ಅಭಿವೃದ್ಧಿಗೆ ಹೊಸ ದಿಕ್ಕು ಕೊಟ್ಟ ಸಂವಾದ
ಸಂಭಾಷಣೆಯ ಸಪ್ತಸ್ವರ: ಬೆಳಗಾವಿಯಲ್ಲಿ ಅಭಿವೃದ್ದಿಗೆ ನವಚಿಂತನ. ನೀರು, ನಗರಾಭಿವೃದ್ಧಿ ಮತ್ತು ನೈಜ ಸಂವಾದ – ಬೆಳಗಾವಿಯ ಜನಪ್ರತಿನಿಧಿಗಳ ಜವಾಬ್ದಾರಿ ಭಾಷಣ” ಬೆಳಗಾವಿ, ಸುದ್ದಿ ಮಡುಗಟ್ಟಿದ ಬೆಳಗಾವಿ ವಾರ್ತಾಭವನದಲ್ಲಿ ಶನಿವಾರ ಬೆಳಗಿನ ಜಾವದಿಂದಲೇ ಉತ್ಸಾಹದ ಹರವಿತ್ತು. ಬೆಳಗಾವಿ ಪತ್ರಕರ್ತರ ಸಂಘ ಆಯೋಜಿಸಿದ್ದ ಸನ್ಮಾನ ಮತ್ತು ಸಂವಾದ ಕಾರ್ಯಕ್ರಮದ ಸಂಭ್ರಮದಲ್ಲಿ ಜನಪ್ರತಿನಿಧಿಗಳು, ಪತ್ರಕರ್ತರು ಮತ್ತು ನಾಗರಿಕರು ಒಂದೇ ವೇದಿಕೆಯ ಮೇಲೆ ಭಿನ್ನಾಭಿಪ್ರಾಯಗಳಿಗಿಂತ ಅಭಿವೃದ್ಧಿಯೊಂದೇ ಗುರಿಯಾಗಬೇಕೆಂಬ ದೃಷ್ಟಿಕೋಣವನ್ನು ಹಂಚಿಕೊಂಡರು. ಸಭೆಯ ಪ್ರಮುಖ ಆಕರ್ಷಣೆಯಾದ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ ಪಾಟೀಲ…

