ಪ್ರಾರ್ಥನೆ, ಚಿಕಿತ್ಸೆ, ನಿರೀಕ್ಷೆ… ಎಲ್ಲವೂ ಕೊನೆಗೆ ವಿಧಿಯ ಮುಂದೆ ಮೌನ.
ಒಬ್ಬ ಸಹೋದರನ ಹೋರಾಟಕ್ಕೆ ವಿಧಿಯೇ ಕೊಟ್ಟ ಕ್ರೂರ ಉತ್ತರ
ಆಸ್ಪತ್ರೆಯ ಹಾಸಿಗೆಯ ಪಕ್ಕದಲ್ಲೇ ಕುಳಿತು ಸಹೋದರಿಗಾಗಿ ಜೀವ ಕಾದ ಸಂತೋಷ.
“ಮತ್ತೆ ಮನೆಗೆ ಕರೆದುಕೊಂಡು ಹೋಗಬೇಕು” ಎನ್ನುವ ಕನಸು ಕಣ್ಣೀರಿನಲ್ಲಿ ಕರಗಿತು.
ಬೆಳಗಾವಿ:
ಮನೆಯೊಳಗೆ ನಗುವಿನ ಧ್ವನಿಯಾಗಿದ್ದ ಮಗಳು, ಹೆತ್ತವರ ಕಣ್ಮುಂದೆಯೇ ಜೀವ ಕಳೆದುಕೊಂಡ ಕ್ಷಣ—ಅದು ಒಂದು ಕುಟುಂಬಕ್ಕೆ ಮಾತ್ರವಲ್ಲ, ಸುತ್ತಮುತ್ತಲಿನವರ ಮನವನ್ನೇ ನಡುಗಿಸುವ ದೃಶ್ಯ.
ಆ ನೋವಿನ ಮಧ್ಯೆ ಸಹೋದರಿವ ರತ್ನಾ ಮಡಗಿನಾಳ ಆಸ್ಪತ್ರೆಯ ಹಾಸಿಗೆಯ ಪಕ್ಕದಲ್ಲೇ ಕುಳಿತುಕೊಂಡು ಅವಳನ್ನು ಬದುಕಿಸಬೇಕೆಂಬ ಆಸೆಯೊಂದರಲ್ಲೇ ದಿನಗಳನ್ನು ಎಣಿಸಿದ್ದವರು ಸಂತೋಷ ಚಿನಗುಡಿ.!ಪ್ರಜಾವಾಣಿ ದಿನಪತ್ರಿಕೆಯ ಬೆಳಗಾವಿ ಜಿಲ್ಲಾ ಹಿರಿಯ ವರದಿಗಾರರಾಗಿರುವ
ಸಂತೋಷ ಚಿನಗುಡಿ ಕಳೆದ ಹಲವು ತಿಂಗಳಿಂದ ಸಹೋದರಿಯ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸಿದ್ದರು. ಆಸ್ಪತ್ರೆಯ ಓಡಾಟ, ವೈದ್ಯರ ಮಾತು, ಔಷಧಿ, ಚಿಕಿತ್ಸೆ—ಎಲ್ಲದರ ನಡುವೆ ಅವರು ತಮ್ಮ ವೃತ್ತಿ ಜವಾಬ್ದಾರಿಯನ್ನೂ ನಿಭಾಯಿಸುತ್ತಲೇ, ಸಹೋದರಿಯನ್ನು ಗುಣಮುಖಗೊಳಿಸಿ ಮತ್ತೆ ಮನೆಗೆ ಕರೆದುಕೊಂಡು ಬರಬೇಕೆಂಬ ದೊಡ್ಡ ಕನಸನ್ನು ಹೊತ್ತಿದ್ದರು.

ಆಸ್ಪತ್ರೆಯ ಹಾಸಿಗೆಯ ಪಕ್ಕದಲ್ಲಿ ಕುಳಿತಿದ್ದ ಅವರ ಕಣ್ಣುಗಳಲ್ಲಿ ಒಂದೇ ಬೇಡಿಕೆ—“ನನ್ನ ಸಹೋದರಿ ಮತ್ತೆ ಕಣ್ಣು ತೆರೆದು ಮಾತಾಡಲಿ.” ಆದರೆ ಬದುಕು ಕೆಲವೊಮ್ಮೆ ಮಾನವನ ಎಲ್ಲಾ ಪ್ರಯತ್ನಗಳನ್ನು ಮೀರಿಬಿಡುತ್ತದೆ. ಪ್ರಾರ್ಥನೆಗಳು, ನಿರೀಕ್ಷೆಗಳು, ನಿದ್ರೆಯಿಲ್ಲದ ರಾತ್ರಿಗಳು—ಎಲ್ಲವೂ ಕೊನೆಗೆ ವಿಧಿಯ ಮುಂದೆ ಮೌನವಾಗಿಬಿಟ್ಟವು.
ಸಹೋದರಿಯ ಸ್ಥಿತಿ ಕಂಡು ಸಂತೋಷ ಚಿನಗುಡಿ ಕಣ್ಣೀರಿಡುತ್ತಿದ್ದ ದೃಶ್ಯ ನೋಡಿದವರ ಮನವೇ ಕಲುಕಿತು. ತಮ್ಮ ಕೈಯಲ್ಲಿ ಏನೂ ಇಲ್ಲದ ಅಸಹಾಯಕತೆ, “ಇನ್ನೂ ಸ್ವಲ್ಪ ದಿನ ಇದ್ದಿದ್ದರೆ…” ಎನ್ನುವ ನೋವು, “ಹೇಗಾದರೂ ಉಳಿಸಬೇಕಿತ್ತು…” ಎನ್ನುವ ಅಂತರಾಳದ ಹಾತೊರತೆ—ಅವರ ಮೌನ ಕಣ್ಣೀರಲ್ಲೇ ಎಲ್ಲವೂ ಸ್ಪಷ್ಟವಾಗುತ್ತಿತ್ತು.

ಹೆತ್ತವರು ತಮ್ಮ ಮಗಳನ್ನು ಕಳೆದುಕೊಂಡ ದುಃಖದಲ್ಲಿ ಕುಸಿದರೆ, ಸಹೋದರನಾದ ಸಂತೋಷ ಮನದಾಳದಲ್ಲಿ ಒಡೆದುಹೋಗಿದ್ದರು. ಆಸ್ಪತ್ರೆಯ ಹಾಸಿಗೆಯ ಬಳಿಯಲ್ಲಿ ಕಾಳಜಿಯಿಂದ ಕಾದಿದ್ದ ದಿನಗಳು, ಮನೆಗೆ ಕರೆದುಕೊಂಡು ಹೋಗುವ ಕನಸು, ಮತ್ತೆ ಆರೋಗ್ಯವಾಗಿ ಬದುಕುವ ಭರವಸೆ ಒಂದೇ ಕ್ಷಣದಲ್ಲಿ ಚೂರುಚೂರಾಯಿತು.

ಈ ಘಟನೆ ಕೇವಲ ಒಂದು ಸಾವಿನ ಸುದ್ದಿ ಅಲ್ಲ; ಇದು ಒಂದು ಕುಟುಂಬದ ಅಶ್ರು, ಒಬ್ಬ ಸಹೋದರನ ಪ್ರೀತಿಯ ಸಾಕ್ಷಿ, ಹೆತ್ತವರ ಜೀವ ತುಂಡಾದ ವ್ಯಥೆ. .

