ಜೊಲ್ಲೆ ನೇತೃತ್ವದಲ್ಲಿ ಬಿಡಿಸಿಸಿ ಬ್ಯಾಂಕ್ಗೆ ಉಜ್ವಲ ಭವಿಷ್ಯ: ಶಾಸಕ ಬಾಲಚಂದ್ರ ಜಾರಕಿಹೊಳಿ
ನಿಪ್ಪಾಣಿ:ಜಿಲ್ಲೆಯ ಹೆಮ್ಮೆಯ ಬಿಡಿಸಿಸಿ ಬ್ಯಾಂಕ್ ಮುಂದಿನ ಹಂತದ ಪ್ರಗತಿಯತ್ತ ಹೆಜ್ಜೆ ಇಡಬೇಕಾದರೆ, ಅದು ಅಣ್ಣಾಸಾಹೇಬ್ ಜೊಲ್ಲೆಯವರಂತಹ ದೂರದೃಷ್ಟಿಯುಳ್ಳ, ಅನುಭವಸಂಪನ್ನ ನಾಯಕರ ನೇತೃತ್ವದಲ್ಲಿ ಸಾಧ್ಯವೆಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಭಿಪ್ರಾಯಪಟ್ಟರು. ಅಪ್ಪಾಚವಾಡಿಯ ಹಾಲಸಿದ್ಧನಾಥ ಸಭಾ ಭವನದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿ, “ಬಿಡಿಸಿಸಿ ಬ್ಯಾಂಕ್ಗೆ ಶತಮಾನೋತ್ಸವದ ಸಂಭ್ರಮವಿದ್ದರೂ, ಅಭಿವೃದ್ಧಿಯಲ್ಲಿ ಇನ್ನೂ ಬಹಳಷ್ಟು ಸಾಧ್ಯತೆಗಳಿವೆ. ಕೇವಲ 6 ಮಂದಿ ಸದಸ್ಯರಿಂದ ಆರಂಭಿಸಿ ಇಂದು ₹7,000 ಕೋಟಿ ಠೇವಣಿಗೆ ತಲುಪಿದ ಬೆಂಕಿಗೆ, ಇನ್ನಷ್ಟು ವೇಗ ಬೇಕಾದರೆ…

