ಅಮೇರಿಕನ್ನರನ್ನೇ ವಂಚಿಸುತ್ತಿದ್ದ ಅಂತರರಾಜ್ಯ ಕಾಲ್‌ಸೆಂಟರ್ ಗ್ಯಾಂಗ್
ಬೆಳಗಾವಿ: ಅಮೇರಿಕಾ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಆನ್‌ಲೈನ್ ವಂಚನೆ ನಡೆಸುತ್ತಿದ್ದ ಅಂತರರಾಜ್ಯ ಸೈಬರ್ ಅಪರಾಧ ಪ್ರಕರಣವನ್ನು ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ.ಅಜಂ ನಗರ ಸರ್ಕಲ್ ಬಳಿ ಅಕ್ರಮವಾಗಿ ಕಾಲ್ ಸೆಂಟರ್ ನಡೆಸುತ್ತಿದ್ದ 33 ಮಂದಿ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 37 ಲ್ಯಾಪ್‌ಟಾಪ್‌ಗಳು, 37 ಮೊಬೈಲ್‌ಗಳು ಮತ್ತು 3 ವೈ-ಫೈ ರೌಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಅಂತರಿಕ ಭದ್ರತಾ ವಿಭಾಗ ನೀಡಿದ ಮಾಹಿತಿ ಹಾಗೂ ಅನಾಮದೇಯ ಪತ್ರದ ಆಧಾರದ ಮೇಲೆ ಎ.ಎಸ್.ಐ ಎಲ್.ಎಸ್. ಚಿನಗುಂಡಿ ಅವರು ನೀಡಿದ ಫಿರ್ಯಾದಿನ ಮೇರೆಗೆ ಪ್ರಕರಣ…

