Headlines

ಚಿದಂಬರ‌ ನಗರಕ್ಕೆ 24×7 ನೀರು ಕಾಮಗಾರಿಗೆ ಚಾಲನೆ

ನಿರಂತರ ನೀರು ಪೂರೈಕೆ ಯೋಜನೆಗೆ ಚಾಲನೆಬೆಳಗಾವಿ.ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ನಗರಸೇವಕಿ ವಾಣಿ ಜೋಶಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ, ಕಳೆದ ಹಲವು ವರ್ಷಗಳಿಂದ ವಾರ್ಡ ನಂಬರ 43 ರಲ್ಲಿ ಬರುವ ಚಿರಂಬರ ಬಗರ, ಮೃತ್ಯುಂಜಯ ನಗರ ಸೇರಿದಂತೆ ಇನ್ನೂ ಕೆಲ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿತ್ತು, ಈ ಹಿನ್ನೆಲೆಯಲ್ಲಿ ಅದರ ಪರಿಹಾರಕ್ಕೆ ನಗರಸೇವಕರು ಶಾಸಕರ ಮೂಲಕ ಪ್ರಯತ್ನ ಮಾಡಿದ್ದರು, ಹೀಗಾಗಿ ಶಾಸಕ ಅಭಯ ಪಾಟೀಲರು ಅನಗೋಳ…

Read More

ಬೆಳಗಾವಿಯಲ್ಲಿ ಗಡಿ ಆಯೋಗ ಕಚೇರಿ ಸ್ಥಾಪನೆ

ಗಡಿ ಮತ್ತು ನದಿಗಳ ಸಂರರಕ್ಷಣಾ ಆಯೋಗದ ಸಭೆ ಗಡಿ ಸಮಸ್ಯೆ-ಅಹವಾಲು ಸ್ವೀಕರಿಸಲು ಸುವರ್ಣ ಸೌಧದಲ್ಲಿ ಗಡಿ ಆಯೋಗದ ಕಚೇರಿ ಸ್ಥಾಪನೆ: ಶಿವರಾಜ್ ಪಾಟೀಲ ಬೆಳಗಾವಿ, ಸಾರ್ವಜನಿಕರು, ಕನ್ನಡಪರ ಸಂಘಟನೆಗಳ ಬೇಡಿಕೆಯಂತೆ ಗಡಿ ಹಾಗೂ ನದಿಗಳ ರಕ್ಷಣೆಗೆ ಸಂಬಂಧಿಸಿದಂತೆ ಸ್ಥಳಿಯ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಸ್ವೀಕರಿಸಲು ಅನುಕೂಲವಾಗುವಂತೆ ಗಡಿ ಆಯೋಗದ ಕಚೇರಿಯೊಂದನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸ್ಥಾಪಿಸಲಾಗುವುದು ಎಂದು ಕರ್ನಾಟಕ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗದ ಅಧ್ಯಕ್ಷರಾದ ಶಿವರಾಜ್ ಪಾಟೀಲ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ…

Read More

ಅರಣ್ಯವಾಸಿಗಳಿಗೆ ಹೊಸ ಭವಿಷ್ಯದ ದಾರಿ:

ಅರಣ್ಯವಾಸಿಗಳಿಗೆ ಹೊಸ ಭವಿಷ್ಯದ ದಾರಿ: ತಳೇವಾಡಿಯಲ್ಲಿ ಸ್ವಯಂಪ್ರೇರಿತ ಸ್ಥಳಾಂತರ, ಶಿಕ್ಷಣ-ಆರೋಗ್ಯಕ್ಕೆ ಶಕ್ತಿಯುತ ಆದ್ಯತೆ ಬೆಳಗಾವಿ: ‘‘ಅರಣ್ಯವಾಸಿಗಳ ಬದುಕಿಗೆ ಸಮಗ್ರ ಶಿಕ್ಷಣ ಹಾಗೂ ಆರೋಗ್ಯದ ಸೌಲಭ್ಯ ಒದಗಿಸಬೇಕಾದ ಅಗತ್ಯವಿದೆ. ಈ ದೃಷ್ಟಿಯಿಂದ ಭೀಮಗಡ ಸಫಾರಿ ಯೋಜನೆ, ಸ್ವಯಂಪ್ರೇರಿತ ಸ್ಥಳಾಂತರ ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತರುವ ಕೆಲಸ ನಡೆಯುತ್ತಿದೆ’’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ತಿಳಿಸಿದರು. ಅವರು ಗುರುವಾರ ಬೆಳಗಾವಿ ಪತ್ರಕರ್ತರ ಸಂಘ ಆಯೋಜನೆ ಮಾಡಿದ ಮಾಧ್ಯಮ ಸಂವಾದದಲ್ಲಿ‌ ಮಾತನಾಡಿದರು., ‘ ‘ತಳೇವಾಡಿಯ 27 ಕುಟುಂಬಗಳಿಗೆ ತಲಾ ₹15…

Read More

ಕಾಂಗ್ರೆಸ್ ಕಚೇರಿಯಲ್ಲಿ ಉಪನ್ಯಾಸಕರ ಧರಣಿ

ಚನ್ನಮ್ಮವಿವಿ ಅರ್ಥಶಾಸ್ತ್ರ ಉಪನ್ಯಾಸಕರ ಮುಷ್ಕರ ಬೆಳಗಾವಿ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದ ಅರ್ಥಶಾಸ್ತ್ರ ವಿಷಯವನ್ನು ನಿಯಮ ಬಾಹಿರವಾಗಿ ಕಡಿಮೆ ಮಾಡಿರುವ ವಿಷಯಕ್ಕೆ ಸಂಬಂಧಪಟ್ಟಂತೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆ (ಪೋರಮ್) ಸದಸ್ಯರು ಮೌಲ್ಯಮಾಪನವನ್ನು ಬಹಿಷ್ಕರಿಸಿ ಮೌಲ್ಯಮಾಪನ ಕೇಂದ್ರ ಮುಖ್ಯಸ್ಥರಾದ ಎಚ್ಚ ಜೆ ಮೂಳೆರಕಿ ಅವರಿಗೆ ಮನವಿಪತ್ರ ಸಲ್ಲಿಸಿ ನೀಡಿದ್ದಾರೆ. ಸೋಮವಾರದಿಂದ ಸ್ಥಳೀಯ ಮರಾಠ ಮಂಡಳ ಪದವಿ ಕಾಲೇಜಿನಲ್ಲಿ ಆರಂಭವಾಗಿರುವ ಪದವಿ ಮೌಲ್ಯಮಾಪನ ಕೇಂದ್ರದಲ್ಲಿ ನಡೆಯುತ್ತಿರುವ ಈ ಮುಷ್ಕರ, ಮೊದಲಿನಿಂದಲೂ ವಾಣಿಜ್ಯಶಾಸ್ತ್ರದಲ್ಲಿ ಅರ್ಥಶಾಸ್ತ್ರ ವಿಷಯವನ್ನು ಅಧ್ಯಯನ ವಿಷಯವಾಗಿ…

Read More

ಅಭಯ ಮಾತಿಗೆ ‘ಕೈ’ ನಿರುತ್ತರ…!

ಸಿಟೀಜ್ 2.0 ಗದ್ದಲಅಭಯ ಪಾಟೀಲರ ನೇರ ಪ್ರಶ್ನೆಗಳಿಗೆ ಕಾಂಗ್ರೆಸ್ ಮೌನ!📌 “ಕೇಂದ್ರದ ಶೇ.40 ಅನುದಾನ ಸಿದ್ಧ… ಪಾಲಿಕೆಯ ಶೇ.20 ಒಪ್ಪಿಗೆ… ರಾಜ್ಯದ ಪಾಲು ಎಲ್ಲಿದೆ?” – ಎಂದು ಪ್ರಶ್ನಿಸಿದ ಶಾಸಕ ಅಭಯ ಪಾಟೀಲ📍 ಮಹಾನಗರ ಪಾಲಿಕೆ ಸಭೆಯಲ್ಲಿ ತೀವ್ರ ಚರ್ಚೆ📍 ಅನುದಾನ ಗೊಂದಲದ ನಡುವೆ ರಾಜಕೀಯ ಆರೋಪ–ಪ್ರತ್ಯಾರೋಪ📍 ಉತ್ತರ ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಲಿಲ್ಲ. ಸಿಟೀಜ್ 2.0 ಯೋಜನೆಗೆ ಸಂಬಂಧಿಸಿದ ಅನುದಾನ ಹಂಚಿಕೆ ವಿಚಾರದಲ್ಲಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಾಸಕ ಅಭಯ ಪಾಟೀಲ ಎತ್ತಿದ…

Read More

ಮಚ್ಚೆಯಲ್ಲಿ ರಾಯಣ್ಣ ಪ್ರತಿಮೆಗೆ ಅವಮಾನ

ಮಚ್ಚೆೆಯಲ್ಲಿ ಕ್ರಾಂತಿವೀರರ ಪ್ರತಿಮೆಗೆ ಅವಮಾನ. ಕಪ್ಪು ಆಯಿಲ್ ಸುರಿದು ಕಿಡಿಗೇಡಿಗಳ ಕೃತ್ಯ; ಕನ್ನಡ ಪರ ಸಂಘಟನೆಗಳ ಆಕ್ರೋಶ. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸ್. ಬೆಳಗಾವಿ: ತಾಲೂಕಿನ ಮಚ್ಚೆ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಕಿಡಿಗೇಡಿಗಳು ಕಪ್ಪು ಬಣ್ಣದ ಆಯಿಲ್ ಸುರಿದು ಅವಮಾನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದೆ.ಪ್ರತಿಮೆಯ ಮೇಲೆ ಕಪ್ಪು ಬಣ್ಣ ಹಚ್ಚಿರುವುದು ಸ್ಥಳೀಯರ ಗಮನಕ್ಕೆ ಬಂದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ನಗರ…

Read More

16 ಕ್ಕೆ ಪಾಲಿಕೆ ಸಭೆ

ಬೆಳಗಾವಿ. ಕೊನೆಗೂ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಇದೇ ಬರುವ ದಿ.‌16 ಕ್ಕೆ ನಿಗದಿಯಾಗಿದೆ. ಮೇಯರ್ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಈ ದಿನಾಂಕವನ್ನು ನಿಗದಿ ಪಡಿಸಲಾಗಿದೆ. ಈ ಹಿಂದೆ ಮೇಯರ್ ಅವರು ಎರಡು ಬಾರಿ‌ ದಿನಾಂಕ ನಿಗದಿ ಪಡಿಸಿದ್ದರೂ ಮುಹೂರ್ತ ಕೂಡಿ ಬಂದಿರಲಿಲ್ಲ. ಈ ಬಗ್ಗೆ E belagavi. ಡಾಟ್ ಕಾಮ್ ವರದಿ‌ಮಾಡಿತ್ತು.

Read More

‘ರಾಣಿ’ ಚನ್ನರಾಜ ಕೈಗೆ ಸಿಕ್ಕರೆ..!?

ಮಲಪ್ರಭಾ ಶುಗರ್ಸ್: ಅಧಿಕಾರ ಹಟ್ಟಿಹೊಳಿ ಕೈಗೆ ಸಿಕ್ಕರೆ? ಮಲಪ್ರಭಾ ಶುಗರ್ಸ್ ಚನ್ನರಾಜ ಹಟ್ಟಿಹೊಳಿ ಕೈಗೆ ಬಿದ್ದರೆ, ಅದು ಒಂದು ಕಾರ್ಖಾನೆಯ ಚುನಾವಣೆ ಫಲಿತಾಂಶವಲ್ಲ – ಬೆಳಗಾವಿ ರಾಜಕೀಯದಲ್ಲಿ ಹೊಸ ಸಮೀಕರಣ ಹೊಸ ಅಧ್ಯಾಯದ ಆರಂಭ. ಹೆಬ್ಬಾಳಕರ ಕುಟುಂಬದ ಬಲವರ್ಧನೆ, ಜಾರಕಿಹೊಳಿ–ಕತ್ತಿ ಪ್ರಭಾವಕ್ಕೆ ಪರೋಕ್ಷವಾಗಿ ಸವಾಲು ಎನ್ನಬಹುದು ಮತ್ತು ರೈತರ ನಿರೀಕ್ಷೆಯ ದೊಡ್ಡ ಹೊಣೆಗಾರಿಕೆ . ಇವೆಲ್ಲದರ ಪರೀಕ್ಷಾ ವೇದಿಕೆ ಇದೇ ಕಾರ್ಖಾನೆ. M K HUBLI ಯ ರಾಣಿ ಎಂದೇ ಕರೆಯಲ್ಪಡುವ ಮಲಪ್ರಭಾ ಶುಗರ್ಸ್ ಚನ್ನರಾಜ ಹಟ್ಟಿಹೊಳಿ…

Read More

ವಕೀಲರ ಸಂಘಕ್ಕೆ ಕಿವುಡಸಣ್ಣವರ ಅಧ್ಯಕ್ಷ

ಬೆಳಗಾವಿ. ತೀವೃ ಜಿದ್ದಾಜಿದ್ದಿನಿಂದ ನಡೆದ ಬೆಳಗಾವಿ ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಸ್ ಎಸ್ ಕಿವುಡಸಣ್ಣವರ ಆಯ್ಕೆಯಾಗಿದ್ದಾರೆ.ಕಳೆದ ದಿನ ತಡರಾತ್ರಿಯವರೆಗೂ ಮತ ಎಣಿಕೆ ಮುಂದುವರೆದಿತ್ತು. ಪ್ರಧಾನ ಕಾರ್ಯದರ್ಶಿಯಾಗಿ ವೈ.ಕೆ ದಿವಟೆ ಆಯ್ಕೆಯಾದರು.

Read More
error: Content is protected !!