Headlines

ವಿಜಯ ಮುತಾಲಿಕ ದೇಸಾಯಿ ಇನ್ನಿಲ್ಲ

ಬೆಳಗಾವಿ.ನ್ಯೂ ಇಂಡಿಯಾ ಇನ್ಸುರೆನ್ಸ್ ಕಂಪನಿಯ ನಿವೃತ್ತ ವಿಭಾಗೀಯ ವ್ಯವಸ್ಥಾಪಕರೂ ಆಗಿರುವ ರಾಣಿ ಚನ್ನಮ್ಮ ನಗರದ ನಿವಾಸಿ ವಿಜಯ ವೆಂಕಟೇಶ ಮುತಾಲಿಕ ದೇಸಾಯಿ (೬೮) ಅವರು ಇಂದು ನಿಧನರಾದರು ಮೃತರಿಗೆ ಪತ್ನಿ, ಪುತ್ರ ಮತ್ತು ಅಪಾರ ಬಂಧು ಬಳಗವಿದೆ

Read More

16200 KG ದೀಪದ ಎಣ್ಣೆ ಸಂಗ್ರಹ

ಯಲ್ಲಮ್ಮನ ಸನ್ನಿಧಿ: 16,200 ಕೆಜಿ ಎಣ್ಣೆ ಸಂಗ್ರಹ-ದರ ಹೆಚ್ಚಿದ ಭಕ್ತಿಯಿಂದ ದೀಪ ಉರಿಸಿದ ಭಕ್ತಗಣ ಬೆಳಗಾವಿ.ಉಗರಗೋಳ: ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಈ ಬಾರಿ ನಡೆದ ನವರಾತ್ರಿ ಜಾತ್ರೆಯಲ್ಲಿ 16,200 ಕೆ.ಜಿ ದೀಪದ ಎಣ್ಣೆ ಸಂಗ್ರಹವಾಗಿದೆ. ನವರಾತ್ರಿಯಲ್ಲಿ ಯಲ್ಲಮ್ಮ ದೇವಸ್ಥಾನದ ಗರ್ಭಗುಡಿ ಎದುರು ದೀಪ ಇರಿಸಲಾಗುತ್ತದೆ. ಗುಡ್ಡಕ್ಕೆ ಬರುವ ಪ್ರತಿ ಭಕ್ತರು ಅದಕ್ಕೆ ಎಣ್ಣೆ ಹಾಕಿ, ಭಕ್ತಿ ಮೆರೆಯುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಎಣ್ಣೆ ದರ ಹೆಚ್ಚಿದ್ದರಿಂದ ಎಣ್ಣೆ ಸಂಗ್ರಹ ಪ್ರಮಾಣ ಕಡಿಮೆಯಾಗಬಹುದು ಎಂದು ಭಾವಿಸಲಾಗಿತ್ತು. ಆದರೆ,…

Read More

ಬೆಳಗಾವಿಗೆ ಗ್ರೀನ್ ಶಕ್ತಿ !

ಸಚಿವರು ಹರಡಿದ ಹಸಿರು ಬೆಳಕು – ಬೆಳಗಾವಿ ಬೆಳೆಯುತ್ತಿದೆ.!ಬೆಳಗಾವಿಯ ಹಳ್ಳಿಗಳಿಗೆ ಶಕ್ತಿಯ ಹೊಸ ದಿಕ್ಕು ತೋರಿಸುತ್ತಿರುವ ಈ ಯೋಜನೆ, ಗ್ರಾಮೀಣ ಕರ್ನಾಟಕದ ಸಹಜ ಶಕ್ತಿ ಬಳಕೆಯ ಮಾದರಿಯಾಗಿದೆ. ಸತೀಶ ಜಾರಕಿಹೊಳಿ ಅವರ ಸರಳವಾದ, ಶ್ರಮಪೂರ್ಣ ನಾಯಕತ್ವ ಈ ಅಭಿವೃದ್ಧಿಗೆ ಹಿರಿಮೆಯನ್ನು ತಂದಿದೆ. ಸಚಿವ ಸತೀಶ ಜಾರಕಿಹೊಳಿ ಮುನ್ನಡೆಸಿದ ಹಸಿರು ಕ್ರಾಂತಿ – ಎಂಟು ಹಳ್ಳಿಗಳಿಗೆ 110 ಕೆವಿ ಉಪಕೇಂದ್ರ ಬೆಳಗಾವಿ:ಗ್ರಾಮೀಣ ಬೆಳವಣಿಗೆಯ ನಿಜವಾದ ನಾಯಕತ್ವವೇನು ಎಂಬುದನ್ನು ರಾಜ್ಯ ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ…

Read More

RSS ಒಂದು ಶತಮಾನ, ಒಂದು ಸವಿನೆನಪು, ಒಂದು ಚಿಂತನೆ.

“ಶತಮಾನ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ” — ಒಂದು ಶತಮಾನ, ಒಂದು ಸವಿನೆನಪು, ಒಂದು ಚಿಂತನೆ. RSS ನೂರು ವರ್ಷ” ಎಂಬುದು ಕೇವಲ ಒಂದು ಸಂಸ್ಥೆಯ ಕಾಲಪ್ರವಾಹವಲ್ಲ, ಅದು ಭಾರತದ ಸಾಮಾಜಿಕ-ಸಾಂಸ್ಕೃತಿಕ ಪರಿವರ್ತನೆಯ ಕನ್ನಡಿ. ಪ್ರಶಂಸೆಗಳಿರಲಿ, ವಿಮರ್ಶೆಗಳಿರಲಿ— ಸಂಘದ ಹೆಜ್ಜೆಗಳು ನೂರು ವರ್ಷಗಳಲ್ಲಿ ಭಾರತೀಯ ಸಮಾಜದ ಮೇಲೆ ಅಳಿಸದ ಗುರುತು ಬಿಟ್ಟಿವೆ. ಮುಂದಿನ ಶತಮಾನದಲ್ಲಿ, RSS ತನ್ನ ತತ್ತ್ವಗಳನ್ನು ಹೊಸ ತಲೆಮಾರಿಗೆ ಹೇಗೆ ರೂಪಾಂತರಗೊಳಿಸುತ್ತದೆ ಎಂಬುದೇ ಇತಿಹಾಸದ ಮುಂದಿನ ಕುತೂಹಲ. ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹುಟ್ಟುಹಾಕಿದ…

Read More

ಹಲ್ಲೆಕೋರ ಅರೆಸ್ಟ್ .ನಗರಸೇವಕರ ಪ್ರತಿಭಟನೆ ಅಂತ್ಯ

ಬೆಳಗಾವಿ. ನಗರಸೇವಕ ಅಭಿಜಿತ್ ಜವಳಕರ ಮೇಲೆ ಹಲ್ಲೆ ಮಾಡಿದ ರಮೇಶ ಪಾಟೀಲ ಸೇರಿದಂತೆ ಇಬ್ಬರನ್ಬು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡರು. ಈ ಹಿನ್ನೆಲೆಯಲ್ಲಿ ಠಾಣೆ ಮುಂದೆ ಪ್ರತಿಭಟನೆ ಯನ್ನು ನಗರಸೇವಕರು ಕೈಬಿಟ್ಟರು. ಆರೋಪಿಯನ್ನು ಬಂಧಿಸುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಎಂದು ನಗರಸೇವಕರು ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದರು. ಟಿಳಕವಾಡಿ ಸಿಪಿಐ ಪೂಜಾರಿ ಸೇರಿದಂತೆ ಎಸಿಪಿ ಖಡೇಬಜಾರ ಅವರು ಭರವಸೆ ನೀಡಿದ್ದರು. ಟಾವರ್ ವಿವಾದಕ್ಕೆ ಸಂಬಂಧಿಸಿದಂತೆ ನಗರಸೇವಕ ಜವಳಕರ ಮೇಲೆ ಸುಮಾರು ಹತ್ತಕ್ಕೂ ಹೆಚ್ಚು ಜನ‌ ಹಲ್ಲೆ ಮಾಡಿದ್ದರು.

Read More

ಕೇಜ್ರಿವಾಲ್ ಶಕುನಿ ಪ್ರತಿರೂಪ- ಅಭಯ

ಬೆಳಗಾವಿದಿಲ್ಲಿ ಚುನಾವಣೆಯಲ್ಲಿಶಕುನಿಯ ಪ್ರತಿರೂಪವಾಗಿದ್ದ ಕೇಜ್ರಿವಾಲ್ರ ರಾಜಕೀಯ ಅಂತ್ಯವಾಗಿದೆ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ ಹೇಳಿದರು.ದೆಹಲಿಯಲ್ಲಿ ಬಿಜೆಪಿ ಗೆಲುವಿನ ನಂತರಬೆಳಗಾವಿಯಲ್ಲಿ ನಡೆದ ವಿಜಯೋತ್ಸವ ಸಂದರ್ಭದಲ್ಲಿ ಅವರು ಮಾತನಾಡಿದರು.ಭ್ರಷ್ಟಾಚಾರ ವಿರೋಧಿ ಆಂದೋಲನ ಮಾಡಿ ರಾಜಕೀಯಕ್ಕೆ ಬಳಿಸಿಕೊಂಡ ಕೇಜ್ರಿವಾಲರು ಹತ್ತು ವರ್ಷ ದೆಹಲಿಯಲ್ಲಿ ಜನರನ್ನು ಮುರ್ಖ ಮಾಡುವ ಕೆಲಸ ಮಾಡಿದ್ದರು. ಈಗ ಜನರು ಜಾಣರಾಗಿ ಕೇಜ್ರಿವಾಲರನ್ನು ಮನೆಗೆ ಕಳಿಸಿ ಬಿಜೆಪಿ ಗೆಲ್ಲಿಸಿದ್ದಾರೆಂದು ಅಭಯ ಪಾಟೀಲ ಹೇಳಿದರು,ಮುಂದಿನ ದಿನಗಳಲ್ಲಿ ಪಂಜಾಬ್ನಲ್ಲಿನ ಆಪ್ ಸಕರ್ಾರದ ಪರಿಸ್ಥಿತಿ ಕೂಡ ಇದೇ ರೀತಿ ಆಗುತ್ತದೆ.ಇನ್ನು ಕೆಲವೇ…

Read More

ಬೆಳಗಾವಿಯಲ್ಲಿ 1050 ರೌಡಿಗಳು..!

ಖಡಕ್ ಎಚ್ಚರಿಕೆ ಕೊಟ್ಟ ಡಿಸಿಪಿ ರೋಹನ್. ಬೆಳಗಾವಿಯಲ್ಲಿ 1050 ರೌಡಿಗಳು..! ಎಂಇಎಸ್ ನವರ ಮುಖಕ್ಕೆ ಮಸಿಬಳಿದವರ ಮೇಲೂ ರೌಡಿಶೀಟರ್ ಕೇಸ್ ಬೆಳಗಾವಿ.ಕುಂದಾನಗರಿ ಎಂದೇ ಹೆಸರಾದ ಗಡಿನಾಡ ಬೆಳಗಾವಿ ನಗರವೊಂದರಲ್ಲಿಯೇ ಬರೊಬ್ಬರಿ 1050 ಜನ ರೌಡಿಶೀಟರಗಳಿದ್ದಾರೆ. ಕೆಲವೊಂದು ವ್ಯಯಕ್ತಿಕ ಘಟನೆಗಳಲ್ಲಿ ಹೊಡೆದಾಡಿಕೊಂಡವರನ್ನು ರೌಡಿಶೀಟರ ಪಟ್ಟಿಗೆ ಸೇರಿಸಲಾಗಿದೆ. ಅಚ್ಚರಿ ಸಂಗತಿ ಎಂದರೆ, ಇದರಲ್ಲಿ ಕೆಲವರು ಎರಡೂ ಭಾಷೆಯ ಹೋರಾಟಗಾರರೂ ಇದ್ದಾರೆ.ಬೆಳಗಾವಿ ಖಡೇಬಜಾರ ಉಪವಿಭಾಗ ಠಾಣೆ ವ್ಯಾಪ್ತಿಯಲ್ಲಿ ಬರುವ ಎಲ್ಲ ರೌಡಿಶೀಟರಗಳನ್ನು ಇಂದು ಒಂದೆಡೆ ಸೇರಿಸಿ ಖಡಕ್ ಎಚ್ಚರಿಕೆ ಕೊಡುವ ಕೆಲಸವನ್ನು…

Read More

ಪೊಕ್ಸೊ ಕೇಸ್‌ನಲ್ಲಿ ಪೊಲೀಸ್ ವ್ಯವಸ್ಥೆ ಫೇಲ್…!

🔹 ಪೊಲೀಸ್ ಅಸಡ್ಡೆಗೆ ಕಾನೂನಿನ ಚಾಟಿ – e-Belagavi ಬಹಿರಂಗಗೊಳಿಸಿದ ಸತ್ಯಕ್ಕೆ ಹೈಕೋರ್ಟ್ ಮಾನ್ಯತೆ. ಮಕ್ಕಳ ನ್ಯಾಯಕ್ಕೆ ದ್ರೋಹ: ಪೊಕ್ಸೊ ಕೇಸ್‌ನಲ್ಲಿ ಸಿಪಿಐ–ಪಿಎಸ್‌ಐಗಳ ಪಾತ್ರ ಬಹಿರಂಗ. ಸ್ಟೇಷನ್‌ನಿಂದ ಆಸ್ಪತ್ರೆಯವರೆಗೆ ನಿರ್ಲಕ್ಷ್ಯದ ಪಥ –ತನಿಖಾ ವರದಿಯಲ್ಲಿ ಸ್ಫೋಟಕ ವಿವರಗಳು ಮೂರು ದಿನ ತಾಯಿಯನ್ನು ಅಲೆದಾಡಿಸಿದ ಪೊಲೀಸರು – ಮಕ್ಕಳ ಹಕ್ಕುಗಳ ಮೇಲೆ ಬಿದ್ದ ಕಪ್ಪು ಚುಕ್ಕೆ ಪೊಕ್ಸೊ ಕಾಯ್ದೆ ಕಾಗದಕ್ಕಷ್ಟೇ? ಬೆಳಗಾವಿಯಲ್ಲಿ ಜಾರಿ ವಿಫಲವಾದ ಪೊಲೀಸ್ ವ್ಯವಸ್ಥೆ e-Belagavi ಬಹಿರಂಗ ಮಾಡಿದ ಸತ್ಯಕ್ಕೆ ಹೈಕೋರ್ಟ್ ಮುದ್ರೆ – ಸಿಪಿಐ,…

Read More

ನಿಮಗೆ ಅನುಭವ ಕಡಿಮೆ

ಬೆಳಗಾವಿ. ಮಾತಿಗೆ ನಿಂತರೆ ಶಾಸಕ ಅಭಯ ಪಾಟೀಲ ಹಿಂದೆ ಮುಂದೆ ನೋಡಲ್ಲ ಎನ್ನುವುದು ಇಂದಿಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರೂವ್ ಆಗಿದೆ. ಮರಾಠಿಯಲ್ಲಿ ದಾಖಲೆ ಕೇಳಿ ರಾಜಕಾರಣ ಶುರುಹಚ್ಚಿಕೊಂಡ‌ ಎಂಇಎಸ್ ಅಷ್ಟೇ ಅಲ್ಲ‌ವಿರೋಧ ಪಕ್ಷದವರಿಗೆ ಮಾತಿನ‌ ಮೂಲಕವೇ ಚಾಟಿ ಏಟು ಕೊಡುವ ಕೆಲಸವನ್ಬು ಶಾಸಕ ಅಭಯ ಪಾಟೀಲರು ಮಾಡಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೇಯರ್ ಅನುಮತಿಯೊಂದಿಗೆ ಅಭಯ ಪಾಟೀಲ ಮಾತನಾಡಲು ಎದ್ದು ನಿಂತಾಗ ಉತ್ತರ ಕ್ಷೇತ್ರದ ಶಾಸಕ ಆಸೀಪ್ ಶೇಠ ಮಾತನಾಡತೊಡಗಿದರು. ಈ ಸಂದರ್ಭದಲ್ಲಿಆಸೀಫ್ ಶೇಠ…

Read More

ತೋಟಿಗೇರ್, ದೊಡಮನಿಗೆ ಸನ್ಮಾನ

ಬೆಳಗಾವಿ. ಮಹಾನಗರ ಪಾಲಿಕೆಯಲ್ಲಿ ಕನ್ನಡ ಅನುಷ್ಠಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ನಗರದ ಇಬ್ಬರನ್ನು ಕನ್ನಡ ಜಾಗೃತ‌ ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಕ‌ ಮಾಡಿದೆ. ಹಿರಿಯ ನ್ಯಾಯವಾದಿಗಳೂ ಆಗಿರುವ ಬೆಳಗಾವಿ ಪತ್ರಕರ್ತ ಸಂಘ( ಮುದ್ರಣ) ದ ಕಾನೂನು‌ ಸಲಹೆಗಾರ‌ ರವೀಂದ್ರ ತೋಟಿಗೇರ ಮತ್ತು ಡಾ. K N DODDAMANI ಅವರನ್ನೂ ಸರ್ಕಾರ ನೇಮಕ‌ಮಾಡಿದೆ. ಈ ಹಿನ್ನೆಲೆಯಲ್ಲಿ ಕಳೆದ ದಿನ ಅವರನ್ನು ಪತ್ರಕರ್ತರ ಸಂಘದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಕಾಯಿತು. ಸಂಘದ ಅದ್ಯಕ್ಷ ವಿಲಾಸ ಜೋಶಿ, ರವಿ ಉಪ್ಪಾರ, ರಾಜು…

Read More
error: Content is protected !!