‘ಕೈ ಕೊಟ್ಟವರ್ಯಾರು? ‘ಕಮಲ’ ಕೆಳಗಿಟ್ಟವರ್ಯಾರು?

ಬೆಳಗಾವಿ ರಾಜಕಾರಣವೇ ವಿಚಿತ್ರ ಚಿಕ್ಕೋಡಿಯಲ್ಲಿ ಕಮಲ ಬಿಟ್ಡು ಕೈಗೆ ಸಾಥ್ ಕೊಟ್ಡ ಬಿಜೆಪಿ ಮಾಜಿ ಶಾಸಕರು. ಜಾತ್ರೆ ನೆಪ. ಪ್ರಚಾರಕ್ಕೆ ಸಕ್ರೀಯವಾಗಿ ಧುಮುಕದ ಕಾರ್ಯಕರ್ತರು. ಕೆಲವೆಡೆ ಅಸಾಮಾಧಾನದಿಂದ ದೂರ ದೂರ..ಅರಭಾವಿ, ಗೋಕಾಕ, ಬೆಳಗಾವಿ ದಕ್ಷಿಣ ದಿಂದಲೇ ಬಿಜೆಪಿಗೆ ಭಾರೀ ಲೀಡ್ ಸಾಧ್ಯತೆ, ಸವದತ್ತಿ, ಬೈಲಹೊಂಗಲದಲ್ಲಿ ಕೈಗೆ ಮುನ್ನೆಡೆ ಸಂಭವ, ವಿಶೆಷ ವರದಿಬೆಳಗಾವಿ. ಲೋಕಸಮರ ಫಲಿತಾಂಶದ ಬಗ್ಗೆ ಜಿಲ್ಲೆಯ ಎರಡೂ ಕ್ಷೇತ್ರದ ಮತದಾರರ ನಾಡಿಮಿಡಿತ ಕೇಳಿದರೆ ಅಚ್ಚರಿ ಫಲಿತಾಂಶ ಗ್ಯಾರಂಟಿ. ಅಷ್ಟೇ ಅಲ್ಲ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ…

Read More

ಬೆಳಗಾವಿ ಪಾಲಿಕೆ- 25 ಭ್ರಷ್ಟರಿಗೆ ಪ್ರಾಸಿಕ್ಯೂಶನ್ ಬಿಸಿ

ಬೆಳಗಾವಿ ಪಾಲಿಕೆ25 ಭ್ರಷ್ಟರಿಗೆ ಪ್ರಾಸಿಕ್ಯೂಶನ್ ಬಿಸಿ 25 ಮಂದಿಗೆ ಲೋಕಾಯುಕ್ತರ ಬಿಸಿ ಬಲೆ!? ಬೆಳಗಾವಿ:ವೆಗಾ ಕಂಪನಿಯ ತೆರಿಗೆ ವಂಚನೆ ಪ್ರಕರಣ ಇದೀಗ ಕೇವಲ ಆರ್ಥಿಕ ಹಗರಣ ಮಾತ್ರವಲ್ಲ, ಬೆಳಗಾವಿ ಪಾಲಿಕೆಯ ಭ್ರಷ್ಟಾಚಾರದ ಗೂಡು ಬಯಲಿಗೆಳೆಯುವ ಪ್ರಚಂಡ ಕಾನೂನು ಹೋರಾಟದ ದಾರಿಯಾಗಿದೆ. ಲೋಕಾಯುಕ್ತರು ಸರ್ಕಾರಕ್ಕೆ 25 ಮಂದಿಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿರುವ ಬೆಳವಣಿಗೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಇದರಲ್ಲಿ ಹಾಲಿ ಅಧಿಕಾರಿಗಳ ಜೊತೆಗೆ ನಿವೃತ್ತರು, ವರ್ಗಾವಣೆಗೊಂಡ ಅಧಿಕಾರಿಗಳೂ ಸೇರಿರುವುದು ವಿಷಯದ ಗಂಭೀರತೆಯನ್ನು ಇನ್ನಷ್ಟು ಗಾಢಗೊಳಿಸಿದೆ. ಇದು…

Read More

ಶಾಂತಾಯಿ ಅಮ್ಮಂದಿರಿಗೆ ವಿಮಾನ ಯಾನ ಭಾಗ್ಯ..

ಶಾಂತಾಯಿ ವೃದ್ಧಾಶ್ರಮದ ದೊಡ್ಡ ಸಾಧನೆ. ವಿಜಯ ಮೋರೆ ಕಾರ್ಯ ಪ್ರಶಂಸನೀಯ. 30 ಜನ ವೃದ್ಧರು ಮುಂಬಯಿಗೆ.. ವಿಮಾನದಲ್ಲೇ ಸುತ್ತಾಟ. ಫೈವ್ ಸ್ಟಾರ್ ಹೊಟೇಲನಲ್ಲಿ ವಾಸ್ತವ್ಯ ಬೆಳಗಾವಿ: ನೀಲಿ ಆಗಸದಲ್ಲಿ ಮೋಡವನ್ನು ಬೇಧಿಸಿ ಮುಂದಕ್ಕೆ ಹೋಗುವ ವಿಮಾನಗಳನ್ನು ಕಂಡುಇಲ್ಲಿಂದ ಟಾಟಾ ಹೇಳಿದ್ದು ಬಹುಶಃ ನಾವ್ಯಾರೂ ಮರೆತಿಲ್ಲ. ಬಾಲ್ಯದ ಸುಮಧುರಕ್ಷಣಗಳಲ್ಲಿ ಇದು ಕೂಡಾ ಒಂದು. ಈಗಲೂ ಆಕಾಶದಲ್ಲಿ ವಿಮಾನ ಹಾರಾಟದ ಸದ್ದು ಜೋರಾಗಿ ಕೇಳಿದಾಗ ತಲೆ ಎತ್ತಿ ನಾವೂ ಅತ್ತ ಒಮ್ಮೆ ನೋಡೇ ನೋಡುತ್ತೇವೆ. . ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ…

Read More

16 ನಿಮಿಷದ 40 ಸೆಕೆಂಡಿನ ಆಡಿಯೋದಲ್ಲಿ ಏನಿದೆ ಗೊತ್ತಾ?

ಹಲ್ಲೆಗೊಳಗಾದ ದಲಿತ ಮಹಿಳೆ ಆ16 ನಿಮಿಷ 40 ಸೆಕೆಂಡಿನ ಅಡಿಯೋದಲ್ಲಿ ಹೇಳಿದ್ದೇನು? ಎಸ್ಪಿ ಅವರು ಮಹಿಳೆಗೆ ರಕ್ಷಣೆ ಕೊಡಿ ಅಂತ ನಿರ್ದೇಶನ ನೀಡಿದರೂ ಸಿಪಿಐ ರಕ್ಷಣೆ ಏಕೆ ಕೊಡಲಿಲ್ಲ ಏಕೆ? ಘಟಪ್ರಭಾ ಸಿಪಿಐ ನಾಲ್ಕು ಬಿಳಿ ಖಾಲಿ ಹಾಳೆಯ ಮೇಲೆ ಅವಸರದಲ್ಲಿ ಸಹಿ ಮಾಡಿಸಿಕೊಂಡಿದ್ದೇಕೆ? ಪೊಲೀಸ್ ಸಮ್ಮುಖದಲ್ಲಿಯೇ ಮಹಿಳೆಯನ್ನು ಎಳೆದಾಡಿದ್ರಾ? ದಲಿತ ಮಹಿಳೆ ಮೇಲೆ ಇಷ್ಟೆಲ್ಲ ಕ್ರೌರ್ಯ ನಡೆದರೂ ಮಹಿಳಾ ಆಯೋಗ ಯಾಕೆ ವಿಚಾರಣೆ ಮಾಡುತ್ತಿಲ್ಲ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಏನ್ ಮಾಡ್ತಿದೆ.? ತುಟಿ…

Read More

ಬೆಳಗಾವಿ ಪಾಲಿಕೆಯಲ್ಲಿ 7 ಕೋಟಿ ತೆರಿಗೆ ವಂಚನೆ: ಲೋಕಾಯುಕ್ತ ತನಿಖೆಗೆ ದಾರಿ

ಬೆಳಗಾವಿ ಪಾಲಿಕೆಯಲ್ಲಿ 7 ಕೋಟಿ ತೆರಿಗೆ ವಂಚನೆ: ಲೋಕಾಯುಕ್ತ ತನಿಖೆಗೆ ದಾರಿ. ನಕಲಿ ಅಂಗವಿಕಲತೆ ಪ್ರಮಾಣ ಪತ್ರ ಕೊಟ್ಟು ನೌಕರಿ ಗಿಟ್ಟಿಸಿದವರ ಬಗ್ಗೆಯೂ ವಿಚಾರಣೆ? ನಿಯಮ ಉಲ್ಲಂಘಿಸಿದ ಬಹುಮಹಡಿ ಕಟ್ಟಡಗಳಿಗೆ ಸಿಸಿ ನೀಡಿದ ಟಿಪಿಓ ಸೆಕ್ಷನ್ ಬಗ್ಗೆ ವಿಚಾರಣೆ ನಡೆಸುವ ಸಾದ್ಯತೆ? ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ (BMP) ಆಯುಕ್ತೆ ಶುಭ ಬಿ. ಅವರಿಂದ ಲೋಕಾಯುಕ್ತ ಕಚೇರಿಗೆ ಹೋಗಿರುವ ಪತ್ರ, ರೂ.೭.೦೮ ಕೋಟಿ ತೆರಿಗೆ ವಂಚನೆಯ ಗಂಭೀರ ಆರೋಪಗಳನ್ನು ಬೆಳಕಿಗೆ ತಂದಿದೆ. ೨೦೦೨-೦೩ರಿಂದ ಸುತ್ತಿಬಂದ ಈ…

Read More

ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ- Priyanka

ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಬೆಳಗಾವಿ: ಚಿಕ್ಕೋಡಿ ಲೋಕಸಭೆಯ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಮತದಾರರಲ್ಲಿ ಮನವಿ ಮಾಡಿದರು. ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಕುಡಚಿ ಗ್ರಾಮೀಣ ಹಾಗೂ ಆಲಖನೂರ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮತಯಾಚಿಸಿ, ಮಾತನಾಡಿದ ಅವರು, ಚಿಕ್ಕೋಡಿ ಲೋಕಸಭೆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವುದೇ ನನ್ನ ಕನಸಾಗಿದೆ ಎಂದು ತಿಳಿಸಿದರು….

Read More

ಈಶ್ವರಪ್ಪ ಮನವೊಲಿಕೆ ವಿಶ್ವಾಸ- ಬೊಮ್ಮಾಯಿ

ಈಶ್ವರಪ್ಪ ಮನವೊಲಿಕೆ ಆಗುವ ವಿಶ್ವಾಸವಿದೆ: ಬಸವರಾಜ ಬೊಮ್ಮಾಯಿ ಕ್ಷೇತ್ರ ಬದಲಾವಣೆ ಆಗುವ ಬಗ್ಗೆ ಮಾಹಿತಿ ಇಲ್ಲ: ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ: ಮಾಜಿ ಡಿಸಿಎಂ ಅವರ ಮನವೊಲಿಕೆಗೆ ರಾಷ್ಟ್ರೀಯ ನಾಯಕರು ಅವರೊಂದಿಗೆ ಮಾತನಾಡುತ್ತಿದ್ದಾರೆ. ಅವರ ಮನವೊಲಿಕೆ ಆಗುತ್ತದೆ ಎಂದು ಮಾಜಿ ಸಿಎಮ್ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿಯ ಆದರ್ಶನಗರದ ನಿವಾಸದ ಬಳಿ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರು ಈಶ್ವರಪ್ಪ ನವರ ಮನವೊಲಿಕೆ ಮಾಡುತ್ತಿದ್ದಾರೆ. ಅವರ ಮನವೊಲಿಕೆ ಆಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ‌…

Read More

ಸಿ.ಟಿ. ರವಿ ಬೆಳಗಾವಿ ಪ್ರವೇಶ: ಹಿಂದಿನ ರಾಜಕೀಯ ಲೆಕ್ಕಾಚಾರ ಏನು?

ಸಿ.ಟಿ. ರವಿ ಬೆಳಗಾವಿ ಪ್ರವೇಶ:ಹಿಂದಿನ ರಾಜಕೀಯ ಲೆಕ್ಕಾಚಾರ ಏನು? ಬೆಳಗಾವಿ.ರಾಜಕೀಯದಲ್ಲಿ ಕೆಲವೊಂದು ಪ್ರವೇಶಗಳು ಸಾಮಾನ್ಯ ಪ್ರವೇಶವಾಗುವುದಿಲ್ಲ. ಒಂದು ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಪ್ರದೇಶಕ್ಕೆ ರಾಜಕೀಯ ನಾಯಕರ ಭೇಟಿ ಸಾಂದರ್ಭಿಕ ಅಲ್ಲ; ಅದಕ್ಕೆ ಒಳಗೊಂದು ಲೆಕ್ಕಾಚಾರ ಇದ್ದೇ ಇರುತ್ತದೆ.ಬೆಳಗಾವಿಯ ರಾಜಕೀಯ ಪರಿಕಲ್ಪನೆಯಲ್ಲಿ ಸಿ.ಟಿ. ರವಿ ಅವರ ಪ್ರವೇಶವೂ ಇದೇ ರೀತಿಯ ಹೊಸ ತಂತ್ರದ ಭಾಗ ಎನ್ನುವ ಮಾತು ಕೇಳಿ ಬರುತ್ತಿದೆ.ಕಳೆದ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ…

Read More

ಕರ್ನಾಟಕದಲ್ಲಿ ಗುಂಡಾರಾಜ್ಯ- ಬಿಜೆಪಿ

ಬೆಳಗಾವಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷಪೂರ್ಣಗೊಂಡಿಲ್ಲ ಕರ್ನಾಟಕದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದ್ದು ರಾಜ್ಯದ ಜನತೆ ಭಯದಲ್ಲಿ ಬದುಕುವ ದಾರುಣ ಸ್ಥಿತಿಗೆ ತಲುಪಿದ್ದು ಇದೊಂದು ಅಸಮರ್ಥ ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಕಾಂಗ್ರೇಸ್ ಸರ್ಕಾರದ ವಿರುದ್ದ ಹರಿಹಾಯಿದಿದ್ದಾರೆ. ರಾಜ್ಯದಲ್ಲಿ ಪದೇಪದೇ ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ, ಹತ್ಯೆ ಅವ್ಯಾಹತವಾಗಿ ನಡೆಯುತ್ತಿರುವುದು ಕಂಡುಬರುತ್ತಿದೆ,ಸರಕಾರದ ಅಸಮರ್ಥ ಆಡಳಿತದಿಂದ, ಕಾನೂನು ಸುವ್ಯವಸ್ಥೆಯನ್ನು ಹೇಗೆ ಹತೋಟಿಗೆ ತರಬೇಕೆಂಬ ಸಾಮರ್ಥ್ಯವಿಲ್ಲದ ಗೃಹ ಸಚಿವರನ್ನ ಮೊದಲು ಬದಲಾಯಿಸಿ. ಇಂತಹ ಪರಿಸ್ಥಿತಿಯನ್ನು ಅವಲೋಕನ ಮಾಡಲೂ…

Read More
error: Content is protected !!