ಇದು ಹಗರಣಗಳ ‘ರಾಜ

ಹಗರಣಗಳ ರಾಜನಿಗೆ ಅಡ್ಡಿ ಇಲ್ಲವೇ?
▪️ ಸಿಎಂ ಆದೇಶಕ್ಕೂ ಸವಾಲಾದ ‘ಅದೃಶ್ಯ ಶಕ್ತಿ’ ಯಾರು?
▪️ ಪೋಷಣ್ ಯೋಜನೆ: ಮಕ್ಕಳ ತೂಕ ಕಡಿಮೆ, ಬಿಲ್ಲುಗಳ ತೂಕ ಜಾಸ್ತಿ!
▪️ ಅಂಗನವಾಡಿ—ಕಲಿಕೆಯ ಕೇಂದ್ರವೋ? ಕಮಿಷನ್ ಕಾರ್ಖಾನೆಯೋ?

ಮಕ್ಕಳ ತಟ್ಟೆಯಿಂದ ಕೋಟಿಗಳ ದಾರಿ!
▪️ 450 ರೂ ಬ್ಯಾನರ್ ಗೆ 988 ರೂ..ಇದರ ಸೂತ್ರಧಾರ ಯಾರು..
▪️ ಸ್ಮಾರ್ಟ್ ಮೊಬೈಲ್ ಹೆಸರಿನಲ್ಲಿ ‘ಸ್ಮಾರ್ಟ್’ ದೋಚಾಟ
▪️ ಪಾತ್ರೆ–ಪರಿಕರದಿಂದ ಟಿವಿವರೆಗೆ: ಎಲ್ಲವೂ ಬಿಲ್ ಆಟ
.

ವರ್ಗಾವಣೆ ಆದೇಶ ಕಾಗದದಲ್ಲೇ ಸೀಮಿತ!
▪️ ಸಚಿವರ ಕೈ ಬಿಗಿತವೇ? ಅಥವಾ ಕೈಕಟ್ಟು ಆಡಳಿತವೇ?
▪️ ಇಲಾಖೆಯೊಳಗಿನ ಹೈಕಮಾಂಡ್ ಯಾರದು?
▪️ ಸರ್ಕಾರವೇ ಶರಣಾದ ‘ಕಂಟ್ರೋಲ್ ಪಾಯಿಂಟ್’

ಇಲಾಖೆ ಹಗರಣಕ್ಕೆ ಬಿಹೆಪಿ‌ ಟ್ವಿಟ್ಚರ್ಚೆಗೆ ಗ್ರಾಸ್

ದಾಖಲೆ ಸೋರಿಕೆ ಎಲ್ಲಿಂದ?-

ಬಹಳ‌ ಕನಸುಗಳನ್ನು ಕಟ್ಟಿಕೊಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜವಾಬ್ದಾರಿ ಹೊತ್ತುಕೊಂಡವರು‌ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ. ಗಟ್ಟಿಗಿತ್ತಿ ಹೆಣ್ಣುಮಗಳು.

ಆದ್ರೆ ಈ ಇಲಾಖೆಯನ್ನು ಆಳವಾಗಿ ಅಭ್ಯಸಿಸದೇ‌ ಬೆಳ್ಳಗಿದ್ದುದು ಹಾಲು ಎಂದು ತಿಳಿದುಕೊಂಡು ಹೊರಟವರು. ಇದು ಅವರ ಇಲಾಖೆಯಲ್ಲಿ ಅದಿಕಾರಿಗಳ ದುರುಪಯೋಗಕ್ಕೆ ಕಾರಣ.ಅದನ್ನು ಬಿಡಿ. ಈಗ ಬರುತ್ತಿರುವ ಹಗರಣಗಳ‌ ದಾಖಲೆ ಪತ್ತೆ ಮಾಡಲು ಹರಸಾಹಸ ಮಾಡಬೇಕಾದ ಅವಶ್ಯಕತೆಯಿಲ್ಲ.

ಸಚಿವ್ ಹಿಂದೆ‌ ಮುಂದೆ ಪೋಜು ಕೊಡುವವರೇ ಆ ಎಲ್ಲ ದಾಖಲೆಗಳನ್ನು ಹೊರ ಹಾಕುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಚಿವರು ಮೊದಲು ಅದನ್ನು ತಡೆಯುವ ಕೆಲಸ ಮಾಡಬೇಕಿದೆ.

ebelagavi special report

ಬೆಂಗಳೂರು.

ಈ ವರದಿ ಯಾವುದೇ ಪೂರ್ವಾಗ್ರಹ ಪಿಡೀತವಲ್ಲ. ಹಲವು ಕನಸುಗಳನ್ನು ಕಟ್ಟಿಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಇಲಾಖೆಯ ಮೂಲಕ ಕ್ಷೇತ್ರಕ್ಕೆ‌ ಮತ್ತು ಜಿಲ್ಲೆಗೆ ಒಳ್ಳೆಯ ಹೆಸರು ತರಬೇಕು ಎನ್ನುವ ಉದ್ದೇಶದಿಂದ ಈ‌ ವರದಿ.

ಸರ್ಕಾರ ಅಂದ ಮೇಲೆ ಇಲಾಖೆಯಲ್ಲಿ ಆರೋಪಗಳು ಕೇಳಿ ಬರುವುದು ಸಹಜ. ಆದರೆ ಆರೋಪ ಬಂದ ಸಂದರ್ಭದಲ್ಲಿ ಜವಾಬ್ದಾರಿ ಹೊತ್ತ ಸಚಿವರು ತನಿಖೆ‌ ನಡೆಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಿದರೆ ಯಾರೂ ಅದನ್ನು ಪ್ರಶ್ನ ಮಾಡುವ ಪ್ರಮೇಯವೇ ಬರಲ್ಲ.

ಈಗ ಬಂದಿರುವ ಆರೋಪಗಳು ಸಣ್ಣವಲ್ಲ. ಸಚಿವರು ಅವುಗಳ ಬಗ್ಗೆ ತನಿಖೆ ನಡೆಸುವ ಕೆಲಸ ಮಾಡಬೇಕು. ಅಥವಾ ಇವುಗಳಿಗೆ ಸ್ಪಷ್ಟನೆ ಕೊಡುವುದಾಗಬೇಕು.ಆ ನಿಟ್ಟಿನಲ್ಲಿ ಈ ವರದಿ

ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಸಾಲಿನಲ್ಲಿ ನಿಲ್ಲಿಸಿದರೆ, ಹಗರಣಗಳ ಹಾರ ತೊಟ್ಟು ಮುನ್ನಡೆಯುವ ಇಲಾಖೆ ಒಂದೇ—ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ. ಮಕ್ಕಳ ಪೋಷಣೆಗೆ ಹುಟ್ಟಿದ ಇಲಾಖೆ, ಇಂದು ಭ್ರಷ್ಟಾಚಾರದ ಪೋಷಕವಾಗಿ ಮಾರ್ಪಟ್ಟಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಗಂಭೀರವಾಗಿ ಕೇಳಿಬರುತ್ತಿದೆ.
ಇಲ್ಲಿ ಗಮನಿಸಬೇಕಾದ ವ್ಯಂಗ್ಯಾತ್ಮಕ ಸತ್ಯವೇನೆಂದರ
ಇಷ್ಟೊಂದು ಹಗರಣಗಳ ನಡುವೆಯೂ ಇಲಾಖೆಯಲ್ಲಿ ಒಬ್ಬ ‘ಅದೃಶ್ಯ ಸುಪ್ರೀಂ’ ಇದ್ದಾರಂತೆ. ಅವರ ಮರ್ಜಿಯಿಲ್ಲದೆ ಎಲೆ ಕೂಡ ಸರಿಯದು ಎನ್ನುವ ಮಾತು ಅಧಿಕಾರಿಗಳ ನಡುವೆ ಗುಸುಗುಸುವ ಸತ್ಯ.
ಖುದ್ದು ಮುಖ್ಯಮಂತ್ರಿ ವರ್ಗಾವಣೆ ಆದೇಶ ಮಾಡಿದರೂ ಅದು ಜಾರಿಯಾಗದೇ ಉಳಿದರೆ, ಆ ‘ಕಂಟ್ರೋಲ್ ಪಾಯಿಂಟ್’ ಎಷ್ಟು ಬಲಿಷ್ಠವೋ ಊಹಿಸಿಕೊಳ್ಳುವುದೇ ಸಾಕು!

ಹಗರಣಗಳ ಲೆಕ್ಕಾಚಾರ: ಮಕ್ಕಳ ತಟ್ಟೆಯಿಂದ ಕೋಟಿಗಳ ತನಕ. ಈ ಆರೋಪಗಳು ಸಾನಾಜಿಕ‌ ಜಾಲತಾಣದಲ್ಲಿ ವೈರಲ್ ಕೂಡ ಆಗುತ್ತಿವೆ.
ಒಂದು ಇಲಾಖೆ—ಹಲವು ಹಗರಣಗಳ ಆರೋಪಗಳ. ಪಟ್ಟಿ ನೋಡಿದರೆ ಇದು ತನಿಖಾ ಸಂಸ್ಥೆಗಳ ಸಿಲೆಬಸ್ ಎಂಬಂತಿದೆ:
ಮಕ್ಕಳ ಆಹಾರ ಸರಬರಾಜು ಹಗರಣ
ತಿಂಗಳಿಗೆ ₹70 ಕೋಟಿ – ವರ್ಷಕ್ಕೆ ₹840 ಕೋಟಿ!
ಸ್ಮಾರ್ಟ್ ಮೊಬೈಲ್ ಖರೀದಿ ಹಗರಣ
75,938 ಮೊಬೈಲ್‌ಗಳು – ₹89.61 ಕೋಟಿ
ಅಧಿಕಾರಿಗಳ ವರ್ಗಾವಣೆ ಹಗರಣ
ಅಂಗನವಾಡಿ ಮೇಲ್ವಿಚಾರಕಿಯರ ನೇಮಕಾತಿ ಹಗರಣ
ಆರೋಗ್ಯ ಕಿಟ್ ಸರಬರಾಜು ಹಗರಣ
ವರ್ಷಕ್ಕೆ ₹21 ಕೋಟಿ
ಶಾಲಾಪೂರ್ವ ಶಿಕ್ಷಣ ಕಿಟ್
ಪ್ರತಿವರ್ಷ ₹35 ಕೋಟಿ
ಅಂಗನವಾಡಿ ಶಿಕ್ಷಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು
(ವ್ಯವಸ್ಥೆಯ ವೈಫಲ್ಯವೋ? ಮೌನದ ಸಂಸ್ಕೃತಿಯೋ?)
ಮುಂಬಡ್ತಿ ಭ್ರಷ್ಟಾಚಾರ – ಅಧಿಕಾರಿಗಳ ‘ಸೀನಿಯಾರಿಟಿ’ಗೆ ದರಪಟ್ಟಿ?
ಅಂಗನವಾಡಿ ಸಹಾಯಕಿಯರಿಗೆ ಸೀರೆ ಖರೀದಿ ಹಗರಣ
₹12 ಕೋಟಿ
ರಿಜಿಸ್ಟರ್, ಆಟದ ಕಿಟ್ ಸಪ್ಲೈ ಹಗರಣಗಳು
ಅಂಗನವಾಡಿ ಕಟ್ಟಡ ನಿರ್ಮಾಣ ಗುತ್ತಿಗೆ ಹಗರಣ
6/4 ಅಳತೆಯ ‘ಐಸಿಡಿಎಸ್’ ಬ್ಯಾನರ್ ಅಳವಡಿಕೆ ಹಗರಣ
₹6.90 ಕೋಟಿ
ಸಕ್ಷಮ ಅಂಗನವಾಡಿ–ಪೋಷಣ್ ಯೋಜನೆ
ಗ್ರೋಥ್ ಮಾನಿಟರಿಂಗ್ ಡಿವೈಸ್ ಹಗರಣ – ₹28 ಕೋಟಿ
ಶುದ್ಧ ಶೇಖರಣಾ ಸೌಲಭ್ಯ ಹೆಸರಿನಲ್ಲಿ ಪಾತ್ರೆ–ಪರಿಕರ ಖರೀದಿ
₹174 ಕೋಟಿ
ಟಿ.ವಿ., ಮಳೆ ನೀರು ಕೊಯ್ಲು, ಆರ್.ಒ. ವಾಟರ್ ಫಿಲ್ಟರ್ ಖರೀದಿ
₹175 ಕೋಟಿ
ಎಂ.ಎಸ್.ಐ.ಎಲ್‌ನಿಂದ ಪಠ್ಯಪುಸ್ತಕ ಖರೀದಿ
₹31.41 ಕೋಟಿ
ಸಲಹಾಪೆಟ್ಟಿಗೆ ಸಪ್ಲೈ ಹಗರಣ
ಎಲ್.ಸಿ.ಡಿ. ಟಿವಿ ಖರೀದಿ ಹಗರಣ
₹95 ಕೋಟಿ. ಇವೆಲ್ಲ‌ ಆರೋಪಗಳು.
ಪಟ್ಟಿ ಇಲ್ಲಿಗೇ ಮುಗಿಯುವುದಿಲ್ಲ—ಭ್ರಷ್ಟಾಚಾರದ ಬಾಲದಂತೆ ಇನ್ನೂ ಅನೇಕ ಆರೋಪಗಳು ಇಲಾಖೆಯನ್ನು ಬೆನ್ನತ್ತುತ್ತಿವೆ. ಆದರೆ ಇಲ್ಲಿಯವರೆಗೂ‌ ಅದರ ಬಗ್ಗೆ ಸಣ್ಣದೊಂದು ತನಿಖೆ ಕೂಡ ನಡೆದಿಲ್ಲ ಎನ್ನುವ ನಾತುಗಳಿವೆ


ಪ್ರಶ್ನೆಗಳು ಮೂಡುತ್ತಿವೆ… ಉತ್ತರಗಳು ಎಲ್ಲಿ?
ಇಷ್ಟೊಂದು ಆರೋಪಗಳ ನಡುವೆಯೂ ಸ್ವತಂತ್ರ ತನಿಖೆಗೆ ಸರ್ಕಾರ ಹಿಂಜರಿಯುತ್ತಿದೆಯೇ?
ತನಿಖೆ ನಡೆದರೆ “ಹಲವರು ಕಂಬಿ ಹಿಂದೆ” ಎಂಬ ಮಾತು ಏಕೆ ಸಾರ್ವಜನಿಕವಾಗಿ ಕೇಳಿಬರುತ್ತಿದೆ?
ಮಕ್ಕಳ ಪೋಷಣೆಗೆ ಮೀಸಲಾದ ಹಣ ಯಾರ ಪೋಷಣೆಗೆ ಬಳಸಲಾಗಿದೆ?

ಮಕ್ಕಳ ಭವಿಷ್ಯವನ್ನು ಹೊತ್ತ ಇಲಾಖೆ, ಭ್ರಷ್ಟಾಚಾರದ ಭಾರವನ್ನು ಹೊತ್ತು ಕುಸಿಯುತ್ತಿದ್ದರೆ—
ರಾಜ್ಯ ಸರ್ಕಾರ ಇನ್ನೂ ಎಷ್ಟು ದಿನ ಮೌನ ವಹಿಸಲಿದೆ?
ಹಗರಣಗಳ ರಾಜನಿಗೆ ಯಾವಾಗ ಅಂತ್ಯ?

Leave a Reply

Your email address will not be published. Required fields are marked *

error: Content is protected !!