ಇದು Ebelagavi ಡಿಜಿಟಲ್ ಮಿಡಿಯಾ ಎಫೆಕ್ಟ್.
ಒಂದೇ ತಿಂಗಳಲ್ಲಿ ನಾಲ್ಕು ಕೇಸ್. ಪೊಲೀಸ ವಿರುದ್ಧ ಕರ್ತವ್ಯ ಲೋಪದ ಆರೋಪ.
ಮಕ್ಕಳ ರಕ್ಷಣಾ ಆಯೋಗದಿಂದ ಸ್ವಯಂ ಪ್ರಢರಿತ ದೂರು.
ಬೆಳಗಾವಿ: ಡಿಸೆಂಬರ್ ತಿಂಗಳಲ್ಲೇ ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕು ಪೊಕ್ಕೊ (ಮಕ್ಕಳ ಲೈಂಗಿಕ ದೌರ್ಜನ್ಯ) ಪ್ರಕರಣಗಳು ದಾಖಲಾಗಿದ್ದರೂ, ಅವುಗಳಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಗಳು ದೂರು ನಿರ್ಲಕ್ಷ್ಯ ತೋರಿವೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಗನ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

ಸಂಯುಕ್ತ ಕರ್ನಾಟಕ* ಮತ್ತು *ಇ ಬೆಳಗಾವಿ ಡಿಜಿಟಲ್ ಮಿಡಿಯಾ* ಗುರುವಾರ ದಿ 18 ರಂದು ‘ಬೆಳಗಾವೀಲಿ ಮಕ್ಕಳ ದೌರ್ಜನ್ಯಕ್ಕೂ ಮೌನ’ ಎನ್ನುವ ಶೀರ್ಷಿಕೆಯಡಿ ಸವಿಸ್ತಾರವಾಗಿ ವರದಿಯನ್ನು ಪ್ರಕಟಿಸಿತ್ತು.
ಈ ಹಿನ್ನೆಲೆಯನ್ನು ಗಮನಿಸಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖುದ್ದು ಹಾಜರಾಗಿ ವಿಚಾರಣೆ ನಡೆಸುವಂತೆ ಆದೇಶ ನೀಡಿದೆ.
ಈ ಸಂಬಂಧ ಆಯೋಗದ ಸದಸ್ಯೆ ಅಪರ್ಣಾ ಎಂ.ಕೊಳ್ತಾ, ಜಿಲ್ಲಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಪತ್ರವನ್ನು ರವಾನಿಸಲಾಗಿದೆ. ಅಷ್ಟೇ ಅಲ್ಲ ಕರ್ತವ್ಯಲೋಪ ಎಸಗಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವಂತೆ ಮತ್ತು ಕೈಗೊಂಡ ಕ್ರಮದ ವರದಿಯನ್ನು ತುರ್ತಾಗಿ ಸಲ್ಲಿಸುವಂತೆ ಆಯೋಗ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

*Ebelagavi ಮತ್ತು ಸಂಯುಕ್ತ ಕರ್ನಾಟಕ ವರದಿ ಫಲಶ್ರುತಿ*
ದಾಖಲಾಗಿರುವ ನಾಲ್ಕು ಪೊಕ್ಕೊ ಪ್ರಕರಣಗಳಲ್ಲಿ ಮೂರು ಪ್ರಕರಣಗಳು ಬೆಳಗಾವಿ ನಗರದ ಎ.ಪಿ.ಎಂ.ಸಿ. ಪೊಲೀಸ್ ಠಾಣಾ ವ್ಯಾಪ್ತಿಗೆ, ಮತ್ತೊಂದು ಗ್ರಾಮೀಣ ಠಾಣಾ ವ್ಯಾಪ್ತಿಗೆ ಸೇರಿವೆ. ಆದರೆ, ಯಾವುದೇ ಪ್ರಕರಣದಲ್ಲೂ ಪೊಕ್ಕೊ ಕಾಯ್ದೆಯನ್ವಯ ತಕ್ಷಣದ ಕ್ರಮ ಜರುಗಿಸಿರುವ ದಾಖಲೆ ಇಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪೊಕ್ಸೊ ಪ್ರಕರಣಗಳಲ್ಲೂ ದೂರು ದಾಖಲಿಸದೇ ವಿಳಂಬ ಪ್ರವೃತ್ತಿ ಮುಂದುವರಿದರೆ, ಮಕ್ಕಳ ರಕ್ಷಣೆ ಕುರಿತು ಗಂಭೀರ ಪ್ರಶ್ನೆಗಳು ಎದುರಾಗುತ್ತವೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ತನಿಖೆಗೆ ಆಯುಕ್ತರ ಆದೇಶ.
ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದಾಖಲಾದ ಪೋಕ್ಷೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಪೊಲೀಸ್ ಆಯುಕ್ತ ಭೂಷಣ ಗುಲಾಬ ಬೋರಸೆ ಆದೇಶ ಮಾಡಿದ್ದಾರೆ.

