ಬೆಳಗಾವಿಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ- ಉದ್ವಿಗ್ನ
ಸಂತಿಬಸ್ತವಾಡದಲ್ಲಿ ಕಿಡಿಗೇಡಿಗಳ ಕೃತ್ಯ. ಸಿಸಿಟಿವಿ ಇಲ್ಲದ್ದನ್ನು ಗಮನಿಸಿ ಕೃತ್ಯವೆಸಗಿದ ಕಿಡಿಗೇಡಿಗಳು. ಘಟನಾ ಸ್ಥಳಕ್ಕೆ ಜಮಾಯಿಸಿದ ಸಮಾಜ ಬಾಂಧವರು. ಪೊಲೀಸ್ ಅಣದಿಕಾರಿಗಳ ದೌಡು ಬೆಳಗಾವಿ. ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ನೀಡುವಂತಹ ಗಂಭೀರ ಘಟನೆ ನಡೆದಿದೆ. ನಿರ್ಮಾಣ ಹಂತದಲ್ಲಿರುವ ಮಸೀದಿಯ ಕೆಳಮಹಡಿಯಲ್ಲಿದ್ದ ಕುರಾನ್ ಪುಸ್ತಕ ಮತ್ತು ಎರಡು ಹದೀಸ್ ಸಂಕಲನಗಳನ್ನು ಮಸೀದಿ ಪಕ್ಕದ ಜಮೀನಿಗೆ ಕೊಂಡೊಯ್ದು ಬೆಂಕಿ ಹಚ್ಚಲಾಗಿದೆ. ಶನಿವಾರ ಬೆಳಗಿನ ಜಾವ ಪ್ರಾರ್ಥನೆಗಾಗಿ ಮಸೀದಿಗೆ ಬಂದ ನೂರಾರು ಮಂದಿ ವಾಖಾಣಿಸುವಾಗ, ಪ್ರತಿದಿನ ಓದಲಾಗುತ್ತಿದ್ದ ಕುರಾನ್…

