ಸತೀಶ್, ರಾಜು ಒಕೆ,, ಫಿರೋಜ್ ಯಾಕೆ?

ಸಚಿವ ಹೆಬ್ಬಾಳಕರ, ಶಾಸಕ ಅಭಯ ಪಾಟೀಲ ,ಚನ್ನರಾಜ ಹಟ್ಟಿಹೊಳಿ ಇಲ್ಲ ಯಾಕೆ? ದಿ.ಉಮೇಶ ಕತ್ತಿಗೆ ಮಾಡಿದ. ಅವಮಾನವೇ? ವಿವಾದದಲ್ಲಿ ಬೆಳಗಾವಿ ಹೋಲ್ಡಿಂಗ್. ತಪ್ಪು ಮಾಡಿದವರು ಯಾರಣ್ಣ? ಬೆಳಗಾವಿ:ಇದೊಂದು ಸಣ್ಣ ವಿಷಯ ಎನಿಸಿದರೂ ಒಳ ರಾಜಕೀಯ ಏಟು ಬಹಳ ದೊಡ್ಡದಿದೆ ಎನಿಸದೇ ಇರದು.ಬೆಳಗಾವಿ ಜಿಲ್ಲೆಯ ರಾಜಕೀಯ ಬಲ್ಲವರಿಗೆ ಈ ಸಣ್ಣ ವಿಷಯದ ಒಳ ಹೊಡೆತ ಅರ್ಥವಾಗುತ್ತದೆ.ಸಿಂಪಲ್ ಆಗಿದ್ದು ಇಷ್ಟೆ. ಬೆಳಗಾವಿಯ ಹೃದಯಭಾಗ ಎನಿಸಿಕೊಂಡ ಕಿತ್ತೂರು ಚನ್ನಮ್ಮ‌ವೃತ್ತದಲ್ಲಿ (ತೋಟಗಾರಿಕೆ ಇಲಾಖೆ ಬಳಿ) ಮಹಾನಗರ ಪಾಲಿಕೆಯಿಂದ ಅತ್ಯಂತ ದೊಡ್ಡದಾದ ಹೋಲ್ಡಿಂಗ್ ಅಳವಡಿಸಲಾಗಿದೆ….

Read More

ಅಂಗವಿಕಲನ ಸ್ಥಿತಿ ಅಯೋಮಯ

ಹೊಡೆದವರು ನಿರಾಳ, ಹೊಡೆಸಿಕೊಂಡವನ ನರಳಾಟ. ಮನೆಯಲ್ಲಿ ತುತ್ತು ಅನ್ನಕ್ಕೂ ಪರದಾಟ. ಶೌಚಕ್ಕೂ ಬೇರೆಯವರ ಆಶ್ರಯ ಬೆಳಗಾವಿ.ಉದ್ಯಮಬಾಗ ಪೊಲೀಸರಿಂದ ಹಲ್ಲೆಗೊಳಗಾದ ಬಡಪಾಯಿ ಅಂಗವಿಕಲನ ಪರಿಸ್ಥಿತಿ ನೋಡಿದರೆ ಕರುಳು ಚುರ್ ಎನ್ನುತ್ತದೆ.ಇಲ್ಲಿ ಹಲ್ಲೆ ಮಾಡಿದ ಪೊಲೀಸರು ನಿರಾಳವಾಗಿ ವರ್ಗಾವಣೆಗೊಂಡಿದ್ದಾರೆ. ಆದರೆ ಹಲ್ಲೆಗೊಳಗಾದ ಅಂಗವಿಕಲ ಈಗ ಹಾಸಿಗೆ ಹಿಡಿದಿದ್ದಾನೆ. ಮನೆಯಲ್ಲಿ ಶೌಚಾಲಯಕ್ಕೆ ಹೋಗಲೂ ಬೇರೆಯವರ ಆಶ್ರಯ ಪಡಬೇಕಾಗಿದೆ. ದುಡಿದು ಮನೆ ನಡೆಸಬೇಕಾದ ಅಂಗವಿಕಲ ನಿರಂಜನ ಚೌಗಲಾ ಈಗ ಕನಿಷ್ಟ ಇನ್ನೂ 6 ತಿಂಗಳು ಹಾಸಿಗೆ ಬಿಟ್ಟು ಏಳದ ಪರಿಸ್ಥಿತಿಯಲ್ಲಿದ್ದಾನೆ. ಒಂದು ರೀತಿಯಲ್ಲಿ…

Read More

ಮೂಡಲಗಿ ಬರ ಪೀಡಿತ ಘೋಷಿಸಿ

ಕೈಕೊಟ್ಟ ಮಳೆ: ಮೂಡಲಗಿ-ಗೋಕಾಕ ತಾಲೂಕುಗಳನ್ನು ಬರಪೀಡಿತ ತಾಲೂಕುಗಳನ್ನಾಗಿ ಘೋಷಿಸಲು ಸರ್ಕಾರಕ್ಕೆ ಮನವಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅರಭಾವಿ ಪ್ರವಾಸಿ ಮಂದಿರದಲ್ಲಿ ಮೂಡಲಗಿ-ಗೋಕಾಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ ಬಹು ನಿರೀಕ್ಷಿತ ಯೋಜನೆಯಾದ ಜೆಜೆಎಂ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನಕೊಟ್ಟು ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಂಡು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಮೆಳವಂಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು….

Read More

ಆ ಆಡಿಯೋದಲ್ಲಿರುವ ಖಾಕಿಧಾರಿಗಳೆಷ್ಟು?

ಅಕ್ರಮ‌ ದಂಧೆ ನಡೆಸುವ ಕ್ಲಬ್ಗಳೆಷ್ಟು? ಪ್ರತಿ ಕ್ಲಬ್ ದಿಂದ ಲಕ್ಷಕ್ಕೂ ಅಧಿಕ ಮಾಮೂಲು.? ಪೊಲೀಸ್ ಆಯುಕ್ತರನ್ನು ಹೊರತುಪಡಿಸಿ ಕೆಲವರಿಗೆ ಪಾಲು ಹಂಚಿಕೆ ಅಗುತ್ತಿದೆ ಅಂತೆ. ಬೆಳಗಾವಿ. ಅಕ್ರಮ ಕ್ಲಬ್ ದಂಧೆ ನಡೆಸುವ ದಂಧೆಕೋರ ಮಾತಾಡಿದ ಆಡಿಯೋ ಬಗ್ಗೆ ಇ ಬೆಳಗಾವಿ ಪ್ರಕಟಿಸಿದ ವರದಿ ಪೊಲೀಸ್ ಇಲಾಖೆಯ ಕೆಲವರನ್ನು ಬೆಚ್ಚಿ ಬೀಳಿಸಿದೆ. ಒಬ್ಬರು ಡಿಸಿಪಿ ಸೇರಿದಂತೆ ಮೂವರು ಸಿಪಿಐ ಮಟ್ಟದ ಅಧಿಕಾರಿಗಳ ಹೆಸರನ್ನು ಸ್ಪಷ್ಟವಾಗಿ ಆ ಆಡಿಯೋದಲ್ಲಿ ಉಲ್ಲೇಖ ಮಾಡಲಾಗಿದೆ. ಅದರಲ್ಲಿ ಯಾರಿಗೆ ಪ್ರತಿ ತಿಂಗಳ ಎಷ್ಟು ಹಫ್ತಾ…

Read More

ವಿಶ್ವಪೋಟೊಗ್ರಾಫಿ ದಿನದ ವಿಶೇಷಾರ್ಥವಾಗಿ ನಾಡಿನ ಹಿರಿಯ ಛಾಯಾಗ್ರಾಹಕ ಪಿ. ಕೆ. ಬಡಿಗೇರ ಅವರ ಕ್ಯಾಮೆರಾ ಒಡನಾಟದ ಪರಿಚಯಾತ್ಮಕ ಲೇಖನ.

ಕ್ಯಾಮೆರಾ ಗಾರುಡಿಗನ ಸೇವೆಗೆ ಇಂದಿಗೆ 25ವರ್ಷ ಬೆಳಗಾವಿ: ಮಳೆ, ಹೊಲದಲ್ಲಿ ನಾಟಿ ಮಾಡುವುದು, ಉತ್ತುವುದು, ಬಿತ್ತುವುದು, ಹರಗುವುದು ರೈತನ ನಲಿವು, ಅವನ ಕಷ್ಟದ ಸಂಧರ್ಭಗಳನ್ನು ಎತ್ತು ಎಮ್ಮೆಗಳೊಂದಿಗೆ ಆತನ ಪರಸ್ಪರ ಸಹಜೀವನದ ನಿತ್ಯ ಚಟುವಟಿಕೆಗಳನ್ನು ಬಿಂಬಿಸುತ್ತ ಇಂಬು ನೀಡುವ ಕೃಷಿಪ್ರೇಮಿ ಛಾಯಾಗ್ರಾಹಕನಾಗಿ.ವಿಶ್ವ ಶ್ರೇಷ್ಠ ಹಾಗೂ ರಾಷ್ಟ್ರಪತಿ, ಪ್ರಧಾನಿ ಸೇರಿದಂತರ ರಾಷ್ಟ್ರೀಯ ನಾಯಕರು ಜಿಲ್ಲೆಗೆ ಭೇಟಿ ನೀಡಿದಾಗ ಸೆರೆಹಿಡಿದ ವಿಭಿನ್ನ ಭಂಗಿಗಳು, ವಿಮಾನ ಹೆಲಿಕಾಪ್ಟರ್ ಮೂಲಕ ಸ್ಥಳ ವೀಕ್ಷಣೆ ಸಂಧರ್ಭದಲ್ಲಿ ಜನನಾಯಕರ ಜೊತೆಗೆ ಕುಳಿತು ಕ್ಲಿಕ್ಕಿಸಿದ ಛಾಯಾಚಿತ್ರಗಳು, ನೋಡುಗರನ್ನು…

Read More

ವಿಕಲಚೇತನರಿಗೆ ಕಾರ್ಡ ವಿತರಣೆ-ಬಾಲಚಂದ್ರ

ವಿಕಲಚೇತನ ಫಲಾನುಭವಿಗಳಿಗೆ ಗುರುತಿನ ಯುಡಿಐಡಿ ಕಾರ್ಡ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿಮೂಡಲಗಿ : ವಿಕಲಚೇತನ ಗುರುತಿನ ಯುಡಿಐಡಿ ಕಾರ್ಡ ದೇಶಾದ್ಯಂತ ಅಂಗವೈಕಲ್ಯತೆಯ ಪುರಾವೆಯಾಗಿ ಪರಿಗಣಿಸಲಾಗುತ್ತಿದ್ದು, ವಿಕಲಚೇತನರಿಗೆ ಸರ್ಕಾರದ ವಿವಿಧ ಯೋಜನೆಗಳಾದ ವಿದ್ಯಾರ್ಥಿ ವೇತನ, ಕೌಶಲ್ಯ ತರಬೇತಿ, ಸಮನ್ವಯ ಶಿಕ್ಷಣ, ಪುನರ್ವಸತಿ ಯೋಜನೆ, ಪಿಂಚಣಿ, ರೈಲ್ವೆ ರಿಯಾಯತಿ ಮುಂತಾದ ಸೌಲಭ್ಯಗಳನ್ನು ಪಡೆಯಲು ಯುಡಿಐಡಿ ಕಾರ್ಡ ಪೂರಕವಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ಆರೋಗ್ಯ ಇಲಾಖೆಯಿಂದ ಜರುಗಿದ ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ) ವಿತರಿಸಿ ಮಾತನಾಡಿದ…

Read More

ಒಂದು ಕ್ಲಬ್. ಲಕ್ಷ ರೂ ಹಫ್ತಾ..

ಬೆಳಗಾವಿಯಲ್ಲಿ ಎಲ್ಲಿ ನೋಡಿದಲ್ಲಿ ಕ್ಲಬ್ ಗಳು. ನಿಯಂತ್ರಣ ಎನ್ನುವುದೇ ಇಲ್ಲ. ಕೈ ಕಟ್ಟಿ ಕುಳಿತ ಇಲಾಖೆ ಬೆಳಗಾವಿ. ಕ್ಲಬ್ ಒಂದು. ತಿಂಗಳ ಮಾಮೂಲಿ ಲಕ್ಷ ಲಕ್ಷ ರೂ.! ಬೆಳಗಾವಿ.ಸಧ್ಯದ ಪರಿಸ್ಥಿತಿ ಯನ್ನು ಗಮನಿಸಿದರೆ ಗಡಿನಾಡ ಬೆಳಗಾವಿಯಲ್ಲಿ ಅಕ್ರಮ ದಂಧೆಯ ಅಡ್ಡೆಗಳು ನಾಯಿ ಕೊಡೆಗಳಂತೆ ತಲೆಎತ್ತಿಕೊಂಡಿವೆ.ಅವುಗಳ ನಿಯಂತ್ರಣ ಮಾಡಬೇಕಾದವರು ಕೈಕಟ್ಟಿಕೊಂಡು ಕುಳಿತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿದೆ.ಇದೆಲ್ಲದರ ನಡುವೆ ಕ್ಲಬ್ ನಡೆಸುವ ವ್ಯಕ್ತಿಯೊಬ್ಬ ಬಿಚ್ಚಿಟ್ಟ ಹಫ್ತಾ ರಹಸ್ಯ ಇಡೀ ಇಲಾಖೆಯನ್ನು ಬೆಚ್ಚಿ ಬೀಳಿಸುವಂತಿದೆ.ಪೊಲೀಸ್ ಆಯುಕ್ತರನ್ನು ಹೊರತುಪಡಿಸಿ ಕೆಲ…

Read More

7.5 ಲಕ್ಷ ಫಲಾಭವಿಗಳಿಗೆ ಒಂದೇ ಮೊಬೈಲ್ ನಂಬರ

ಮೋದಿ ಸರ್ಕಾರವು ಪ್ರಾರಂಭಿಸಿದ ಅತ್ಯಂತ ಮಹತ್ವಾಕಾಂಕ್ಷೆಯ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಒಂದಾದ, “ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ” (AB-PMJAY)ಯಡಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ವರದಿ ತಿಳಿಸಿದೆ. ಭಾರತದ ಕಂಟ್ರೋಲರ್ – ಆಡಿಟರ್ ಜನರಲ್ (ಸಿಎಜಿ) ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಬಹುದೊಡ್ಡ ಅವ್ಯವಹರಾದ ಬಗ್ಗೆ ಉಲ್ಲೇಖಿಸಿದ್ದು, 7.5 ಲಕ್ಷ ಫಲಾನುಭವಿಗಳು ಎಂದು ಹೇಳಲಾದ ವ್ಯಕ್ತಿಗಳು “ಒಂದೇ ಮೊಬೈಲ್” ಸಂಖ್ಯೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಇದಲ್ಲದೆ ದಾಖಲೆ…

Read More
error: Content is protected !!