ಬೆಳಗಾವಿ:
ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ವತಿಯಿಂದ ಮೊದಲ ಬಾರಿಗೆ ಆಯೋಜಿಸಲಾದ “ಶ್ರಾವಣ ಸಂಭ್ರಮ – ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ” ಎರಡು ದಿನಗಳ ಕಾಲ ವೈಭವದಿಂದ ನೆರವೇರಿತು. ಸಾಂಸ್ಕೃತಿಕ ಕಚೇರಿಗಳು, ಪ್ರತಿಭಾ ಪುರಸ್ಕಾರ ಮತ್ತು ಉದ್ಯಮ ಪ್ರೋತ್ಸಾಹಕ ಕಾರ್ಯಕ್ರಮಗಳೊಂದಿಗೆ ಸಮಾಜದ ಬಣ್ಣ, ಜೋಷ, ಉತ್ಸಾಹಕ್ಕೆ ಸಾಕ್ಷಿಯಾದ ಈ ಮೇಳ ಯಶಸ್ವಿಯಾಗಿ ಮುಕ್ತಾಯವಾಯಿತು.

🎶 ಸಾಂಸ್ಕೃತಿಕ ವೈಭವ
ಭಾನುವಾರದ ಬೆಳಗಿನ ಅಧಿವೇಶನದಲ್ಲಿ ಸಂತ ಮೀರಾ ಶಾಲೆ ಸೇರಿದಂತೆ ಹಲವು ಶಾಲೆಗಳ ವಿದ್ಯಾರ್ಥಿಗಳು ಭಕ್ತಿಗೀತೆ, ಭರತನಾಟ್ಯ ಮತ್ತು ಭಗವದ್ಗೀತೆ ಶ್ಲೋಕ ಪಠಣದ ಮೂಲಕ ಮನಮೋಹಕ ವಾತಾವರಣವನ್ನು ಸೃಷ್ಟಿಸಿದರು. ಈ ಅಧಿವೇಶನವನ್ನು ಟ್ರಸ್ಟಿ ಅನುಶ್ರೀ ದೇಶಪಾಂಡೆ ಸಮರ್ಪಕವಾಗಿ ಸಂಯೋಜಿಸಿದರು.
ಪ್ರತಿಭಾ ಪುರಸ್ಕಾರ – ಸನ್ಮಾನದ ಕ್ಷಣ
ಸಂಜೆಯ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಭವ್ಯವಾಗಿ ಜರುಗಿತು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
“ಬ್ರಾಹ್ಮಣ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಪ್ರದರ್ಶನ–ಮಾರಾಟ ಮೇಳ ಅತ್ಯಂತ ಯಶಸ್ವಿಯಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದ ಉದ್ಯಮಿಗಳು ಮತ್ತು ಪ್ರತಿಭಾವಂತರಿಗೆ ಹೊಸ ಪ್ರೇರಣೆಯಾಗುತ್ತವೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಇಲಾಖೆಯಿಂದ ಸಹಕಾರ ದೊರೆಯಲಿದೆ” ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಉದ್ಯಮಿ ರಾಮ್ ಭಂಡಾರೆ ಅವರು,
“ಮೊದಲ ಬಾರಿಗೆ ಆಯೋಜಿಸಿದ ಈ ಮೇಳಕ್ಕೆ ಸಮಾಜದ ಎಲ್ಲ ವಲಯಗಳಿಂದ ಉತ್ತಮ ಬೆಂಬಲ ಹಾಗೂ ಪ್ರೋತ್ಸಾಹ ದೊರೆತಿದೆ. ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ರೂಪಿಸುವುದೇ ನಮ್ಮ ಗುರಿ. ಸಮಾಜದ ಜನರನ್ನು ಒಂದೇ ವೇದಿಕೆಗೆ ತರಬೇಕೆಂಬ ಉದ್ದೇಶ ಇದರಲ್ಲಿ ಅಡಕವಾಗಿದೆ” ಎಂದು ತಿಳಿಸಿದರು.
🤝 ಸಮಾಜದ ಸಹಕಾರ
ಈ ಯಶಸ್ವಿ ಕಾರ್ಯಕ್ರಮಕ್ಕೆ ಕರ್ನಾಟಕ ಲಾ ಸೊಸೈಟಿ, ವಿಭಾಶ್ರೀ ಹೋಂಡಾ, ಸಮರ್ಥ ಅರ್ಬನ್ ಕೊ-ಆಪ್ ಕ್ರೆಡಿಟ್ ಸೊಸೈಟಿ, ಕರ್ನಾಟಕ ಬ್ಯಾಂಕ್, ಆರ್‌ಎನ್ ಫಿನ್-ಸರ್ವೀಸ್, ರೆಮಿಂಗ್ಟನ್ ಲಿಫ್ಟ್‌ಸೈನ್ಸ್ಡ್ ಎಲ್‌ಎಲ್‌ಪಿ, ಶ್ರೀ ಬಾಲಾಜಿ ಫೆರ್ರೋಕಾಸ್ಟ್, ಎಂ.ಎಸ್. ಎಂಟರ್‌ಪ್ರೈಸ್, ಶ್ರೀ ಗಜಾನನ ಅಲಾಯ್ಸ್ ಪ್ರಾಯೋಜಕರಾಗಿ ಬೆಂಬಲ ಒದಗಿಸಿದವು.
ಸಾಂಸ್ಕೃತಿಕ ಹಾಗೂ ಪ್ರದರ್ಶನ ಚಟುವಟಿಕೆಗಳಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಉಪಾಧ್ಯಕ್ಷ ಭರತ್ ದೇಶಪಾಂಡೆ ಸ್ವಾಗತಿಸಿ, ಟ್ರಸ್ಟಿಗಳಾದ ವಿ.ಎನ್. ಪಾಟೀಲ್, ಅನುಶ್ರೀ ದೇಶಪಾಂಡೆ, ಆರ್.ಎಸ್. ಕುಲಕರ್ಣಿ ಉಪಸ್ಥಿತರಿದ್ದರು.

