ಪಾಲಿಕೆ ಹೆಗಲೇರಿದ ಪರಿಹಾರ ‘ಭೂತ’

27 ಕ್ಕೆ ಪಾಲಿಕೆ ವಿಶೇಷ ಸಭೆ ನಿಗದಿ 29 ಕ್ಕೆ ಆಯುಕ್ತರಿಗೆ ಮತ್ತೇ ಕೋರ್ಟ್ ಗೆ ಬುಲಾವ್. 20 ಕೋಟಿ ಪರಿಹಾರ ಪಾವತಿಸದಿದ್ದರೆ ನ್ಯಾಯಾಂಗ ನಿಂದನೆ ಗ್ಯಾರಂಟಿ. 27 ರ ವಿಶೇಷ ಸಭೆಯಲ್ಲಿ ಚರ್ಚೆ ಎಂದ ಪಾಲಿಕೆ. ಕಂತು ರೂಪದಲ್ಲಿ ಪರಿಹಾರ ಪಾವತಿಗೆ ಸಮಯ ಕೇಳುವ ಸಾಧ್ಯತೆ. ಬೆಳಗಾವಿ:ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಗೆ ಸಂಕಷ್ಟದ ಮೇಲೆ ಸಂಕಷ್ಟ ಶುರುವಾಗಿಬಿಟ್ಟಿದೆ. ಒಂದು ರೀತಿಯಲ್ಲಿ ಪಾಲಿಕೆಗೆ ಶನಿ ಹೆಗಲೇರಿ ಕುಳಿತಂತಾಗಿದೆ.ಮೂಲಗಳ ಪ್ರಕಾರ ಬೆಳಗಾವಿ ಮಹಾನಗರ ಪಾಲಿಕೆಯು ಬರೊಬ್ಬರಿ 7 ನ್ಯಾಯಾಂಗ…

Read More

ಅ ನಗರಸೇವಕರಿಬ್ಬರ ಬಗ್ಗೆ ಹೊರಬಿದ್ದ ಆದೇಶವಾದ್ರೂ‌ ಏನು?

ಬೆಳಗಾವಿ. ಬೆಳಗಾವಿ ತಿನಿಸುಕಟ್ಟೆ ವಿವಾದಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯ ಇಬ್ಬರು ಬಿಜೆಪಿ ನಗರಸೇವಕರ ಕುರಿತು ಪ್ರಾದೇಶಿಕ‌ ಆಯುಕ್ತರ ಕಚೇರಿಯಿಂದ ಮಹತ್ವದ ಆದಶಶವೊಂದು ಹೊರಬಿದ್ದಿದೆ. ಆದರೆ ಆ ಆದೇಶದಲ್ಲಿ ಏನಿದೆ? ಯಾವ ಯಾವ ಅಂಶಗಳನ್ನು ಉಲ್ಲೇಖಿಸಲಾಗಿದೆ ಎನ್ನುವ ಸಂಗತಿ ಮಾತ್ರ ಹೊರಬಿದ್ದಿಲ್ಲ. ಇದು ಈಗ ಎಲ್ಲೆಡೆ ಚರ್ಚೆಯ ವಸ್ತುವಾಗಿದೆ. ಬಹುತೇಕ ಪತ್ರಕರ್ತರು ಮಹಾನಗರ ಪಾಲಿಕೆ, ಪ್ರಾದೇಶಿಕ ಆಯುಕ್ತರ ಕಚೇರಿಯನ್ನು ಸಂಪರ್ಕಿಸಿದರೂ‌ ಆದೇಶ ಪ್ರತಿ ಮಾತ್ರ ಸಿಗುತ್ತಿಲ್ಲ. ಆದರೆ ಆದೇಶ ಪ್ರತಿಯನ್ನು ಪಾಲಿಕೆಯವರೇ ಬಂದು ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಸ್ಪಷ್ಟ…

Read More

ವಿವಾದಕ್ಕೆ ಮತ್ತೊಂದು ಹೆಸರೇ ಬೆಳಗಾವಿ ಪೊಲೀಸ್.!

ಬೆಳಗಾವಿ.ಗಡಿನಾಡ ಬೆಳಗಾವಿ ಪೊಲೀಸರಿಗೆ ಅನಗತ್ಯ ವಿವಾದಗಳನ್ನು ಮೈಮೇಲೆ ಎಳೆದು ಕೊಳ್ಳದಿದ್ದರೆ ತಿಂದಿದ್ದು ಕರಗುವುದಿಲ್ಲ.ಸುವರ್ಣ ವಿಧಾನ ಸೌಧದಲ್ಲಿ‌ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ವಿಧಾನ‌ ಪರಿಷತ್ ಸದಸ್ಯ ಸಿ.ಟಿ ರವಿ ನಡುವೆ ನಡೆದ ಮಾತಿನ ಕಾಳಗದಲ್ಲಿ ಬೆಳಗಾವಿ ಪೊಲೀಸ್ ಅಧಿಕಾರಿಗಳು ಯಾರನ್ನೋ ಓಲೈಸಲು ಹೋಗಿ ಎಂತೆಂತಹ ವಿವಾದಗಳನ್ನು ಎಳೆದುಕೊಂಡರು ಎನ್ನುವುದು ಗೊತ್ತಿರುವ ಸಂಗತಿ.ಹಾಗೇ ನೋಡಿದರೆ ಅದರಿಂದ ಪಾಠ ಕಲಿತು ಮುಂದೆ ಯಡವಟ್ಟು ಆಗದಂತೆ ಎಚ್ಚರಿಕೆ ಹೆಜ್ಜೆ ಇಡುವ ಕೆಲಸವನ್ನು ಬೆಳಗಾವಿ ಪೊಲೀಸರು ಮಾಡಬೇಕಿತ್ತು.ಆದರೆ, ಈಗ ಮತ್ಯಾರನ್ನೋ ಓಲೈಸುವ ಭರದಲ್ಲಿ…

Read More

ಬದುಕಿದ್ದ ರೈತನನ್ನೇ ಸಾಯಿಸಿದ ಸರ್ಕಾರ..!

ಸುತಗಟ್ಟಿಯಲ್ಲಿ ಸರ್ಕಾರಿ ದಾಖಲೆಗಳ ಮಹಾ ದುರಂತ ಐದು ತಿಂಗಳ ಅಲೆದಾಟದ ನಡುವೆಯೂ ರದ್ದಾಗದ ಮರಣ ಪ್ರಮಾಣಪತ್ರ; ರೈತ ಈರಪ್ಪ ಅಬ್ಬಾಯಿಯ ಬದುಕು ದಾಖಲೆಗಳಲ್ಲೇ ಸತ್ತಿತು ಬೆಳಗಾವಿ:ಸರ್ಕಾರಿ ವ್ಯವಸ್ಥೆಯ ಭಾರೀ ಯಡವಟ್ಟಿಗೆ ಬೆಚ್ಚಿಬೀಳಿಸುವ ಉದಾಹರಣೆಯೊಂದು ಸವದತ್ತಿ ತಾಲ್ಲೂಕಿನ ಸುತಗಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಜೀವಂತ ವ್ಯಕ್ತಿಯೊಬ್ಬರನ್ನು ಸರ್ಕಾರಿ ದಾಖಲೆಗಳಲ್ಲಿ ಸತ್ತವನಾಗಿಸಿ ಮರಣ ಪ್ರಮಾಣಪತ್ರ ನೀಡಿರುವ ಘಟನೆ ಇದೀಗ ಸಾರ್ವಜನಿಕರಲ್ಲಿ ಆಕ್ರೋಶ ಉಂಟುಮಾಡಿದೆ.ಗ್ರಾಮದ ರೈತ ಈರಪ್ಪ ನಾಗಪ್ಪ ಅಬ್ಬಾಯಿ ತುಂತುರು ಹನಿ ನೀರಾವರಿ ಯೋಜನೆಗೆ ಅರ್ಜಿ ಸಲ್ಲಿಸಲು ಮುರಗೋಡ ಕೃಷಿ…

Read More

ನಮಗೂ ಬದುಕಲು ಬಿಡಿ- ಗುತ್ತಿಗೆದಾರನ ಅಳಲು…!

ಡಿಸಿ, ಆರ್ಸಿ ಮತ್ತು ಆಯುಕ್ತರಿಗೆ ದೂರುಸ್ವಚ್ಚತಾ ಗುತ್ತಿಗೆದಾರನಿಗೆ ಕಿರುಕುಳ ಆರೋಪ.ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಅಧಿಕಾರಿ ಕಲಾದಗಿ ವಿರುದ್ಧ ಗುರುತರ ಆರೋಪ. ಬೆಳಗಾವಿ. ನಮಗೆ ಮುಕ್ತವಾಗಿ ಕೆಲಸ ಮಾಡಲು ಬಿಡಿ. ಜೊತೆಗೆ ನೆಮ್ಮದಿಯ ಬದುಕು ಸಾಗಿಸಲು ಬಿಡಿ. ಈ ರೀತಿಯ ನಿಮ್ಮ ಅನಗತ್ಯ ಕಿರುಕುಳ ಮತ್ತು ಮಾನಸಿಕ ಹಿಂಸೆಯಿಂದ ನಾನು ಸೋತು ಹೋಗಿದ್ದೇನೆ. ಇದರಿಂದ ನನ್ನ ಜೀವಕ್ಕೆ ಏನಾದರೂ ಅಪಾಯ ಆದರೆ ಅದಕ್ಕೆ ಅವರಿಬ್ಬರೇ ಹೊಣೆ!. ಮಹಾನಗರ ಪಾಲಿಕೆಯ ಕಸ ವಿಲೇವಾರಿ ಗುತ್ತಿಗೆದಾರ ವೈ.ಬಿ. ಗೊಲ್ಲರ ಎಂಬುವರು…

Read More

ಬೆಲೆ ಏರಿಕೆಯ ಬಿಸಿ—ಬಡಜನರ ಹಕ್ಕಿಗಾಗಿ ಬೀದಿಗಿಳಿದ ಯುವ ಕಾಂಗ್ರೆಸ್

ಬೆಲೆ ಏರಿಕೆಯ ಬಿಸಿ—ಬಡಜನರ ಹಕ್ಕಿಗಾಗಿ ಬೀದಿಗಿಳಿದ ಯುವ ಕಾಂಗ್ರೆಸ್ ಬೆಳಗಾವಿ: “ ಅಡುಗೆಗೇ ಅನಿಲ ಇಲ್ಲ, ಆಟೋಗೆ ತೈಲವಿಲ್ಲ—ಇದೇಕೆ ಮೋದಿ ಸರ್ಕಾರದ ಅಸಭ್ಯ ನೀತಿ?” ಈ ಮಾತು ಬೆಳಗಾವಿಯ ರಸ್ತೆಯಲ್ಲಿ ಹಕ್ಕಿನ ಧ್ವನಿಯಾಗಿ ಎದ್ದಿತ್ತು. ಗ್ಯಾಸು ಸಿಲಿಂಡರ್ ಹಾಗೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಯುವ ಕಾಂಗ್ರೆಸ್‌ನ ಕಾರ್ಯಕರ್ತರು vrijdag ಬೆಳಗಾವಿಯಲ್ಲಿ ಆಕ್ರೋಶಭರಿತ ಪ್ರತಿಭಟನೆಯನ್ನು ಹಮ್ಮಿಕೊಂಡರು. ಕಾಂಗ್ರೆಸ್ ಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆದ ಭಿತ್ತಿಪತ್ರ, ಘೋಷಣಾ ಪಟಗಳ ಜಾಥಾದಲ್ಲಿ ಮಂತ್ರವಿತ್ತು—”ಬಡವರ ಬೆನ್ನು ಮುರಿಯುವ ಬದಲಿಗೆ ಬೆಲೆ ಇಳಿಸಿ!”…

Read More

ನಾಡದ್ರೋಹಿ ಎಂಇಎಸ್‌ಗೆ ‘ಬ್ರೇಕ್’ ಬೀಳಲಿದೆಯೇ

ಬೆಳಗಾವಿ ಪೊಲೀಸರಿಗೆ ಅಗ್ನಿಪರೀಕ್ಷೆ! ನಾಡದ್ರೋಹಿ ಎಂಇಎಸ್‌ಗೆ ‘ಬ್ರೇಕ್’ ಬೀಳಲಿದೆಯೇ? ಬೆಳಗಾವಿ:ಈಗ ಇಡೀ ರಾಜ್ಯದ ಕಣ್ಣು ಗಡಿನಾಡ ಬೆಳಗಾವಿಯತ್ತ ನೆಟ್ಟಿದೆ.ನವೆಂಬರ್ 1 — ರಾಜ್ಯೋತ್ಸವದಂದು ಕರ್ನಾಟಕದಾದ್ಯಂತ ಕನ್ನಡ ಧ್ವಜಗಳ ಹಿರಿಮೆ ತೇಲಬೇಕಾದ ದಿನವೇ ಬೆಳಗಾವಿಯಲ್ಲಿ “ಕರಾಳ ದಿನ”ದ ಹೆಸರಿನಲ್ಲಿ ನಾಡದ್ರೋಹದ ನಾಟಕ ನಡೆಯುತ್ತಿರುವುದು ನಿಜಕ್ಕೂ ಲಜ್ಜಾಸ್ಪದ.ವರ್ಷದಿಂದ ವರ್ಷಕ್ಕೆ “ಅನುಮತಿ ಇಲ್ಲ” ಎಂದು ಹೇಳುತ್ತಾ ಕೊನೆಯ ಕ್ಷಣದಲ್ಲಿ ಎಂಇಎಸ್ ಪುಂಡರಿಗೆ ಕಾನೂನು ಬಾಹಿರವಾಗಿ ಮೆರವಣಿಗೆ ನಡೆಸಲು ಅವಕಾಶ ನೀಡಿರುವ ಅಧಿಕಾರಿಗಳ ನಿಲುವು ಈಗ ಪ್ರಶ್ನಾರ್ಥಕವಾಗಿದೆ. ಇದೇ ವೇಳೆ, “ಕರಾಳ ದಿನ”…

Read More

ರಾಣಿ ಚನ್ನಮ್ಮಳ‌ ತವರೂರು ಕಾಕತಿಯಲ್ಲಿ ಹಬ್ಬದ ಕಳೆ

ಕಿತ್ತೂರು ಉತ್ಸವ ಚನ್ನಮ್ಮಳ‌ ಇತಿಹಾಸ ಸಾರುವ ಉತ್ಸವ: ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ.ಕಿತ್ತೂರ ರಾಣಿ ಚನ್ನಮ್ಮನ 200ನೇ ವರ್ಷದ ವಿಜಯೋತ್ಸವ ಹಾಗೂ ರಾಣಿ ಚನ್ನಮ್ಮಳ ಇತಿಹಾಸವನ್ನು ನಾಡಿಗೆ ಸಾರುವ ಉದ್ದೇಶದೊಂದಿಗೆ ಕಿತ್ತೂರು ಉತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಉತ್ಸವವು ಚನ್ನಮ್ಮಳ ಐತಿಹಾಸಿಕ ಹೋರಾಟದ ಮಹತ್ವವನ್ನು ಸಾರಲಿದೆ ಎಂದು ಜಿಲ್ಲಾ‌ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಕಾಕತಿಯಲ್ಲಿ ಬುಧವಾರ (ಅ.23) ಜರುಗಿದ‌ ಕಿತ್ತೂರು ಉತ್ಸವ-2024, ವಿಜಯೋತ್ಸವದ 200ನೇ ವರ್ಷಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾಕತಿಯಿಂದಲೆ ರಾಣಿ…

Read More

ಮಾಜಿ ವಿದ್ಯಾರ್ಥಿಗಳ “ಸ್ನೇಹ ಮಿಲನ”

ಬೆಳಗಾವಿ.ಸ್ವಾಧ್ಯಾಯ ವಿದ್ಯಾ ಮಂದಿರ, ಪ್ರೌಢಶಾಲೆ ತಿಲಕವಾಡಿ, ಬೆಳಗಾವಿಯ 1997-98 ನೇ ಸಾಲಿನ ವಿದ್ಯಾರ್ಥಿಗಳ “ಸ್ನೇಹ ಮಿಲನ” ಶನಿವಾರ 19.10.2024 ರಂದು ನಡೆಯಲಿದೆ. ಆ ಬ್ಯಾಚ್‌ನ ಎಲ್ಲ ಸಹಪಾಠಿಗಳು ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ನಂಬರ್ ಗಳಿಗೆ ಸಂಪರ್ಕಿಸ ಬೇಕಾಗಿ ವಿನಂತಿ.ರವೀಂದ್ರ ಗೌಡ ಪಾಟೀಲ -94492 59995ಅಮಿತ ಕುಲಕರ್ಣಿ -99723 17914

Read More

15 ಕ್ಕೆ ಸಿದ್ದು ರಾಜೀನಾಮೆ

ನವದೆಹಲಿ. ಉನ್ನತ ಮೂಲಗಳ ಪ್ರಕಾರ ಮೂಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬರುವ 15 ಕ್ಕೆ ರಾಜೀನಾಮೆ ನೀಡುವುದು ಬಹುತೇಕ ಪಕ್ಕಾ ಆಗಿದೆ. ಈ ಕುರಿತಂತೆ ಹೈಕಮಾಂಡದಿಂದ ಸ್ಪಷ್ಟ ಸಂದೇಶ ಕೂಡ ರವಾನೆಯಾಗಿದೆ. ಮತ್ತೊಂದು ಮೂಲಗಳ ಪ್ರಕಾರ ಉತ್ತರಾಧಿಕಾರಿಯಾಗಿ ಸಿದ್ದರಾಮಯ್ಯ ಅವರ ಪರಮಾಪ್ತ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಆಗುವುದು ಬಹುತೇಕ ಫಿಕ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸತೀಶ್ ಜಾರಕಿಹೊಳಿ ಮಾತುಕತೆ ನಡೆಸಿದ್ದನ್ನು…

Read More
error: Content is protected !!