Headlines

ಮಹಾರಾಷ್ಟ್ರದಲ್ಲಿ ಹುಬ್ಬಳ್ಳಿ ಬಸ್ ಗೆ ಬೆಂಕಿ

ಬೆಳಗಾವಿ.ಮರಾಠಾ ಮೀಸಲಾತಿ ಕಿಚ್ಚಿಗೆ ಕರ್ನಾಟಕ ಸಾರಿಗೆ ಬಸ್‌ಗೆ ಬೆಂಕಿಗಾಹುತಿಯಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.ವಡಿಗೋದ್ರಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿಔರಂಗಾಬಾದ್ – ಹುಬ್ಬಳ್ಳಿ ಮಾರ್ಗದ ಕರ್ನಾಟಕ ಸಾರಿಗೆ ಬಸ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ಅಂಬಡ್ ತಾಲೂಕಿನ ವಡಿಗೋದ್ರಿ ಗ್ರಾಮದ ಹದ್ದಿಯಲ್ಲಿ ಈ ಘಟನೆ ನಡೆದಿದೆ. ಸಾಂದರ್ಭಿಕ ಚಿತ್ರ…! ಮರಾಠಾ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದ್ದು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಧರಣಿ ನಡೆದಿತ್ತು. ಜಾಲಾ ಜಿಲ್ಲೆಯ…

Read More

ಮೊದಲು ನೇಮಕ ನಂತರ ಒಪ್ಪಿಗೆ

ಪಿಡಬ್ಲುಡಿ ಕಮಿಟಿಯಲ್ಲಿ ವ್ಯಾಪಕ ಚರ್ಚೆ ಮೊದಲು ನೇಮಕ– ನಂತರ ಒಪ್ಪಿಗೆ ಪಾಲಿಕೆಯಲ್ಲಿ ಬಗೆಹರಿಯದ ಪೌರ ಕಾರ್ಮಿಕರ ನೇಮಕಬೆಳಗಾವಿ. ಮಹಾನಗರ ಪಾಲಿಕೆಯಲ್ಲಿ ತೀವೃ ಚರ್ಚೆ ವ ಸ್ತುವಾಗಿರುವ 138 ಪೌರ ಕಾರ್ಮಿಕರ ನೇಮಕಾತಿ ವಿಷಯ ಇಂದಿಲ್ಲಿ ನಡೆದ ನಗರ ಯೋಜನೆ ಮತ್ತು ಸ್ಥಾಯಿ ಸಮಿತಿ ಕಮಿಟಿ ಸಭೆಯಲ್ಲಿ ಪ್ರತಿಧ್ವನಿಸಿತು.138 ಜನ ಪೌರ ಕಾರ್ಮಿಕರಲ್ಲಿ 8 ಜನ ಮಹಾರಾಷ್ಟ್ರದವರು ಏಕೆ ಎಂಬುದರ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ಯಾಯಿತು, ಈ ಬಗ್ಗೆ ಇ ಬೆಳಗಾವಿ ವರದಿಯನ್ನು ಪ್ರಕಟಿಸಿತ್ತು, ಅಷ್ಟೇ ಅಲ್ಲ…

Read More

ಬೆಳಗಾವಿಯಲ್ಲಿ ಪೌರಕಾರ್ಮಿಕ ಆತ್ಮಹತ್ಯೆ-

ಬೆಳಗಾವಿ. ಗುತ್ತಿಗೆದಾರನ ಕಿರುಕುಳಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯ ಪೌರಕಾರ್ಮಿಕನೊಬ್ಬ‌ ಆತ್ಮಹತ್ಯೆಗೆ ಶರಣಾದ ಘಟನೆ ಗಣೇಶಪುರದಲ್ಲಿ ನಡೆದಿದೆ. ಕಾರ್ಮಿಕ ಶಶಿಕಾಂತ ಸುಭಾಷ್ ಢವಳೆ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವ ಎಂದು ಗೊತ್ತಾಗಿದೆ. ದಲಿತ ಸಂಘಟನೆಗಳಿಂದ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಸಂಬಳ ನೀಡದ್ದೂ ಸೇರಿದಂತೆ ಬಡ್ಡಿಗೆ ಹಣ ಕೊಟ್ಟರು ಒಂದು ರೀತಿಯ ಮಾನಸಿಕ ಕಿರಿಕಿರಿ‌ ನೀಡುತ್ತಿದ್ದನು ಎನ್ನಲಾಗಿದೆ ಶಶಿಕಾಂತ ಢವಳೆ ಅವರು ಕಳೆದ ಹನ್ನೆರಡು ವರ್ಷಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎನ್. ಡಿ. ಪಾಟೀಲ್ ಸ್ವಚ್ಛತಾ ಗುತ್ತಿಗೆದಾರರೊಬ್ಬರ ಬಳಿ ಕೂಲಿ…

Read More

ನಿಧನ ವಾರ್ತೆ

ಹುಬ್ಬಳ್ಳಿ.ನಿವೃತ್ತ ಎಸ್ ಬಿ ಐ ಬ್ಯಾಂಕ್ ಉದ್ಯೋಗಿ ಹಾಗು ಬಸವೇಶ್ವರ ನಗರ ನಿವಾಸಿ ರಾಘವೇಂದ್ರ ಜಯವಂತರಾವ್ ದುರ್ಗ (70) ಅವರು ನಿಧನರಾದರು. ಮೃತರಿಗೆ ಪತ್ನಿ ಇಬ್ಬರು ಪುತ್ರರು ಮತ್ತು ಅಪಾರ ಬಂಧು ಬಳಗವಿದೆ.

Read More

ಎಸಿಪಿ ಎತ್ತಂಗಡಿಗೆ ಸಿಪಿಐ ಸ್ಕೆಚ್..!

ಶಾಸಕರ ಗಮನಕ್ಕೆ ಬಾರದೆ ಶಿಫಾರಸ್ಸು ಪತ್ರಕ್ಕೆ ಸಮ್ಮತಿ ಕೊಟ್ಟವರು ಯಾರು? ಆ ಸುದ್ದಿ ಕೇಳಿ ಗರಂ ಆದ ಮಾಜಿ ಶಾಸಕ.! ನಂತರ ತಗ್ಲಾಕ್ಕೊಂಡ ಆ ಸಿಪಿಐ ಯಾರು? ಬೆಳಗಾವಿ.ಇಂತಹ ಪವಾಡಗಳು ಕೇವಲ ಗಡಿನಾಡ ಬೆಳಗಾವಿಯಲ್ಲಿ ಮಾತ್ರ ನಡೆಯಲು ಸಾಧ್ಯ‌ಇನ್ನು ಇದು ಯಾವ ಇಲಾಖೆಯಲ್ಲಿ ನಡೆಯುತ್ತಿದೆ ಎನ್ನುವುದನ್ನು ಇಲ್ಲಿ ಬಿಡಿಸಿ ಹೇಳಬೇಕಾದ ಅವಶ್ಯಕತೆನೂ ಇಲ್ಲ. ಏಕೆಂದರೆ ಅದು ಪೊಲೀಸ ಇಲಾಖೆಯಲ್ಲಿ ಎನ್ನುವುದು ಬಹುತೇಕರ ಊಹೆ.‌ಅದು ಸತ್ಯ. ಸಹಜವಾಗಿ ರಾಜ್ಯದಲ್ಲಿ ಸರ್ಕಾರ ಬದಲಾದಂತೆ ಅಧಿಕಾರಿಗಳ ವರ್ಗಾವಣೆಗಳು ಆಗುತ್ತವೆ.ಅದರಲ್ಲಿ ದೊಡ್ಡದೇನೂ ಇಲ್ಲ.‌ಆಯಾ…

Read More

38 ವರ್ಷಗಳ ಸಾರ್ಥಕ ಸೇವೆ..!

ಬೆಳಗಾವಿ. ಸತತ 38 ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕೆಯಿಲ್ಲದೇ ನಿರಂತರ ಸರ್ಕಾರಿ‌ಸೇವೆಯನ್ನು‌ ಸಲ್ಲಿಸಿ ನಗುನಗುತ ನೀವೃತ್ತಿಯಾಗುವುದು‌ ಅಷ್ಟು ಸುಲಭದ ಮಾತಲ್ಲ. ಅಂತಹ ಸಾರ್ಥಕ ಸೇವೆ ಸಲ್ಲಿಸಿ ನಾಳೆ ದಿ. 31 ರಂದು ನಿವೃತ್ತಿಯಾಗುತ್ತಿರುವವರಲ್ಲಿ ಬೂಡಾ ಅಭಿಯಂತ ಎಂ.ವಿ ಹಿರೇಮಠ ಒಬ್ಬರು. ಬೆಳಗಾವಿ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಖಾನಾಪುರ ಜಿಲ್ಲಾ ಪಂಚಾಯತಿಯಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಈಗ ಬೆಳಗಾವಿ‌ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಭಿಯಂತರಾಗಿ ಸೇವೆ ಸಲ್ಲಿಸಿ ನಾಳೆ ನಿವೃತ್ತಿ ಹೊಂದಲಿದ್ದಾರೆ. ಹಾಗೇ ನೋಡಿದರೆ ಹಿರೇಮಠರಿಗೆ…

Read More

ಬೀದಿನಾಯಿ ಕಡಿದು ಸಾವು

ಬೆಳಗಾವಿ. ಬೀದಿನಾಯಿಗಳ ಹಾವಳಿಗೆ ಬೆಳಗಾವಿ ಯುವಕನೊಬ್ಬ ಬಲಿಯಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ ಇಲ್ಲಿನ‌ ವಡಗಾವಿ ತೆಗ್ಗಿನ‌‌ ಗಲ್ಲಿ‌ ನಿವಾಸಿ‌ ಜಗದೀಶ ಚುನಮರಿ‌ ಮೃತ ವ್ಯಕ್ತಿ ಎಂದು ಗೊತ್ತಾಗಿದೆ. ಕಳೆದ ಒಂದುವರೆ ತಿಂಗಳ‌ ಹಿಂದೆಯಷ್ಟೆ ಬೆಂಗಳೂರಿನಲ್ಲಿ ಈತನ‌ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದವು. ಆದರೆ ಕಳೆದ ದಿನ‌ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟನು ಎಂದು ಹೇಳಲಾಗಿದೆ.

Read More

ಸಬ್ ರಿಜಿಸ್ಟ್ರಾರ್ ಕಚೇರಿಗೆ ಲೋಕಾಯುಕ್ತ ಭೆಟ್ಟಿ.

ಬೆಳಗಾವಿ. ಇಲ್ಲಿನ‌ ಸಬ್ ರಿಜಿಸ್ಟ್ರಾರ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಹಠಾತ್ ಭೆಟ್ಟಿ ನೀಡಿ ದಾಖಲೆ ಪರಿಶೀಲಿಸಿದರು. ಬೆಳಗಾವಿ ಲೋಕಾಯುಕ್ತ ಎಸ್ಪಿ ಹನುಮಂತರಾಯಪ್ಪ ಅವರು ದಾಖಲೆ ಪರಿಶೀಲನೆ ನಡೆಸಿದರು. ಉಪನೋಂದಣಾಧಿಕಾರಿಗಳಿಗೆ ದಾಖಲಾತಿ ಪರಿಶೀಲನೆ ಮಾಡಿ ನೈಜತೆ ತಿಳಿದುಕೊಳ್ಳುವ ಅಧಿಕಾರ ಇರಲಿಲ್ಲ. ಈಗ ಸರಕಾರ ದಾಖಲಾತಿ ಪರಿಶೀಲನೆ ಮಾಡಿ ಪಕ್ಷಗಾರರ ನೈಜತೆ ತಿಳಿದುಕೊಂಡ ಬಳಿಕವೇ ಆಸ್ತಿಗಳ ಖರೀದಿ, ನೋಂದಣಿ ಪ್ರಕ್ರಿಯೆ ನಡೆಯಲಿದೆ. ಈ ವೇಳೆ ಅಕ್ರಮ ಕಂಡು ಬಂದರೆ ಉಪನೊಂದಣಾಧಿಕಾರಿಗಳೇ ಅಂತವರ ವಿರುದ್ಧ ನೇರವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲಿದ್ದಾರೆ. ….

Read More

ಗಣೇಶೋತ್ಸವ ಶಾಂತಿ ಸಮಿತಿ ಸಭೆ

ಟಿಳಕವಾಡಿ ಠಾಣೆ ವ್ಯಾಪ್ತಿ ಗಣೇಶ ಮಂಡಳಗಳ‌ ಸಭೆ. ಶಾಂತಿ‌ ಸುವ್ಯವಸ್ಥೆ ಕಾಪಾಡಲು‌ ಸಿಪಿಐ ದಯಾನಂದ ಶೇಗುಣಸಿ‌ ಮನವಿ. ರಸ್ತೆ ದುರಸ್ತಿಗೆ ಅಗತ್ಯ ಕ್ರಮ.-ವಾಣಿ‌ ಜೋಶಿ ಬೆಳಗಾವಿ.ಗಣೇಶೋತ್ಸವ ಹಿನ್ನೆಯೆಲ್ಲಿ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಣೇಶ ಮಂಡಳಗಳ ಸಭೆಗಳು ನಡೆಯುತ್ತಿವೆ, ಇಂದು ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶ ಮಂಡಳಗಳ ಮತ್ತು ಶಾಂತಿ ಸಮಿತಿ ಸಭೆ ನಡೆಯಿತು. ಟಿಳಕವಾಡಿ ಪೊಲೀಸ್ ಇನ್ಸಪೆಕ್ಟರ್ ದಯಾನಂದ ಶೇಗುಣಸಿ ಅವರು ಗಣೇಶ ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ…

Read More
error: Content is protected !!