ಬೆಳಗಾವಿಯಲ್ಲಿ ಗಣೇಶನಿಗೆ ಅದ್ಧೂರಿ ವಿದಾಯ!
ಮಂಗಳಮೂರ್ತಿ ಮೋರಯಾ ಘೋಷಣೆಗಳ ನಡುವೆ ಸಂಭ್ರಮದ ಮೆರವಣಿಗೆ ಬೆಳಗಾವಿ:ನಗರದ ಪ್ರತಿಯೊಂದು ಬೀದಿ-ತಿರುವಿನಲ್ಲೂ “ಗಣಪತಿ ಬಪ್ಪಾ ಮೋರಯಾ… ಮಂಗಳಮೂರ್ತಿ ಮೋರಯಾ!” ಎಂಬ ಘೋಷಣೆಗಳು ಮೊಳಗಿದವು. ಶನಿವಾರ ಅನಂತ ಚತುರ್ದಶಿಯಂದು ನಡೆದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಬೆಳಗಾವಿ ಸಂಪೂರ್ಣ ಭಕ್ತಿರಸ-ಸಂಗೀತ-ನೃತ್ಯದ ಸಂಭ್ರಮದಲ್ಲಿ ತೇಲಿತು. ಭಾದ್ರಪದ ಚೌತಿಯಂದು ಪ್ರತಿಷ್ಠಾಪಿಸಲಾದ ಸುತ್ತ 400ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳು ವೈಭವದ ಮೆರವಣಿಗೆಯೊಂದಿಗೆ ಕಪಿಲೇಶ್ವರ ಹೊಂಡದಲ್ಲಿ ವಿಸರ್ಜನೆಯಾದವು. ಅದ್ದೂರಿ ಚಾಲನೆ ಕಿರ್ಲೋಸ್ಕರ್ ರಸ್ತೆಯ ಕಾವೇರಿ ಕೋಲ್ಗಿಂಕ್ ಬಳಿ ನಡೆದ ಪ್ರಮುಖ ಕಾರ್ಯಕ್ರಮದಲ್ಲಿ ಮೇಯರ್ ಮಂಗೇಶ…

