ಅಗ್ನಿ ದುರಂತ- ಧೈರ್ಯ ತುಂಬಿ ಸಾಂತ್ವನ‌ ಹೇಳಿದ ಶೆಟ್ಟರ್.

ನಾವಗೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆಗೆ ಹಾಗೂ ಮೃತ ಯಲ್ಲಪ್ಪ ಗುಂಡ್ಯಾಗೋಳ ಮನೆಗೆ ಭೇಟಿ ನೀಡಿದ ಸಂಸದ ಜಗದೀಶ ಶೆಟ್ಟರ ಬೆಳಗಾವಿ : ನಾವಗೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಇಂದು ಕಾರ್ಖಾನೆಗೆ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಭೆಟ್ಡಿ ನೀಡಿದರು. ನೀಡಿದ ಈ, ಸಂಬಂಧಿಸಿದಂತೆ ಮಾಲಿಕರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿ, ಸಂಪೂರ್ಣ ಮಾಹಿತಿ ಪಡೆದು, ಈ ರೀತಿ ಮತ್ತೆ ಅವಘಡಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಮತ್ತು ಕಾರ್ಮಿಕರ…

Read More

ತೆಲಸಂಗನಲ್ಲಿ ಸಚಿವ ಸ‌ತೀಶ್ ಜಾರಕಿಹೊಳಿ ಭರ್ಜರಿ ಪ್ರಚಾರ

ತೆಲಸಂಗನಲ್ಲಿ ಸಚಿವ ಸ‌ತೀಶ್ ಜಾರಕಿಹೊಳಿ ಭರ್ಜರಿ ಪ್ರಚಾರ ದೇಶದಲ್ಲಿ ಡ್ಯಾಮ್ ಗಳನ್ನು ಕಟ್ಟಿದ್ದು, ಹೆಚ್ಚು ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ್ದು ಕಾಂಗ್ರೆಸ್‌ ಪಕ್ಷವೇ: ಸಚಿವ ಸತೀಶ್‌ ಜಾರಕಿಹೊಳಿ ಅಥಣಿ: ಬ್ರಿಟಿಷರು ಭಾರತ ಬಿಟ್ಟು ಹೋದ ಬಳಿಕ ಕಾಂಗ್ರೆಸ್ ಪಕ್ಷದ ಸರ್ವ ಪ್ರಧಾನಿಗಳು ದೇಶದಲ್ಲಿ ಡ್ಯಾಮ್ ಗಳನ್ನು ನಿರ್ಮಿಸಿದರು. ನೀರಾವರಿ ಯೋಜನೆಗಳಿಗೂ ಆದ್ಯತೆ ನೀಡಿದರು. ಆದರೆ ಬಿಜೆಪಿಯವರು ಒಂದೇ ಒಂದು ಡ್ಯಾಮ್‌ನ್ನು ದೇಶದಲ್ಲಿ ನಿರ್ಮಿಸಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಅಥಣಿ ತಾಲೂಕಿನ…

Read More

ಬಿಸಿಯೂಟ ಕಾರ್ಯಾಗಾರ ಯಶಸ್ವಿ

ಯಶಸ್ವಿಯಾದ ಬಿಸಿಯೂಟದ ಕಾರ್ಯಾಗಾರ: ವಿವಿಧ ಗಣ್ಯರಿಂದ ಶ್ಲಾಘನೆಗೆ ಬೆಳಗಾವಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಾಯದಿಂದ ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕಾಹಾರ ದೊರೆಯುತ್ತಿರುವುದು ಅಭಿಮಾನದ ಸಂಗತಿ ಎಂದು ಕರ್ನಾಟಕ ರಾಜ್ಯ ಬಿಸಿಯೂಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಮಂಗಳವಾರ ಇಲ್ಲಿನ ಕಾಲೇಜು ರಸ್ತೆಯ ಹೋಟೆಲ್ ಒಂದರಲ್ಲಿ ಜರುಗಿದ ಕರ್ನಾಟಕ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಬೆಂಗಳೂರು ಇದರ ಪ್ರಥಮ ವಾರ್ಷಿಕೋತ್ಸವದ ಸವಿ ನನೆನಪಿನಲ್ಲಿ ಪ್ರಧಾನ…

Read More

ಮಧ್ಯಪ್ರದೇಶ ಸಿಎಂರಿಂದ ಹಾರನಹಳ್ಳಿಯವರಿಗೆ ಆಹ್ವಾನ

ಏಕಾತ್ಮಧಾಮ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ‌ ಸಿಎಂ. ಸೆ. 18 ರಂದು ನಡೆಯುವ ಕಾರ್ಯಕ್ರಮ. ಮಧ್ಯಪ್ರದೇಶ ಸಿಎಂ ರಿಂದ ಹಾರನಹಳ್ಳಿಯವರಿಗೆ ಪತ್ರ.. ಮಧ್ಯಪ್ರದೇಶ. ಅಖಿಲ‌ ಕರ್ನಾಟಕ‌ ಬ್ರಾಹ್ಮಣ ಮಹಾಸಭಾ ಆದ್ಯಕ್ಷರೂ‌ ಆಗಿರುವ ಹಿರಿಯ ನ್ಯಾಯವಾದಿ ಅಶೋಕ ಹಾರನಹಳ್ಳಿಯವರಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜಸಿಂಗ್ ಚವ್ಹಾಣ ಆಮಂತ್ರಣ ನೀಡಿದ್ದಾರೆ.ಆದಿ ಶಂಕರಾಚಾರ್ಯರ ಜೀವನ ಮತ್ತು ದರ್ಶನವು ಅಸಂಖ್ಯಾತ ತಲೆಮಾರುಗಳ ಮೂಲಕ ಜಗತ್ತಿಗೆ ದಾರಿದೀಪವಾಗಿ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಮಧ್ಯಪ್ರದೇಶ ಸರ್ಕಾರವು ‘ಏಕಾತ್ಮ ಧಾಮ್’ ಎಂಬ ಹೆಸರಿನ ಏಕತೆಯ ಭವ್ಯವಾದ ಸಾರ್ವತ್ರಿಕ ಕೇಂದ್ರವನ್ನು ಸ್ಥಾಪಿಸಲು…

Read More

L and Tಗೆ 21 ಕೋಟಿ ದಂಡ

ದಂಡ ವಿಧಿಸಿದ ಮಹಾನಗರ ಪಾಲಿಕೆ. ಪಾಲಿಕೆ ಆಯುಕ್ತರ ದಿಟ್ಟ ನಿರ್ಧಾರ. ಬುದ್ದಿ ಹೇಳಿದರೂ ಸುಧಾರಿಸದ ಕಂಪನಿ. ಕಳಪೆ ಕಾಮಗಾರಿಯ ಆರೋಪ ಬೆಳಗಾವಿ.ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸದವರಿಗೆ ಸರಿಯಾದ ರೀತಿಯಲ್ಲಿ ಬುದ್ದಿ ಕಲಿಸುವ ಕೆಲಸವನ್ನು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಮಾಡಿದ್ದಾರೆ. ಬೆಳಗಾವಿಗೆ ನಿರಂತರ ಕುಡಿಯುವ ನೀರು ಪೂರೈಕೆ ಜವಾಬ್ದಾರಿ ಹೊತ್ತ ಎಲ್ ಆ್ಯಂಡ್ ಟಿ ಕಂಪನಿಗೆ ಮಹಾನಗರ ಪಾಲಿಕೆಯು ಬರೊಬ್ಬರಿ 21 ಕೋಟಿ 46 ಲಕ್ಷ ರೂ ದಂಡ ವಿಧಿಸಿದೆ. ನಿಗದಿತ ಅವಧಿಯಲ್ಲಿ ಗುರಿಸಾಧನೆ…

Read More

YOUTH v/s GARBAGE

ಬೆಳಗಾವಿ ಪಾಲಿಕೆ ವಿನೂತನ ಕಾರ್ಯಕ್ರಮ, ಸ್ವಚ್ಚತಾ ಅಭಿಯಾನದಲ್ಲಿ‌ ಆಯುಕ್ತರು, ಮೇಯರ್‌, ಉಪ‌ಮೇಯರ್, ಮೂವರು ಸ್ಥಾಯಿ ಸಮಿತಿ ಅಧ್ಯಕ್ಷರು ಭಾಗಿ ಸ್ಚಚ್ಚತಾ ಅಭಿಯಾನಕ್ಕೆ ಚಾಲನೆ. ಕೋಟೆ ಕೆರೆ ಆವರಣ ಸ್ವಚ್ಚಗೊಳಿಸಿದರು. ಬೆಳಗಾವಿ. ಸ್ವಚ್ಚ ಭಾರತ ಮಿಶನ್ ಅಡಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸ್ವಚ್ಚತಾ ಅಭಿಯಾನವನ್ನು ಆರಂಭಿಸಿತು.ಆಯುಕ್ತ ಅಶೋಕ‌ ದುಡಗುಂಟಿ, ಮಹಾಪೌರ ಶ್ರೀಮತಿ ಶೋಭಾ ಸೋಮನ್ನಾಚೆ, ಉಪ ಮೇಯರ್ ರೇಷ್ಮಾ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವಾಣಿ ಜೋಶಿ, ವೀಣಾ ವಿಜಾಪುರೆ, ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ, ಆರೋಗ್ಯ…

Read More

ಅಟಲ್ ಜೀ ನೆನಪು ಅಜರಾಮರ..!

ಬೆಳಗಾವಿ.ಮಾಜಿ ಪ್ರಧಾನಿ ಅಟಲ್ ಜೀ ಅವರ ನೆನಪುಗಳ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಅವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಜಿಲ್ಲೆಯ 70 ಕ್ಕೂ ಹೆಚ್ಚು ಹಿರಿಯ ಕಾರ್ಯಕರ್ತರ ಸನ್ಮಾನ ಕಾರ್ಯಕ್ರಮ ಇಂದಿಲ್ಲಿ ನಡೆಯಿತು.ಜಿಲ್ಲಾ ಬಿಜೆಪಿ ಆಯೋಜನೆ ಮಾಡಿದ್ದ ಈ ಕಾರ್ಯಕ್ರಮದಲ್ಲಿ ಎಲ್.ಇ.ಡಿ ಪರದೆ ಮೂಲಕ ಅಟಲ್ ಜೀ ರವರ ಬಾಲ್ಯಜೀವನ ದಿಂದ ರಾಜಕೀಯ ಜೀವನ ವರೆಗಿನ ಕಿರುಚಿತ್ರ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ವಿರಾಸತ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ,…

Read More

ರೈತರ ಹಿತಕ್ಕಾಗಿ ಪಾರದರ್ಶಕ ಆಡಳಿತ – ಹಳೆಯ ದಬ್ಬಾಳಿಕೆಗೆ ತೆರೆ- ಜೊಲ್ಲೆ

ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಚುನಾವಣೆ ಬಿರುಸಿಗೆ – ಜೊಲ್ಲೆ–ಜಾರಕಿಹೊಳಿ ಜಂಟಿ ಪ್ರಚಾರ “ಸೆ. 28ರಂದು ನಡೆಯುವ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ದಿ. ಅಪ್ಪಣ್ಣಗೌಡ ಪಾಟೀಲರ ಹೆಸರಿನಲ್ಲಿ ರಚಿಸಿರುವ ನಮ್ಮ ಪೆನಲ್ ಗೆ ಮತ ನೀಡಿ ಆಶೀರ್ವದಿಸಿ. ರೈತರ ಹಿತಕ್ಕಾಗಿ ಪಾರದರ್ಶಕ ಆಡಳಿತ ನೀಡುವುದೇ ನಮ್ಮ ಬದ್ಧತೆ.” ಬಾಲಚಂದ್ರ ಜಾರಕಿಹೊಳಿ, ಶಾಸಕ ಮತ್ತು  ಅಧ್ಯಕ್ಷರು, ಬೆಮ್ಯುಲ್ . ಬೆಳಗಾವಿ:ಹುಕ್ಕೇರಿ ತಾಲೂಕಿನಲ್ಲಿ ನಷ್ಟದಲ್ಲಿರುವ ಸಹಕಾರ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸಲು ಮತ್ತು ರೈತರ ಹಿತಾಸಕ್ತಿಯನ್ನು ಕಾಪಾಡಲು ಪಕ್ಷಾತೀತ-ಜಾತ್ಯಾತೀತ ವೇದಿಕೆಯಲ್ಲಿ…

Read More

ಕವಟಗಿಮಠ ಏನ್ ಹೇಳ್ತಾರೆ…?

ಕುತೂಹಲ ಕೆರಳಿಸಿದ ಸುದ್ದಿಗೋಷ್ಠಿ. ಶುಕ್ರವಾರ ಬೆಳಿಹ್ಗೆ 11 ಕ್ಕೆ ಹೊಟೇಲ್ ಸಂಕಮದಲ್ಲಿ ನಡೆಯಲಿರುವ ಸುದ್ದಿಗೋಷ್ಠಿ. ಕವಟಗಿಮಠ ಎಂ.ಪಿ ಚುನಾವಣೆ ಬಿಜೆಪಿ ಟಿಕೇಟ್ ಆಕಾಂಕ್ಷಿ. ಬೆಳಗಾವಿ. ಕೆಎಲ್ ಇ ಸಂಸ್ಥೆಯ ನಿರ್ದೇಶಕ, ವಿಧಾನ ಪರಿಷತ್ತಿನ ಮಾಜಿ ಸದಸ್ಯರೂ ಆಗಿರುವ ಮಹಾಂತೇಶ ಕವಟಗಿಮಠ ಶುಕ್ರವಾರ ಬೆಳಿಗ್ಗೆ ಕರೆದಿರುವ ಸುದ್ದಿಗೋಷ್ಠಿಯಲ್ಲಿ ಯಾವ ವಿಷಯ ಪ್ರಸ್ತಾಪಿಸಬಹುದು? ಇಂತಹುದೊಂದು ಕುತೂಹಲ ಬಹುತೇಕರಲ್ಲಿದೆ. ಬೆಳಗಾವಿ ಲೋಕಸಭೆ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿರುವ ಅವರು ಯಾವ ವಿಷಯವನ್ಬು ಪ್ರಸ್ತಾಪಿಸಬಹುದು ಎನ್ನುವ ಚರ್ಚೆ ಕೂಡ ನಡೆದಿದೆ.

Read More
error: Content is protected !!