂದರು. ಯಳ್ಳೂರಿನ…

