Headlines

ಮಾನವೀಯತೆ ಮೆರೆದ ಲೇಖಕಿಯರ ಸಂಘ ಮತ್ತು‌ AKBMS

ಹೆತ್ತ ಕರುಳಿನ ಕೂಗಿಗೆ ಮಿಡಿದ ಬೆಳಗಾವಿಯ ಲೇಖಕಿಯರು!ರಂಗನಟಿ ಭಾರತಿಗೆ ಎಕೆಬಿಎಂಎಸ್ ಆರ್ಥಿಕ ನೆರವು. ಮಾನವೀಯತೆ ಮರೆದ ಲೇಖಕಿಯರು ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಳಗಾವಿ: ಕೊಲ್ಲುವವನು ಒಬ್ಬನಿದ್ದರೆ ಕಾಯುವವನು ನೂರು ಜನರು ಎನ್ನುವ ಮಾತು ಇಂದು ಅಕ್ಷರಶಃ ಸತ್ಯವಾಯಿತು. ಬೆಳಗಾವಿಯ ಸಂಯುಕ್ತ ಕರ್ನಾಟಕ ಪ್ರಾದೇಶಿಕ ಕಚೇರಿ ಇಂತಹ ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಯಿತು. ಬೆಳಗಾವಿ ಲೇಖಕಿಯರ ಸಂಘ ಮತ್ತು ಅಶೋಕ ಹಾರನಹಳ್ಳಿ ನೇತೃತ್ವದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕ ನೊಂದ ಕಲಾವಿದೆಗೆ ನೆರವಿನ…

Read More

ಸವದತ್ತಿ ಯಲ್ಲಮ್ಮ ಪ್ರಾಧಿಕಾರಕ್ಕೆ ಅಶೋಕ ದುಡಗುಂಟಿ

ಬೆಳಗಾವಿ ಯಲ್ಲಮ್ಮನಗುಡ್ಡದ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಕೆಎಎಸ್ ಅಧಿಕಾರಿ ಅಶೋಕ ದುಡಗುಂಟಿ ಸೋಮವಾರ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ನಂತರ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ದುಡಗುಂಟಿ ಅವರನ್ನು ಯಲ್ಲಮ್ಮ ದೇವಸ್ಥಾನ ಸಿಬ್ಬಂದಿ ಸನ್ಮಾನಿಸಿದರು.ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ಎಸ್ ಎಮ್ ಮುದಗಲ್ಲ್ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು. ರಾಜ್ಯದಲ್ಲೇ ಅತಿಹೆಚ್ಚಿನ ಭಕ್ತರು ಯಲ್ಲಮ್ಮನ ಸನ್ನಿಧಿಗೆ ಆಗಮಿಸುತ್ತಾರೆ. ಇಲ್ಲಿ ಹೆಚ್ಚಿನ ಮೂಲಸೌಕರ್ಯ ಸೃಷ್ಟಿಸಿ, ಭಕ್ತರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಅವರು ಹೇಳಿದರು.

Read More

ಇವರ ಕೆಲಸ ಅದ್ಭುತ…!

ಬೆಳಗಾವಿ ಡಿಸಿಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ಉನ್ನತ ಹುದ್ದೆಗೇರಿದ ಡಾ.‌ಶಾಲಿನಿ ರಜನೀಶ್. ಅಧಿವೇಶನ ಸಂದರ್ಭದಲ್ಲೂ ಕೂಡ ಕಾಲಹರಣ ಮಾಡದ ಡಾ ಶಾಲಿನಿ. ರಜನೀಶ್. ಕೋಟೆ ಕೆರೆ ವೀಕ್ಷಣೆ ಸಂದರ್ಭದಲ್ಲಿ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿದ್ದ ಮುಖ್ಯ ಕಾರ್ಯದರ್ಶಿಗಳು. ವೆಗಾ ಹೆಲ್ಮೆಟ್ ತೆರಿಗೆ ವಸೂಲಿ ಲೋಪ.ಗಂಭೀರ ಪರಿಗಣನೆ ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಕಳೆದ ದಿ.9 ರಿಂದ ಚಳಿಗಾಲ ಅಧಿವೇಶನ ಶುರುವಾಗಿದೆ. ಇಡೀ ಮಂತ್ರಿ ಮಂಡಲವೇ ಗಡಿನಾಡಿಗೆ ಬಂದಿದೆ. ಆದರೆ ಅಧಿವೇಶನದೊಳಗೆ ಎಷ್ಟರ ಮಟ್ಟಿಗೆ ಅಭಿವೃದ್ಧಿ ಪರ ಚರ್ಚೆ ನಡೆಯುತ್ತಿದೆ…

Read More

ಭೂಸ್ವಾಧೀನ ಪ್ರಕ್ರಿಯೆ ಬೇಗ ಮುಗಿಸಿ

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಂಸದರಾದ ಜಗದೀಶ ಶೆಟ್ಟರ ಬೆಳಗಾವಿ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳಗಾವಿ ನಗರದ ಸುತ್ತಲಿನಲ್ಲಿ ರಿಂಗ್ ರೋಡ್ ಅಭಿವೃದ್ಧಿ ಕಾಮಗಾರಿಯ ಭೂ ಸ್ವಾದೀನ ಪ್ರಕ್ರಿಯೆಯನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಳಗಾವಿ – ಹುನಗುಂದ – ರಾಯಚೂರು ಮಾರ್ಗದ ರಸ್ತೆ ನಿರ್ಮಾಣದ ಕುರಿತು ಹಾಗೂ ನೈರುತ್ಯ ರೈಲ್ವೆ ವಲಯಕ್ಕೆ ಸಂಬಂಧಿಸಿದಂತೆ ಬೆಳಗಾವಿ – ಕಿತ್ತೂರು – ಧಾರವಾಡ ನೂತನ ರೈಲ್ವೆ ನಿರ್ಮಾಣ…

Read More

ಪಾಲಿಕೆ ಸಭೆ- ಜಂಗಿ ಕುಸ್ತಿ

ಬೆಳಗಾವಿ.ಗಡಿನಾಡ ಬೆಳಗಾವಿ ಮಹಾ ನಗರ ಪಾಲಿಕೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದಿದ್ದರೂ ಕೂಡ ಸಕಾರಣವಿಲ್ಲದ ನೋಟೀಸ್ ಕೊಟ್ಟ ಸರ್ಕಾರ ಮಹಾನಗರ ಪಾಲಿಕೆ ಬಗ್ಗೆನೇ ಜನ ಸಂಶಯದಿಂದ ನೋಡುವ ಹಾಗೆ ಮಾಡಿದೆ.ಆಡಳಿತಾಧಿಕಾರಿಯ ಅವಧಿಯಲ್ಲಿ ಆದ ಲೋಪಕ್ಕೆ ಈಗ ಪಾಲಿಕೆಯ ಎಲ್ಲ 58 ಜನ ನಗರಸೇವಕರು ಅನಗತ್ಯವಾಗಿ ತಮ್ಮ ತೆಲೆ ಬಿಸಿವಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ.ಮೂಲಗಳ ಪ್ರಕಾರ ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಪಾಲಿಕೆಗೆ ನೋಟೀಸ್ ಕೊಟ್ಟಿದ್ದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇಲ್ಲಿ ಪಾಲಿಕೆಯ ಪರಿಷತ್ ಸಭೆಯ…

Read More

ಶೆಟ್ಟರ್ ಬೆಳಗಾವಿಯಲ್ಲೇ ಮತದಾನ ಮಾಡ್ತಾರೆ..‌!

ಬೆಳಗಾವಿ. ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಡರ್ ಹೊರಗಿನವರು ಎನ್ನುವವರ ಬಾಯಿ ಈಗ ಬಂದ್ ಆದಂತಾಗಿದೆ. ಏಕೆಂದರೆ ಅವರು ನಾಳೆ ದಿ.‌7 ರಂದು ಬೆಳಗಾವಿ ಉತ್ತರ ಕ್ಷೇತ್ರದ ವಿಶ್ವೇಶ್ವರಯ್ಯ ಶಾಲೆಯಲ್ಲಿ ಮತದಾನ ಮಾಡಲಿದ್ದಾರೆ.

Read More

ಜಾರಕಿಹೊಳಿ ಪರಮಾಪ್ತನಿಗೆ ಚಾಕು ಇರಿತ

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಿನ್ನೆ ದಿ.‌4 ರಿಂದ ಆರಂಭವಾಗಿದೆ. ಮತ್ತೊಂದು ಕಡೆಗೆ ಸಮಸ್ಯೆ ಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹಣಿಯಲು ಬಿಜೆಪಿ ರಣತಂತ್ರ ರೂಪಿಸಿದೆ. ಇದೆಲ್ಕದರನಡುವೆ ಕಳೆದ ದಿನ ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಪರಮಾಪ್ತ ಮತ್ತು ಬಿಜೆಪಿ ಎಸ್ ಸಿ ಮೋರ್ಚಾಮುಖಂಡ ಪೃಥ್ವಿ ಸಿಂಗ್ ಗೆ ಚಾಕು ಇರಿತ ಪ್ರಕರಣ ನಡೆಯಿತು. ಇಲ್ಲಿ ಹಲ್ಲೆಗೊಳಗಾಗಿದ್ದ ಎನ್ನಲಾದ ಫೃಥ್ವಿಸಿಂಗ್ ವಿಡಿಯೋ ಮೂಲಕ ಬಿಡುಗಡೆ ಮಾಡಿದ ಹೇಳಿಕೆ ಒಂದಿಷ್ಟು ಗೊಂದಲಕ್ಕೆ ಕಾರಣವಾಯಿತು. ಅವರು ನೇರವಾಗಿ ವಿಡಿಯೋ…

Read More

ಮೇಯರ್ ವಿರುದ್ಧ ಕೇಸ್ ಆಗಲ್ಲ ಅಂದ ಪೊಲೀಸ್..!

ಮೊದಲ ಹಂತದಲ್ಲೇ ಮುಗ್ಗರಿಸಿದ ಕಾಂಗ್ರೆಸ್. ಮೇಯರ್ ವಿತುದ್ಧ ಕೇಸ್ ಆಗಲ್ಲ ಎಂದ ಪೊಲೀಸ್.. ಮಧ್ಯರಾತ್ರಿ ವರೆಗೆ ನಡೆದಿತ್ತು ಪ್ರಯತ್ನ. ಕೇಸ್ ದಾಖಲಿಸಲು ಬೆಂಗಳೂರಿನಿಂದಲೇ‌ ಬಂದಿತ್ತು ನಿರ್ದೇಶನ. ಆದರೆ 138 pk ಕೇಸ್ ಉರುಳಾಗುವ ಸಾಧ್ಯತೆ. ಈ ಬಗ್ಗೆ ಜಿಲ್ಲಾಮಂತ್ರಿ ಜೊತೆ ಮಾತಾಡಲು ಹೋಗಿದ್ದ ಆ ‘ಶ್ಯಾಣ್ಯಾ’ ಯಾರು? ಪಿಕೆ ಭಾನಗಡಿ ಅಭಯ ಸಹ ಗರಂ. ತನಿಖೆಗೆ ಸೈ ಅಂದಿದ್ದ ಅಭಯ. ಬೆಳಗಾವಿ. ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ಮೂಲಕವೇ ಮೇಯರ್ ಶೋಭಾ ಸೋಮನ್ನಾಚೆ ವಿರುದ್ಧ ಕೇಸ್ ಕೊಡಿಸುವ…

Read More

ಸ್ಥಾಯಿ ಸಮಿತಿ. ದಕ್ಷಿಣಕ್ಜೆ ಬಂಪರ್..!

ಶಾಸಕ ಅಭಯ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗ್ರೀನ್ ಸಿಗ್ನಲ್. ಮೂರು ದಕ್ಷಿಣಕ್ಕೆ ಮತ್ತು ಒಂದು ಉತ್ತರದ ಪಾಲಾದ ಕಮಿಟಿ. ಹೊಸಬರಿಗೆ ಅವಕಾಶ ಕೊಟ್ಟ ಅಭಯ. ಜಾತಿ, ಭಾಷೆ ಗಮನಿಸದೇ ಸಾಮಾಜಿಕ ನ್ಯಾಯ ಒದಗಿಸಿದ ಅಭಯ ಬೆಳಗಾವಿ. ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಯಲ್ಲಿ ಮೂರು ಅಧ್ಯಕ್ಷ ಸ್ಥಾನವು ಬಹುತೇಕ‌ ದಕ್ಷಿಣ ಕ್ಷೇತ್ರದ ಪಾಲಾಗಲಿದೆ. ಆರೋಗ್ಯ, ಪಿಡಬ್ಲುಡಿ ಮತ್ತು ಲೆಕ್ಕಪತ್ರ ಕಮಿಟಿ ಬೆಳಗಾವಿ ದಕ್ಷಿಣಕ್ಜೆ ಮತ್ತು ಕಂದಾಯ ಸ್ಥಾಯಿ ಸಮಿತಿ ಉತ್ತರ ಕ್ಷೇತ್ರದ ಪಾಲಾಗಿವೆ. ಕಳೆದ…

Read More

ಇನ್ನೊಬ್ಬ ಆ ನೌಕರ ಯಾರು?

ಬೆಳಗಾವಿ. ಮಹಿಳಾ ಅಧಿಕಾರಿಗೆ ಬದರಿಕೆ ಹಾಕಿ 50 ಲಕ್ಷ ರೂ ಬೇಡಿಕೆ ಇಟ್ಟ ಪ್ರಕರಣದಲ್ಲಿ‌ ಆ ಮೂವರು‌ ಯೂಟೂಬರ್ಸ್ ಜೊತೆ ಸೇರಿದ ಆ ನಾಲ್ಕನೆ ವ್ಯಕ್ತಿ ಯಾರು ಎನ್ನುವುದು‌ಈಗ ಚರ್ಚೆಯ ವಸ್ತುವಾಗಿದೆ. ಮೂಲಗಳ ಪ್ರಕಾರ ನಾಲ್ಕನೆಯ ವ್ಯಕ್ತಿ ಯೂಟೂಬರ್ ಅಲ್ಲ.‌ಬದಲಾಗಿ ಅವನೊಬ್ಬ ಸರ್ಕಾರಿ ನೌಕರ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಈ ಬಂಧಿತರ ಪೋನ್ ಗಳನ್ನು ಜಾಲಾಡಿದ ನಂತರ ಇನ್ನಷ್ಟು ಸತ್ಯ ಭಯಾನಕ ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ.

Read More
error: Content is protected !!