Headlines

ಕಾಂಗ್ರೆಸ್ ಇಬ್ಭಾಗದ ಭವಿಷ್ಯ ನುಡಿದ ಬೊಮ್ಮಾಯಿ

ನರೇಂದ್ರ ಮೋದಿ 3 ನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಒಂದು ತಿಂಗಳಲ್ಲಿ ಕಾಂಗ್ರೆಸ್ ಇಬ್ಬಾಗವಾಗಲಿದೆ: ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರ ಕಾಣೆಯಾಗಿದೆ:ಸಿಎಂ, ಸಚಿವರನ್ನು ಹುಡುಕಿಕೊಡಿ: ಬಸವರಾಜ ಬೊಮ್ಮಾಯಿ ಬೆಂಗಳೂರು: ನರೇಂದ್ರ ಮೋದಿಯವರು ಮೂರನೆ ಬಾರಿ ಪ್ರಧಾನಿಯಾದ ಒಂದು ತಿಂಗಳಲ್ಲಿ ಕಾಂಗ್ರೆಸ್ ದೇಶಾದ್ಯಂತ ಇಬ್ಬಾಗವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕರ್ನಾಟಕದ ಇತಿಹಾಸದಲ್ಲಿ ಇಷ್ಟು ದೊಡ್ಡ ನಾಟಕ ಮಾಡುವ…

Read More

ದಲಿತ ಮಹಿಳೆ 3 ತಾಸು ಮೆರವಣಿಗೆ- ಕಣ್ಮುಚ್ಚಿದ ಖಾಕಿ

ಬೆಳಗಾವಿ. ಪೊಲೀಸ್ ಠಾಣೆಯಿಂದ ಕೇವಲ ಒಂದುವೆರೆ ಕಿಲೋಮೀಟರ ಅಂತರದಲ್ಲಿ ನಡೆದ ಅಮಾನವೀಯ ಘಟನೆಯನ್ನು ಕಙಡು ಇಡೀ ರಾಜ್ಯ ಬೆಚ್ಚಿಬಿದ್ದಿದೆ. ಇಂತಹ ಘಟನೆ ಎಲ್ಲೋ ದಟ್ಟಡವಿಯಲ್ಲಿ ನಡೆದಿದ್ದರೆ ಅದು ಪೊಲೀಸರಿಗೆ ಗೊತ್ತಾಗಲಿಲ್ಲ ಅನಬಹುದಿತ್ತು. ಆದರೆ ಘಟಪ್ರಭಾದ ಮುಖ್ಯ ರಸ್ತೆ ಅದರಲ್ಲೂ ಠಾಣೆಯಿಂದ ಕೂಗಳತೆ ಅಂತರದಲ್ಲಿ ದಲಿತ ಮಹಿಳೆಗೆ ಚಪ್ಪಲಿ ಹಾರ ಹಾಕಿ ಘೋಷಣೆ ಕೂಗುತ್ತ ಹೋದರೂ ಪೊಲೀಸರ ಗಮನಕ್ಕೆ ತುರ್ತಾಗಿ ಬರಲಿಲ್ಲ ಅಂದರೆ ವ್ಯವಸ್ಥೆ ಯಾವ ಮಟ್ಟಕ್ಕೆ ಹೋಗಿದೆ ಎನ್ನುವುದು ಗೊತ್ತಾಗುತ್ತದೆ. ಕಿಡಿಗೇಡಿಗಳ ಉರವಣಿಗೆ 3 ತಾಸು.. ದಲಿತ…

Read More

ವಿಜನ್ ಕರ್ನಾಟಕ 2025′”ಈ ಪ್ರದರ್ಶನ ಜ್ಞಾನದ ಜಾತ್ರೆ : -ಜಗದೀಶ ಶೆಟ್ಟರ್

‘ ಸಂಭ್ರಮದಲ್ಲಿ ಮೇಘಾ ಪ್ರದರ್ಶನದ ಉದ್ಘಾಟನೆ: ಮೊದಲನೆ ದಿನ ಬೆಳಗಾವಿಯಲ್ಲಿಯ ವಿವಿಧ ಶಾಲಾ ಮಹಾವಿದ್ಯಾಲಯಗಳಿಂದ ಐದು ಸಾವಿರ ವಿದ್ಯಾರ್ಥಿಗಳು ಭೇಟಿ ಕೊಟ್ಟರು. ಬೆಳಗಾವಿ ಪ್ರದರ್ಶನಗಳು ಜಾತ್ರೆಯಂತಿರುತ್ತವೆ. ಹೊಸದನ್ನು ನೋಡಲು ಜನರು ಮುಗಿಬೀಳುತ್ತಾರೆ. ಆದರೆ, ನಾವು ದಿಲ್ಲಿಯಲ್ಲಿಯ ‘ಪ್ರಯಾಶ ಎಕ್ಸಿಬಿಷನ್ ಆ್ಯಂಡ್ ಪ್ರಮೋಶನ’ ಇವರ ಸಹಕಾರದಿಂದ ಹಮ್ಮಿಕೊಂಡ ಈ ‘ವಿಜನ್ ಕರ್ನಾಟಕ 2025’ಪ್ರದರ್ಶನ ಎಂದರೆ ಜ್ಞಾನದ ಜಾತ್ರೆಯಾಗಿದೆ ಎಂದು ಸಂಸದರಾದ ಜಗದೀಶ ಶೆಟ್ಟರರು ಅಭಿಪ್ರಾಯಪಟ್ಟರು. ಇಲ್ಲಿಯ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಕನ್ವೆನ್ನನ ಸೆಂಟರನಲ್ಲಿ ಆಯೋಜಿಸಲಾಗಿದ್ದ ವಿಜನ್ ಕರ್ನಾಟಕ 2025…

Read More

ಭಗವದ್ಗೀತೆ ಒಂದು ಜ್ಞಾನ ಜ್ಯೋತಿ –

ಭಗವದ್ಗೀತೆ ಒಂದು ಜ್ಞಾನ ಜ್ಯೋತಿ – ಸ್ವರ್ಣವಲ್ಲೀ ಸ್ವಾಮೀಜಿಹುಕ್ಕೇರಿ : ಭಗವದ್ಗೀತೆ ಒಂದು ಜ್ಞಾನ ಜ್ಯೋತಿ. ಒಂದೊಂದು ಸಾಲು ಕೂಡ ಜ್ಞಾನದ ಒಂದೊಂದು ಕಿಡಿಯನ್ನು ಹೊತ್ತಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.ಭಗವದ್ಗೀತೆಯ ಹಿನ್ನೆಲೆಯಲ್ಲಿ ಹುಕ್ಕೇರಿಯಲ್ಲಿ ಶನಿವಾರ ಸಂಜೆ ಅವರು ಪ್ರವಚನ ನೀಡುತ್ತಿದ್ದರು. ಭಗವದ್ಗೀತೆಯ ಅನುಭವವಾಗಲು ನಾವು ಸಾಕಷ್ಟು ಓದಿರಬೇಕು. ಮನಸ್ಸು ಏನೇನೋ ಲೇಪವನ್ನು ಮೆತ್ತಿಕೊಂಡಿರುತ್ತದೆ. ಆ ಲೇಪವನ್ನು ಕಡಿಮೆ ಮಾಡಿದಾಗ ಜ್ಞಾನದ ಅನುಭವವಾಗುತ್ತದೆ ಎಂದ ಅವರು, ಭಗವದ್ಗೀತೆ ಎಂದರೆ ಭಗವಂತನ…

Read More

ವಿದ್ಯಾರ್ಥಿ ಪೊಲೀಸ್ ವಿನೂತನ ಯೋಜನೆ

ಬೆಳಗಾವಿ . ಗಡಿನಾಡ ಬೆಳಗಾವಿ ಪೊಲೀಸ್ ಆಯುಕ್ತ ಎಸ್.ಎನ್‌. ಸಿದ್ರಾಮಪ್ಪ ಅವರು ವಿದ್ಯಾರ್ಥಿ ಪೊಲೀಸ್ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಪೊಲೀಸ ಮಹಾನುರ್ದೇಶಕರ ಸೂಚನೆ ಹಿನ್ನೆಲೆಯಲ್ಲಿ ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದು 30 ದಿನಗಳ ಕಾಲಾವಧಿ ಹೊಂದಿದೆ.,ಅದರಲ್ಲಿ 15 ದಿನ ಠಾಣೆಯಲ್ಲಿ ಪೊಲೀಸ್ ಕಾನೂನುಗಳು ಹಾಗೂ ಠಾಣೆಯ ದಿನನಿತ್ಯದ ಚಟುವಟಿಕೆಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಹಾಗೂ 5 ದಿನ ನಗರದಲ್ಲಿರುವ ವಿವಿಧ ಪೊಲೀಸ್ ಸಂಬಂಧಿತ ಕಚೇರಿಗಳ ಭೇಟಿಯೊಂದಿಗೆ ನಗರದ ಸಿಸಿಆರ್ಬಿ ಕಂಟ್ರೋಲ್…

Read More

ಬೆಳಗಾವಿ ಪಾಲಿಕೆ- 25 ಭ್ರಷ್ಟರಿಗೆ ಪ್ರಾಸಿಕ್ಯೂಶನ್ ಬಿಸಿ

ಬೆಳಗಾವಿ ಪಾಲಿಕೆ25 ಭ್ರಷ್ಟರಿಗೆ ಪ್ರಾಸಿಕ್ಯೂಶನ್ ಬಿಸಿ 25 ಮಂದಿಗೆ ಲೋಕಾಯುಕ್ತರ ಬಿಸಿ ಬಲೆ!? ಬೆಳಗಾವಿ:ವೆಗಾ ಕಂಪನಿಯ ತೆರಿಗೆ ವಂಚನೆ ಪ್ರಕರಣ ಇದೀಗ ಕೇವಲ ಆರ್ಥಿಕ ಹಗರಣ ಮಾತ್ರವಲ್ಲ, ಬೆಳಗಾವಿ ಪಾಲಿಕೆಯ ಭ್ರಷ್ಟಾಚಾರದ ಗೂಡು ಬಯಲಿಗೆಳೆಯುವ ಪ್ರಚಂಡ ಕಾನೂನು ಹೋರಾಟದ ದಾರಿಯಾಗಿದೆ. ಲೋಕಾಯುಕ್ತರು ಸರ್ಕಾರಕ್ಕೆ 25 ಮಂದಿಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿರುವ ಬೆಳವಣಿಗೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಇದರಲ್ಲಿ ಹಾಲಿ ಅಧಿಕಾರಿಗಳ ಜೊತೆಗೆ ನಿವೃತ್ತರು, ವರ್ಗಾವಣೆಗೊಂಡ ಅಧಿಕಾರಿಗಳೂ ಸೇರಿರುವುದು ವಿಷಯದ ಗಂಭೀರತೆಯನ್ನು ಇನ್ನಷ್ಟು ಗಾಢಗೊಳಿಸಿದೆ. ಇದು…

Read More

ಮಚ್ಚೆಯಲ್ಲಿ ರಾಯಣ್ಣ ಪ್ರತಿಮೆಗೆ ಅವಮಾನ

ಮಚ್ಚೆೆಯಲ್ಲಿ ಕ್ರಾಂತಿವೀರರ ಪ್ರತಿಮೆಗೆ ಅವಮಾನ. ಕಪ್ಪು ಆಯಿಲ್ ಸುರಿದು ಕಿಡಿಗೇಡಿಗಳ ಕೃತ್ಯ; ಕನ್ನಡ ಪರ ಸಂಘಟನೆಗಳ ಆಕ್ರೋಶ. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸ್. ಬೆಳಗಾವಿ: ತಾಲೂಕಿನ ಮಚ್ಚೆ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಕಿಡಿಗೇಡಿಗಳು ಕಪ್ಪು ಬಣ್ಣದ ಆಯಿಲ್ ಸುರಿದು ಅವಮಾನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದೆ.ಪ್ರತಿಮೆಯ ಮೇಲೆ ಕಪ್ಪು ಬಣ್ಣ ಹಚ್ಚಿರುವುದು ಸ್ಥಳೀಯರ ಗಮನಕ್ಕೆ ಬಂದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ನಗರ…

Read More

Feb 15 ಕ್ಕೆ ಮೇಯರ್ ಚುನಾವಣೆ

ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ‌ಮತ್ತು ಉಪಮೇಯರ್ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಬರುವ ಫೆಬ್ರವರಿ 15 ರಂದು ಚುನಾವಣೆ ನಡೆಯಲಿದೆ. ಚುನಾವಣೆ ಅಧಿಕಾರಿಗಳು ಆಗಿರುವ ಪ್ರಾದೇಶಿಕ ಆಯುಕ್ತರು ಈ ಕುರಿತು ಆದೇಶ ಮಾಡಿದ್ದಾರೆಂದು ಮೂಲಗಳು ಖಚಿತಪಡಿಸಿವೆ. ಇನ್ನು ಇವತ್ತು ಅಥವಾ ನಾಳೆ ಪಾಲಿಕೆಯ ಎಲ್ಲ ನಗರಸೇವಕರಿಗೆ ನೋಟೀಸ್ ಕಳಿಸುವ ಕೆಲಸ ಆಗಬಹುದು. ಮೇಯರ್ ಸ್ಥಾನ ಎಸ್ಸಿ ಮಹಿಳೆ ಮತ್ತು ಉಪಮೇಯರ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಇದು ಬಿಜೆಪಿ ಅವಧಿಯ ಎರಡನೇ ‌ಮೇಯರ….

Read More

ರಾಹುಲ್ ಗೆ ಭರ್ಜರಿ ಗೆಲುವು

ಬೆಳಗಾವಿ : ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ಚುನಾವಣಾ ಫಲಿತಾಂಶ ಬಂದಿದ್ದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಭರ್ಜರಿ ಜಯ ಸಾಧಿಸಿದ್ದಾರೆ. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ 1 ಲಕ್ಷ 20 ಸಾವಿರ ಮತಗಳ ಅಂತರದಿಂದ ಬೃಹತ್ ಅಂತರದ ಗೆಲುವು ಸಾಧಿಸಿದ್ದು, ಇವರ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ರಾಹುಲ್‌ ಜಾರಕಿಹೊಳಿ ಗೆಲುವಿನ ಹಿನ್ನಲೆಯಲ್ಲಿ ಗೋಕಾಕ್ ನಲ್ಲಿ ಅವರ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು.

Read More

ತೋಟಿಗೇರ್, ದೊಡಮನಿಗೆ ಸನ್ಮಾನ

ಬೆಳಗಾವಿ. ಮಹಾನಗರ ಪಾಲಿಕೆಯಲ್ಲಿ ಕನ್ನಡ ಅನುಷ್ಠಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ನಗರದ ಇಬ್ಬರನ್ನು ಕನ್ನಡ ಜಾಗೃತ‌ ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಕ‌ ಮಾಡಿದೆ. ಹಿರಿಯ ನ್ಯಾಯವಾದಿಗಳೂ ಆಗಿರುವ ಬೆಳಗಾವಿ ಪತ್ರಕರ್ತ ಸಂಘ( ಮುದ್ರಣ) ದ ಕಾನೂನು‌ ಸಲಹೆಗಾರ‌ ರವೀಂದ್ರ ತೋಟಿಗೇರ ಮತ್ತು ಡಾ. K N DODDAMANI ಅವರನ್ನೂ ಸರ್ಕಾರ ನೇಮಕ‌ಮಾಡಿದೆ. ಈ ಹಿನ್ನೆಲೆಯಲ್ಲಿ ಕಳೆದ ದಿನ ಅವರನ್ನು ಪತ್ರಕರ್ತರ ಸಂಘದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಕಾಯಿತು. ಸಂಘದ ಅದ್ಯಕ್ಷ ವಿಲಾಸ ಜೋಶಿ, ರವಿ ಉಪ್ಪಾರ, ರಾಜು…

Read More
error: Content is protected !!