ವೇದಾಂತ ಫೌಂಡೇಶನ್ ಕಾರ್ಯಕ್ರಮದಲ್ಲಿ ಮೇಯರ್ ಮಾತು
ಶಿಕ್ಷಕರು, ಪತ್ರಕರ್ತರು ಮತ್ತು ಪೊಲೀಸರ ಸನ್ಮಾನ.
ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡಲು ಎಲ್ಲರ ಸಹಕಾರ ಅಗತ್ಯ- ಉಪಮೇಯರ್ ವಾಣಿ ಜೋಶಿಮಾತು
ಬೆಳಗಾವಿ:
ಸಮಾಜ ನಿಮರ್ಾಣದಲ್ಲಿ ಎಲ್ಲರ ವರ್ಗಗಳು ಜನರು ಅಷ್ಟೇ ಅಲ್ಲ, ಸ್ವಚ್ಛತಾ ಕಾಮರ್ಿಕರ ಪಾತ್ರವೂ ಅತ್ಯಂತ ಮಹತ್ವದ್ದು ಎಂದು ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮಂಗೇಶ ಪವಾರ್ ಹೇಳಿದರು,
ವೇದಾಂತ್ ಫೌಂಡೇಶನ್ ಆಯೋಜಿಸಿದ್ದ ಶಿಕ್ಷಕರು-ಪತ್ರಕರ್ತರು-ಪೊಲೀಸರ ಗೌರವ ಸಮಾರಂಭದಲ್ಲಿ ಅವರು ಮಾತನಾಡಿದರು,
ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುತ್ತಾರೆ, ಪತ್ರಕರ್ತರು ಸಮಾಜದ ಕಣ್ಣಾಗಿದ್ದಾರೆ, ಪೊಲೀಸರು ಶಾಂತಿ ಕಾನೂನು ಕಾಪಾಡುತ್ತಾರೆ. ಆದರೆ ಈ ಎಲ್ಲರ ಜೊತೆಗೆ ನಗರವನ್ನು ಸ್ವಚ್ಛವಾಗಿ ಇಡುವ ಸ್ವಚ್ಛತಾ ಕಾಮರ್ಿಕರು ಕೂಡ ಸಮಾಜದ ನಿಜವಾದ ಹೀರೋಗಳು. ಅವರಿಲ್ಲದೆ ನಗರ ಬದುಕು ಅಸ್ತವ್ಯಸ್ತವಾಗುತ್ತದೆ, ಎಂದು ಮೇಯರ್ ಹೇಳಿದರು.
ಸ್ವಚ್ಛತಾ ಕಾಮರ್ಿಕರ ಸೇವೆಯನ್ನು ಕೂಡ ಸಮಾಜ ಗೌರವಿಸಬೇಕು ಎಂದು ಅವರು ಸಂಘಟಕರನ್ನು ಕೋರಿದರು,

ನಾವು ಪ್ರಶಸ್ತಿಗಳು ಕೊಡುವಾಗ, ಗೌರವಿಸುವಾಗ ಕೇವಲ ವೇದಿಕೆಯ ಮೇಲಿರುವವರಷ್ಟೇ ಅಲ್ಲ, ರಸ್ತೆಯಲ್ಲಿ, ಚರಂಡಿಗಳಲ್ಲಿ ದುಡಿಯುವವರ ಸೇವೆಯನ್ನೂ ಮರೆಯಬಾರದು ಎಂದು ಹೇಳಿದರು.
ಪ್ಲಾಸ್ಟಿಕ್ ಮುಕ್ತ ಬೆಳಗಾವಿ ನಮ್ಮೆಲ್ಲರ ಹೊಣೆ. ಸಕರ್ಾರ ಮಾತ್ರವಲ್ಲ, ನಾಗರಿಕರೂ ಹೊಣೆ ಹೊತ್ತು ನಡೆದುಕೊಳ್ಳಬೇಕು ಎಂದರು..
ಪಾಲಿಕೆಯ ಉಪಮೇಯರ್ ವಾಣಿ ಜೋಶಿ ಮಾತನಾಡಿ, ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡಲು ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು. ಫಾಸ್ಟ್ ಫುಡ್ ಸಂಸ್ಕೃತಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದರಿಂದ ಜನರು ಆರೋಗ್ಯದ ಬಗ್ಗೆ ಎಚ್ಚರವಾಗಿರಬೇಕು ಎಂದರು.
ಡಿಸಿಪಿ ನಿರಂಜನರಾಜೆ ಅರಸ್, ಝುವಾರಿ ಅಗ್ರೋ ಕೆಮಿಕಲ್ನ ಮಾಜಿ ಉಪಾಧ್ಯಕ್ಷ ಆರ್.ವೈ. ಪಾಟೀಲ, ಸಂತೋಷ್ ಜೈನೋಜಿ, ಲಿಂಗರಾಜ್ ಜಗಜಂಪಿ, ವೀರೇಶ್ ಕಿವಡಸಣ್ಣವರ ಮತ್ತಿತರರು ಮಾತನಾಡಿದರು,.

ಉದ್ಯಮಿ ಅಶೋಕ್ ನಾಯಕ್ ಮಾತನಾಡಿ, ಉತ್ತಮ ಸಮಾಜ ನಿಮರ್ಾಣಕ್ಕೆ ಶಿಕ್ಷಕರು, ಪತ್ರಕರ್ತರು ಮತ್ತು ಪೊಲೀಸರು ಪ್ರಮುಖ ಪಾತ್ರ ವಹಿಸುತ್ತಾರೆ. ಈ ಮೂರು ವರ್ಗಗಳ ಸಮಪರ್ಿತ ಸೇವೆಯಿಂದಲೇ ಸುದೃಢ ಸಮಾಜ ರೂಪುಗೊಳ್ಳುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಆರ್.ಎಂ. ಚೌಗಲೆ ಅವರು, ಉತ್ತಮ ಶಿಕ್ಷಕರು, ಪ್ರಾಮಾಣಿಕ ಪತ್ರಕರ್ತರು ಮತ್ತು ನಿಷ್ಠಾವಂತ ಪೊಲೀಸರು ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುತ್ತಾರೆ ಎಂದರು.
ವೇದಾಂತ್ ಫೌಂಡೇಶನ್ ವತಿಯಿಂದ ಸಂಯುಕ್ತ ಕನರ್ಾಟಕದ ಮುಖ್ಯವರದಿಗಾರ ವಿಲಾಸ್ ಜೋಶಿ, ಪುಢಾರಿ ಪತ್ರಿಕೆಯ ಮುಖ್ಯ ಪ್ರತಿನಿಧಿ ಜಿತೇಂದ್ರ ಶಿಂದೆ, ಸಕಾಳ ಪತ್ರಿಕೆಯ ಬಿ.ಬಿ. ದೇಸಾಯಿ, ಶಿಕ್ಷಕ ಶೇಖರ್ ಕರಂಬೇಲ್ಕರ್, ಯುವರಾಜ ರತ್ನಾಕರ್, ಕಲ್ಲಪ್ಪ ಪಾಟೀಲ, ಉಮೇಶ್ ಬಾಲೇಕುಂದ್ರಿ, ಪೊಲೀಸ್ ಕಾನ್ಸ್ಟೇಬಲ್ ಮಹೇಶ್ ಪಾಟೀಲ, ಹೆಡ್ ಕಾನ್ಸ್ಟೇಬಲ್ ಶ್ರೀಕಾಂತ್ ಉಪ್ಪಾರ್
ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ಬಿ.ಬಿ. ದೇಸಾಯಿ, ಶೇಖರ್ ಕರಂಬೇಲ್ಕರ್ ಮಾತನಾಡಿದರು. ಸಿಎ ಜೀವನ ಶಹಾಪುರಕರ, ಧನಶ್ರೀ ಸೊಸೈಟಿ ಅಧ್ಯಕ್ಷ ನಿತಿನ್ ಯೇತೋಜಿ, ವಿ.ಕೆ. ಶೃಂಗೇರಿ, ಫೌಂಡೇಶನ್ ಅಧ್ಯಕ್ಷೆ ಜಯಶ್ರೀ ಪಾಟೀಲ, ಸಂಸ್ಥಾಪಕ ಸತೀಶ್ ಪಾಟೀಲ, ಉಪಾಧ್ಯಕ್ಷ ಕಲ್ಲಪ್ಪ ಕಡಮ್ ಇದ್ದರು.

