ಬೆಳಗಾವಿಗೆ ‘ಶುಭ’ ಆಡಳಿತ- ಪಾಲಿಕೆಯಲ್ಲಿ ತೆರಿಗೆ ಕ್ರಾಂತಿ
ಬೆಳಗಾವಿ.ಸುಧಾರಣೆ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಅಪಖ್ಯಾತಿಗೆ ಗುರಿಯಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ಈಗ ಮತ್ತೇ ಮೊದಲಿನ ಶ್ರೀಮಂತಿಕೆಯನ್ನು ಮರಳಿ ಪಡೆಯುತ್ತಿದೆ,ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ ಅವರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ತೆರಿಗೆ ವಸೂಲಾತಿಯಲ್ಲಿ ಇಟ್ಟ ಹೆಜ್ಜೆ ಹಿಂದಿಡದ ದಿಟ್ಟ ನಿರ್ಧಾರಗಳು… ಈ ಎಲ್ಲಕ್ಕೂ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.ಎರಡೆರಡು ಬಾರಿ ಸೂಪರ್ ಸೀಡ್ ಸಂಕಷ್ಟದಿಂದ ಪಾರಾದ ಮಹಾನಗರ ಪಾಲಿಕೆ ಈಗ ರಾಜ್ಯದ ಮಹಾನಗರ ಪಾಲಿಕೆಗಳಿಗಿಂತ ಬೆಳಗಾವಿ ಮಾದರಿ ಎನ್ನುವಷ್ಟರ ಮಟ್ಟಿಗೆ…

