Headlines

“ಮಹಾ” ದವರಿಗೆ ಕೆಲಸ- ವಿಚಾರಣೆಗೆ ಸೂಚನೆ

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಯಲ್ಲಿ ಕೆಲ ಸಿಬ್ಬಂದಿಗಳ ನೇಮಕಾತಿಯಲ್ಲಿ ಮಹಾರಾಷ್ಟ್ರ ದವರಿಗೆ ಆಧ್ಯತೆ ನೀಡಲಾಗಿದೆ ಎನ್ನುವುದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿದ್ದಾರೆ. ಕಳೆದ ದಿನ ಇ ಬೆಳಗಾವಿ ಡಾಟ್ ಕಾಮ್ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಯುಕ್ತ. ಅಶೋಕ ದುಡಗುಂಟಿ ಅವರು ಪೌರಕಾರ್ಮಿಕ, ಸೂಪರ್ ವೈಸರ್ ಸೇರಿದಂತೆ ಇನ್ನಿತರ ನೇಮಕದ ಬಗ್ಗೆ ವಿಚಾರಣೆಗೆ ಮೌಖಿಕವಾಗಿ ಸಂಬಂಧಿಸಿದವರಿಗೆ ಆದೇಶ ನೀಡಿದ್ದಾರೆ. ಪಾಲಿಕೆಯಲ್ಲಿ ಮಹಾ ದವರ ನೇಮಕ https://ebelagavi.com/index.php/2023/08/28/hi-22/ ಮೇಲಾಗಿ ಈ ಮಹಾ ನೇಮಕದ…

Read More

ಪ್ರಭಾ ಶುಗರ್ಸಗೆ ಅವಿರೋಧ ಆಯ್ಕೆ

ಗೋಕಾಕ : ಘಟಪ್ರಭಾ ಸಹಕಾರಿ ಸಕ್ಕರೆ ಕಾಖರ್ಾನೆಯ ನೂತನ ಅಧ್ಯಕ್ಷರಾಗಿ ಅಶೋಕ ರಾಮನಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ರಾಮಣ್ಣಾ ಕೃಷ್ಣಪ್ಪ ಮಹಾರಡ್ಡಿ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಸೋಮವಾರದಂದು ಸಕ್ಕರೆ ಕಾಖರ್ಾನೆಯ ಸಭಾಂಗಣದಲ್ಲಿ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಬ್ಬರು ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿಯಾಗಿದ್ದ ಬೈಲಹೊಂಗಲ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶಾಹೀನ್ ಅಖ್ತರ ಅವರು ಪ್ರಕಟಿಸಿದರು. ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಅಶೋಕ ಪಾಟೀಲ ಹಾಗೂ ರಾಮಣ್ಣಾ…

Read More

ಪಾಲಿಕೆಯಲ್ಲಿ ‘ಮಹಾ’ ದವರಿಗೆ ಕೆಲಸ..?

ಸಂಬಂಧಿಕರಿಗೆ ಉದ್ಯೋಗ ಕೊಟ್ಟರೂ ಕೇಳೊರಿಲ್ಲ. ಉದ್ಯೋಗಕ್ಕೆ ಏನು ಮಾನದಂಡ? ಆಯುಕ್ತರ ಗಮನಕ್ಕೆ ಈ ಸಂಗತಿ ಬರಲಿಲ್ಲ ಏಕೆ? ಪಾರದರ್ಶಕ ನೇಮಕ ಆಗಿದೆಯೇ? ಬೆಳಗಾವಿ. ಸ್ಥಳೀಯರಿಗೆ ಉದ್ಯೋಗ ಸಿಗಬೇಕು ಎನ್ನುವ ಶಾಸಕರ ಮತ್ತು ಸರ್ಕಾರದ ಆಸೆಗೆ ತಣ್ಣೀರೆರಚುವ ಕೆಲಸ ಬೆಳಗಾವಿ ಪಾಲಿಕೆಯಲ್ಲಿ ನಡೆಯುತ್ತಿದೆಯೇ? ಅಂತಹ ಮಾತುಗಳು ಪಾಲಿಕೆಯ ಆವರಣದಲ್ಲಿ ರಿಂಗಣಿಸುತ್ತಿವೆ. ಬೆಳಗಾವಿ‌ ಮಹಾನಗರ ಪಾಲಿಕೆಯು ಏನೇ ಮಾಡಿದರೂ ಸ್ಥಳೀಕರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ನಿರ್ವಹಿಸಬೇಕು. ಅದೇ ಉದ್ದೇಶವನ್ನು ಸ್ಥಳೀಯ ಜನಪ್ರತಿನಿಧಿಗಳು ಹೊಂದಿರಬೇಕು. ಈ ನಿಟ್ಟಿನಲ್ಲಿ ಬೆಳಗಾವಿ ದಕ್ಷಿಣ ಶಾಸಕ…

Read More

ಇದು ಡಿಸಿಸಿ ADJUSTMENT..!

ಬೆಳಗಾವಿ. ಗಡಿನಾಡ ಬೆಳಗಾವಿ ಜಿಲ್ಲೆ ರಾಜಕಾರಣವೇ ವಿಚಿತ್ರ. ಇಲ್ಲಿ ಯಾರೂ ಶತ್ರುನೂ ಅಲ್ಲ, ಮಿತ್ರನೂ ಅಲ್ಲ. ಅಂದರೆ ಒಂದು ರೀತಿಯ ಹೊಂದಾಣಿಕೆ ರಾಜಕಾರಣ;,! ಹೀಗಾಗಿ ಈ ಜಿಲ್ಲೆಯ ರಾಜಕಾರಣದ ಒಳಸುಳಿವು ಯಾರಿಗೂ ಬೇಗ ಅರ್ಥ ಆಗೋದೇ ಇಲ್ಲ. ಈ ಹಿಂದಿನ ರಾಜಕಾರಣವನ್ನು ಗಮನಿಸಿದರೆ, ಕತ್ತಿ, ಸವದಿ, ಕೋರೆಯವರದ್ದು ಒಂದು ಗುಂಪಾಗಿದ್ದರೆ, ಜಾರಕಿಹೊಳಿ ಸಹೋದರರದ್ದು ಒಂದು ಗುಂಪು. ಆದರೂ ಎರಡೂ ಗುಂಪುಗಳು ಜಿಲ್ಲೆಯ ರಾಜಕಾರಣದಲ್ಲಿ ತಮ್ಮ ಬಲವಾದ ಹಿಡಿತ ಬಿಟ್ಟು‌ಕೊಟ್ಟಿರಲಿಲ್ಲ. ಈ ಹಿಂದೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಯಾವಾಗಲೂ…

Read More

ಜ್ಞಾನಯೋಗಾಶ್ರಮಕ್ಕೆ ಹಾರನಹಳ್ಳಿ ಭೆಟ್ಟಿ

ವಿಜಯಪುರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿಯವರು ರವಿವಾರ ವಿಜಯಪುರ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಶ್ರಮದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

Read More

ಅಂತಾರಾಷ್ಟೀಯ ಮಟ್ಟದಲ್ಲಿ ಬ್ರಾಹ್ಮಣರಿಗೆ ಗೌರವ

ಬಾಗಲಕೋಟೆ. ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವ ನೂತನ ಶಿಕ್ಷಣ ನೀತಿಯನ್ನು ಕೈಬಿಡದಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ತಿಳಿಸಿದ್ದಾರೆ.ವಿದ್ಯಾಗಿರಿಯ ವಿಪ್ರ ಅಭಿವೃದ್ಧಿ ಸಂಘದ ಶ್ರೀರಾಯರ ಮಠದ ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಕೌಶಲಕ್ಕೆ ಒತ್ತು ನೀಡಲಾಗಿದ್ದು, ವಿದ್ಯಾರ್ಥಿಗಳ ಸರ್ವತೋನ್ಮುಖ…

Read More

ಠಾಣಾ ಮೆಟ್ಟಿಲೇರಿದ ವಿದ್ಯಾರ್ಥಿಗಳು

ಬೆಳಗಾವಿ:ಗಡಿನಾಡ ಬೆಳಗಾವಿಯಲ್ಲಿ ಅಂಗವಿಕಲನ ಮೇಲೆ ಉದ್ಯಮಬಾಗ ಪೊಲೀಸರ ಕ್ರೌರ್ಯದ ಸುದ್ದಿ ಇನ್ನೂ ಜನರ ‌ಮನಸ್ಸಿನಲ್ಲಿ ಹಾಗೇ ಇದೆ.ಅಂತಹುದರಲ್ಲಿ ಮಕ್ಕಳೂ ಸಹ ಠಾಣೆ ಮೆಟ್ಟಿಲು ಹತ್ತಿದ್ದಾರೆಂದರೆ ಜನರಲ್ಲಿ ಒಂದು ರೀತಿಯ ಆತಂಕ ಇದ್ದದ್ದೇ.ಮತ್ತೇ ಅಂಗವಿಕಲನ ನ್ನು ಹೊಡೆದಂತೆ‌ ಮಕ್ಕಳನ್ನು ಹೊಡೆದಿರಬಹುದು. ಹೀಗಾಗಿ ಮಕ್ಕಳೆಲ್ಲರೂ ಕೂಡಿ ಠಾಣೆ ಮೆಟ್ಟಿಲು ಹತ್ತಿರಬಹುದು ಎಂದು ಊಹಿಸುವುದು ಸಹಜ.! ಇದೇ ವೇಳೆ ವಿದ್ಯಾರ್ಥಿನಿ ಯರಿಗೆ ಮಹಿಳೆಮತ್ತು ಮಕ್ಕಳ ಹಕ್ಕುಗಳ ಕಾಯ್ದೆಯ ಬಗ್ಗೆ ತಿಳಿಸಿ ಹೇಳಲಾಯಿತು.ಎಲ್ಲಾ ಠಾಣೆಯ ಅಧಿಕಾರಿಗಳು ಇವತ್ತು ಮಕ್ಕಳ ಜತೆ ಪ್ರೀತಿ, ಸ್ನೇಹ…

Read More

ಬೆಳಗಾವಿಯವರು ಕಳ್ಳರನ್ನ ಹಿಡಿದ್ರು..!

ಬೆಳಗಾವಿ.ನಗರದ ಎರಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ, ಸವದತ್ತಿ ತಾಲುಕಿನ ಇಂಚಲ ಗ್ರಾಮದ ಸಂತೋಷ ಶಿವಪ್ಪಾ ಬೇವಿನಕೊಪ್ಪ (29) ಮತ್ತು ಬೆಳಗಾವಿ ಶ್ತೀನಗರ ನಿವಾಸಿ ಅಬುಬಕರ ಸಿಕಂದರ್ ಸವದಿ (21) ಎಂಬುವರೇ ಬಂಧಿತ ಕಳ್ಳರು ಎಂದು ಪೊಲೀಸ ಪ್ರಕಟನೆಯಲ್ಲಿ ತಿಳಿಸಲಾಗಿದೆ,ಬಂಧಿತರಿಂದ 6 ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.ಮಾರ್ಕೆಟ್ ಎಸಿಪಿ ನಾರಾಯಣ ಬರಮನಿ ಮಾರ್ಗದರ್ಶನದಲ್ಲಿ ಸಿಪಿಐ ಮಹಾಂತೇಶ ದಾಮಣ್ಣವರ ಅವರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಾರಾಜ್ಯ ಕಳ್ಳರ ಬಂಧನ https://ebelagavi.com/index.php/2023/08/24/hi-17/

Read More

ಖಾಕಿ ಬಲೆಗೆ ಸಿಕ್ಕಿ ಬಿದ್ದ ಕಳ್ಳರು..!

ಅಂತರರಾಜ್ಯ ಕಳ್ಳರ ಬಂಧನ 23 ವಾಹನ ವಶಕ್ಕೆಬೆಳಗಾವಿ.ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೋಟಾರ್ ಸೈಕಲ ಕಳ್ಳತನ ಮಾಡುತ್ತಿದ್ದ ಗ್ಯಾಂಗನ್ನು ಪೊಲೀಸರು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಕೊಲ್ಲಾಪುರದ ಕರ್ವೀರ ತಾಲುಕಿನ ಕಳಂಭ ಗ್ರಾಮದ ಸಂತೋಷ ರಾಮಚಂದ್ರ ನಿಶಾನೆ (30) ಮತ್ತು ಗೋಕಾಕ ಜಿಲ್ಲೆಯ ಕೆಳಗಿನಹಟ್ಟಿಯ ಭರಮಪ್ಪ ಯಲ್ಲಪ್ಪ ಕೊಪ್ಪದ (21) ಎಂಬುವರೇ ಬಂಧಿತ ಕಳ್ಳರು ಎಂದು ಪೊಲೀಸರು ತಿಳಿಸಿದ್ದಾರೆ, ಬೆಳಗಾವಿ, ಗೋಕಾಕ, ಅಂಕಲಗಿ, ನಿಪ್ಪಾಣಿ, ಹುಕ್ಕೇರಿ, ಸಂಕೇಶ್ವರ ಸೇರಿದಂತೆ ಬೇರೆ ಬೇರೆ ಕಡೆಗೆ ಗ್ಯಾಂಗ್ ಕದ್ದ 8 ಲಕ್ಷ…

Read More
error: Content is protected !!