ಮಟಕಾ ಗಿರಾಕಿ ಗಡಿ ಪಾರ್..!
ಬೆಳಗಾವಿ: ನಗರದಲ್ಲಿ ಮಟಕಾ, ಇಸ್ಪೀಟ್ ಎಲೆಗಳ ಜೂಜಾಟ ಮತ್ತು ಗಾಂಜಾ ಮಾರಾಟದಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಬೆಳಗಾವಿ ಪೊಲೀಸರು ಮತ್ತೊಮ್ಮೆ ಕಠಿಣ ಹೆಜ್ಜೆ ಇಟ್ಟಿದ್ದಾರೆ. ಸಾರ್ವಜನಿಕ ನೆಮ್ಮದಿಗೆ ಧಕ್ಕೆ ಉಂಟುಮಾಡುತ್ತ, ಪದೇಪದೇ ಅಪರಾಧಗಳಲ್ಲಿ ತೊಡಗಿದ್ದ ಮೂವರು ರೂಢಿಗತ ಆರೋಪಿಗಳನ್ನು ಜಿಲ್ಲೆಯ ಗಡಿ ದಾಟಿಸಿ ಆರು ತಿಂಗಳ ಅವಧಿಗೆ ಗಡಿಪಾರು ಮಾಡುವ ಆದೇಶ ಜಾರಿಗೊಳಿಸಲಾಗಿದೆ.ಪೊಲೀಸ್ ಇಲಾಖೆಯ ಪ್ರಕಾರ, ಶಹಾಪೂರದ ಸರ್ಫರಾಜ ಶಬ್ಬಿರಅಹ್ಮದ ಶೇಖ, ತಿಲಕವಾಡಿಯ ಅಯೋಧ್ಯಾ ನಗರದ ವಿನಾಯಕ ಪ್ರಕಾಶ ಕೊಲ್ಲಾಪೂರಿ, ಹಾಗೂ ಶಹಾಪೂರದ ಹೊಸೂರ ಬಸವಣಗಲ್ಲಿಯ…

