Headlines

ಜ್ಞಾನಮಂದಿರದ ದಾರಿಗೆ ಕಸದ ದುರ್ನಾತ ವರದಿಗೆ ಎಚ್ಚರಗೊಂಡ ಪಿಡಿಓ. ನಿರ್ಲಕ್ಷ್ಯಕ್ಕೆ ಕ್ರಮ ಯಾವಾಗ? ..

ರಾಜೀ ಇಲ್ಲದ e belagavi ಡಿಜಿಟಲ್ ಧ್ವನಿಗೆ ಕದಲಿದ ಆಡಳಿತ: ಜ್ಞಾನಮಂದಿರದ ದಾರಿಯ ಕಸದ ದುರ್ನಾತ ಬಯಲು

ಇ–ಬೆಳಗಾವಿ ವರದಿ ಫಲಶೃತಿ — ತಿಂಗಳುಗಳ ನಿರ್ಲಕ್ಷ್ಯಕ್ಕೆ ತೆರೆ; ನಿಯಮ ಉಲ್ಲಂಘಿಸಿದ ಗ್ರಾಮ ಪಂಚಾಯತಿ ಪಿಡಿಓ ವಿರುದ್ಧ ಕ್ರಮಕ್ಕೆ ಜೋರಾದ ಒತ್ತಾಯ


ಬೆಳಗಾವಿ:
ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ತೆರಳುವ ಜ್ಞಾನಮಂದಿರದ ರಸ್ತೆಯಲ್ಲೇ ಕಾನೂನು ಬಾಹಿರವಾಗಿ ಕಸದ ರಾಶಿ ಹಾಕಿ ರೈತಾಪಿ ವರ್ಗಕ್ಕೆ ತೊಂದರೆ ನೀಡಿದ ಪ್ರಕರಣ ಇದೀಗ ಆಡಳಿತಾತ್ಮಕ ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆಯಾಗಿ ಹೊರಹೊಮ್ಮಿದೆ.

ಗ್ರಾಮಸ್ಥರು ಈ ಸಂಬಂಧ ನೀಡಿದ ಮನವಿಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಕೂತಿದ್ದ ಗ್ರಾಮ ಪಂಚಾಯತಿ ಪಿಡಿಓ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ತೀವ್ರವಾಗಿದೆ.
ಗ್ರಾಮದ ಕೆಲವರು ಕಸದ ದುವರ್ಾಸನೆ ಮತ್ತು ಪರಿಸರ ಹಾನಿಯ ಕುರಿತು ಪಂಚಾಯತಿಗೆ ದೂರು ನೀಡಿದ್ದರು. ಆದರೆ ಪಿಡಿಓರವರು ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸಿಲಿಲ್ಲ. ಕೇಳಿದರೆ ಈಗ ಬ್ಯೂಜಿ, ಅಧಿವೇಶನ ಇದೆ. ಅದಾದ ನಂತರ ಸ್ಥಳಕ್ಕೆ ಹೋಗಿ ನೋಡುವೆ ಎನ್ನುವ ರೆಡಿಮೇಡ್ ಉತ್ತರ ಕೊಡುತ್ತ ಎಲ್ಲರನ್ನು ಸಾಗಹಾಕುತ್ತಿದ್ದರು.

ರಾತ್ರೋ ರಾತ್ರಿ ಕಸವನ್ನು ಜೆಸಿಬಿ ಮೂಲಕ ತೆಗೆಯುತ್ತಿರುವ ಗ್ರಾಮ ಪಂಚಾಯತಿ.

ಅಷ್ಟೇ ಅಲ್ಲ ನಿಯಮಾನುಸಾರ ಕಸ ವಿಲೇವಾರಿಗೆ ನಿಗದಿತ ಸ್ಥಳ ಹಾಗೂ ಅನುಮತಿ ಅಗತ್ಯವಿದ್ದರೂ, ಅದನ್ನು ಸಂಪೂರ್ಣವಾಗಿ ಉಲ್ಲಂಘಿಸಿ ರಸ್ತೆ ಬದಿಯಲ್ಲೇ ಕಸದ ರಾಶಿ ಹಾಕಲು ಅನುಮತಿ ನೀಡಿದ್ದರು..


ಈ ನಿರ್ಲಕ್ಷ್ಯಕ್ಕೆ ತಿರುವು ನೀಡಿದ್ದು `ಇ ಬೆಳಗಾವಿ’ ಡಿಜಿಟಲ್ ವರದಿ. ಜ್ಞಾನಮಂದಿರದ ದಾರಿಯಲ್ಲಿ ಕಸದ ದುರ್ವಾಸನೆ ಎಂಬ ಶೀರ್ಷಿಕೆಯಡಿ ದಿ. 14 ರಂದು ಪ್ರಕಟಿಸಿದ ವರದಿಯಿಂದ ಎಚ್ಚೆತ್ತ ಪಿಡಿಓ ಅವರು ರಾತ್ರೋರಾತ್ರಿ ಜೆಸಿಬಿ ಮೂಲಕ ಆ ಕಸದ ಮೇಲೆ ಮಣ್ಣು ಹಾಕುವ ಕೆಲಸ ಮಾಡಿದರು.. ಅದು ಕೂಡ ನಿಯಮಬಾಹಿರ ಎನ್ನುವುದರಲ್ಲಿ ಎರಡು ಮಾತಿಲ್ಲ.,
ಇಲ್ಲಿ. ಪಿಡಿಓ ಅವರು ಕಸದ ರಾಶಿಯನ್ನು ಸಂಪೂರ್ಣವಾಗಿ ತೆರವುಗೊಳಿಸುವ ಬದಲು, ಅದೇ ಸ್ಥಳದಲ್ಲಿ ಅದರ ಮೇಲೆಯೇ ಮಣ್ಣು ಹಾಕಿಸಿ ಮುಚ್ಚಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಸಮಸ್ಯೆ ಪರಿಹಾರವಾಗಿಲ್ಲ, ಕೇವಲ ಮುಚ್ಚಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನೂನುಬಾಹಿರವಾಗಿ ಕಸ ಹಾಕಲು ಅವಕಾಶ ನೀಡಿದ ಪಿಡಿಓ ವಿರುದ್ಧ ಕ್ರಮ ಏಕೆ ಕೈಗೊಳ್ಳಲಾಗಿಲ್ಲ?
ಸಾರ್ವಜನಿಕರ ದೂರುಗಳನ್ನು ಕಡೆಗಣಿಸಿ ಪರಿಸರ ಮತ್ತು ಕೃಷಿ ಭೂಮಿಗೆ ಹಾನಿ ಮಾಡಿದ ಅಧಿಕಾರಿಗೆ ಉತ್ತರದಾಯಕತೆ ಇಲ್ಲವೇ?
ಜಿಲ್ಲಾ ಪಂಚಾಯತ್ ಆಡಳಿತವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೇವಲ ಕಸದ ಸ್ಥಳಾಂತರಕ್ಕೆ ಸೀಮಿತವಾಗದೇ, ನಿಯಮ ಉಲ್ಲಂಘನೆಗೆ ಹೊಣೆಗಾರರಾದ ಗ್ರಾಮ ಪಂಚಾಯತಿ ಪಿಡಿಓ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬುದು ಸ್ಪಷ್ಟ ಬೇಡಿಕೆ.
ಪತ್ರಿಕಾ ವರದಿ ನಂತರ ಮಾತ್ರ ಚಲಿಸುವ ಆಡಳಿತ ವ್ಯವಸ್ಥೆ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿರುವ ಈ ಪ್ರಕರಣದಲ್ಲಿ, ಕ್ರಮವೇ ನಿಜವಾದ ಉತ್ತರವಾಗಬೇಕಿದೆ. ಕಾದು ನೋಡೋಣ.

Leave a Reply

Your email address will not be published. Required fields are marked *

error: Content is protected !!