ಬೆಳಗಾವಿಯಲ್ಲಿ ಓಲಾ, ಊಬರ್ ಇಲ್ಲ..! ಆದ್ರೆ ಆಟೋಗೆ ಮೀಟರ್ ಪಕ್ಕಾ
ಬೆಳಗಾವಿಯಲ್ಲಿ ಓಲಾ, ಊಬರ್‌ಗೆ ‘ನೋ ಎಂಟ್ರಿ’ – ಆಟೋಗಳಿಗೆ ಮೀಟರ್ ಕಡ್ಡಾಯವೇ! ಬೆಳಗಾವಿ: ‘‘ಬೆಳಗಾವಿಯಲ್ಲಿ ಓಲಾ, ಊಬರ್ ಸೇವೆಗಳಿಗೆ ಈವರೆಗೆ ಯಾವುದೇ ಅನುಮತಿ ನೀಡಿಲ್ಲ’’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಆಟೋ ಸಂಚಾರ ವ್ಯವಸ್ಥೆಗೆ ಶಿಸ್ತು ತರಲು ಮೀಟರ್ ಕಡ್ಡಾಯಗೊಳಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ. ನಗರದಲ್ಲಿ ಪತ್ರಕರ್ತರೊಂದಿಗೆ ಗುರುವಾರ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ‘‘ಆಟೋಗಳಿಗೆ ಮೀಟರ್ ಕಡ್ಡಾಯ ಮಾಡುವ ಕುರಿತು ನಾನು ಒಂದು ಸಭೆ ನಡೆಸಿದ್ದೇನೆ. ಅಲ್ಲದೆ, ಆರ್‌ಟಿಒ…

