ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ!
ಜಾಹೀರಾತಿನಲ್ಲೇ “ಬೆಳಗಾವಿ ಮಹಾರಾಷ್ಟ್ರ” — ಕೊಲ್ಹಾಪುರ ಸಂಸ್ಥೆಯ ನಿರ್ಲಕ್ಷ್ಯಕ್ಕೆ ಗಡಿಭಾಗದಲ್ಲಿ ಕಿಡಿ. ಬೆಳಗಾವಿಕನ್ನಡಿಗರ ಹಕ್ಕು–ಗೌರವದ ನೆಲೆಯಾದ ಗಡಿಭಾಗ ಮತ್ತೆ ಒಂದು ನಿರ್ಲಕ್ಷ್ಯ ಬರಹದಿಂದ ದಹನಗೊಂಡಿದೆ. ಖ್ಯಾತ ಗಾಯಕ ಮಹೇಶ್ ಕಾಳೆ ಅವರ ಡಿಸೆಂಬರ್ 5ರ ಗಾಯನ ಕಾರ್ಯಕ್ರಮಕ್ಕಾಗಿ ಕೊಲ್ಹಾಪುರದ ಏಕದಂತಾ ರಂಗಭೂಮಿ ಸಂಸ್ಥೆ ಪ್ರಕಟಿಸಿದ ಸಾಮಾಜಿಕ ಮಾಧ್ಯಮ ಜಾಹೀರಾತಿನಲ್ಲಿ“Belagavi, Maharashtra”ಎಂಬ ಪದಬಳಕೆ ಕಂಡುಬಂದಿದೆ.ಈ ಒಂದು ಸಾಲಿನ ದುರದೃಷ್ಟದ ತಪ್ಪೇ ಕನ್ನಡಿಗರ ಸ್ವಾಭಿಮಾನಕ್ಕೆ ನೇರ ಧಕ್ಕೆ ತಂದುಕೊಟ್ಟಿರುವುದಾಗಿ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. “ಬೆಳಗಾವಿ ಮಹಾರಾಷ್ಟ್ರ?” — ಕನ್ನಡ…

