ಗಮನಸೆಳೆದ ವಿಜಯೇಂದ್ರ ಸುದ್ದಿಗೋಷ್ಟಿ..!

ಯಾಕಂತಿರಾ ಈ ವರದಿ ಪೂರ್ತಿ ಓದಿ. ಅಬಕಾರಿ ಹಗರಣದ ಕುರಿತಂತೆ ಒಂದೇ ಆಡಿಯೊ ಇಟ್ಟುಕೊಂಡು ಸದನದೊಳಗೆ ಮತ್ತು ಹೊರಗೆ ಹೋರಾಟ ಮಾಡುವ ಬಿಜೆಪಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹೊರಬರುತ್ತಿರುವ ಸರಣಿ ಹಗರಣಗಳ ಬಗ್ಗೆ ಮೌನ ಯಾಕೆ ಎನ್ಬುವ ನೇರ ಪ್ರಶ್ನೆ ಬಿಜೆಪಿ ರಾಜ್ಯಾಧ್ಯಕ್ಚ ವಿಜಯೇಂದ್ರ ಎದುರಿಸಿದರು.

ಆರಂಭದಲ್ಲಿ ಪ್ರಶ್ನೆ ನೇರವಾಗಿ ಕಿವಿಗಪ್ಪಳಿಸದ ಮೇಲೆ ಗಂಭೀರವಾದ ವಿಜಯೇಂದ್ರ ಅದಕ್ಕೆ ಸ್ಪಷ್ಟನೆ ಕೂಡ ಕೊಟ್ಟರು. ಹಾಗಿದ್ದರೆ ಸುದ್ದಿಗೋಷ್ಟಿ ಯಲ್ಲಿ ಏನೇನಾಯಿತು? ನೀವೇ ನೋಡಿ.

ಇಲ್ಲಿ ವಿಜಯೇಂದ್ರ ಅವರ ಸುದ್ದಿಗೋಷ್ಟಿ ವಿಡಿಯೋ ತುಣಕನ್ನು ಹಾಕಲಾಗಿದೆ. ಕೇಳಿ.

ಬೆಳಗಾವಿ
ಸುದ್ದಿಗೋಷ್ಠಿ ಎಂದರೆ ಸಾಮಾನ್ಯವಾಗಿ ಆರೋಪ–ಪ್ರತ್ಯಾರೋಪಗಳ ವೇದಿಕೆ. ಆದರೆ ಗುರುವಾರ ಬೆಳಗಾವಿಯಲ್ಲಿ ನಡೆದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪತ್ರಿಕಾಗೋಷ್ಠಿ ಪ್ರಶ್ನೆಗಳ ತೀವ್ರತೆಗೆ ವಿಶೇಷ ಗಮನ ಸೆಳೆಯಿತು.
ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ‘ಹೋರಾಟ ಮಾಡುವಲ್ಕಿ ತಾರತಮ್ಯ ಮಾಡುತ್ತಿದೆ ಎಂಬ ಆರೋಪದ ಕುರಿತು ಪತ್ರಕರ್ತರು ನೇರವಾಗಿ ಪ್ರಶ್ನಿಸಿದ ಕ್ಷಣ, ವಾತಾವರಣ ಕ್ಷಣಕಾಲ ಗಂಭೀರವಾಯಿತು.

ಸರಣಿ ಹಗರಣದ ಆರೋಪಗಳು.‌

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿರುದ್ಧ ಕೇಳಿಬಂದಿರುವ ಸರಣಿ ಆರೋಪಗಳು ಹೀಗಿವೆ. ಅಂಗನವಾಡಿಗಳಿಗೆ ಟೆಂಡರ್ ಇಲ್ಲದೆ 10 ಸಾವಿರ ಟಿವಿ ಖರೀದಿ, ಮಕ್ಕಳಿಗೆ ಕಳಪೆ ಪೌಷ್ಠಿಕ ಆಹಾರ ಕಿಟ್ ಪೂರೈಕೆ, ಹೆಚ್ಚಿನ ವೆಚ್ಚದಲ್ಲಿ ಕೇಂದ್ರೀಕೃತ ಬ್ಯಾನರ್ ಮುದ್ರಣ —ಇವುಗಳ ಬಗ್ಗೆ ಬಿಜೆಪಿ ತೀವ್ರ ಹೋರಾಟ ಏಕೆ ನಡೆಸಿಲ್ಲ ಎಂಬ ಪ್ರಶ್ನೆ ಕೇಳಲಾಯಿತು. ಅಷ್ಟೇ ಅಲ್ಲ ಮಾಧ್ಯಮಗಳೇ ಈ‌ ಕುರಿತು ಮುಖಪುಟದಲ್ಲಿ ವರದಿ ಸಹ ಪ್ರಕಟಿಸಿವೆ ಎಂದು ಪತ್ರಕರ್ತರು ಹೇಳಿದರು.
ಇಲ್ಲಿ, ಇಲಾಖೆಯ ಹೊಣೆ ಹೊತ್ತಿರುವ ಸಚಿವೆ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಬಿಜೆಪಿ ನೇರವಾಗಿ ಧ್ವನಿ ಎತ್ತದಿರುವುದು ಕುಟುಂಬ ಸಂಬಂಧದ ಕಾರಣವೇ ಎಂಬ ಪ್ರಶ್ನೆ ನೇರವಾಗಿ ವಿಜಯೇಂದ್ರ ಅವರನ್ನು ಪತ್ರಕರ್ತರು ಕೇಳಿದರು.


. ಈ ಪ್ರಶ್ನೆಯೇ ಸುದ್ದಿಗೋಷ್ಠಿಯ ಕೇಂದ್ರ ಬಿಂದುವಾಯಿತು.
ಇದರಿಂದ ಸ್ವಲ್ಪ ಮುಜುಗುರಕ್ಕೊಳಗಾದಂತಾದ
ವಿಜಯೇಂದ್ರ ನೇರವಾಗಿ ಉತ್ತರಿಸಿದರು. ನಾವು, “ಮುಖ್ಯಮಂತ್ರಿಯಾಗಲಿ, ಸಚಿವರಾಗಲಿ—ಭ್ರಷ್ಟಾಚಾರ ಮಾಡಿದರೆ ಬೀದಿಗೆ ತರುತ್ತೇವೆ. ಕಾಂಗ್ರೆಸ್ ಸಚಿವರ ಬಗ್ಗೆ ನಮಗೆ ಯಾವುದೇ ಮೃದುಭಾವ ಇಲ್ಲ. ಕುಟುಂಬ ಸಂಬಂಧ ಎಂಬ ಪ್ರಶ್ನೆಯೇ ಇಲ್ಲ,” ಎಂದು ಸ್ಪಷ್ಟಪಡಿಸಿದರು. “ಕೆಲವು ವಿಷಯಗಳನ್ನು ನೀವು ಗಮನಕ್ಕೆ ತಂದಿದ್ದೀರಿ. ಅವನ್ನು ಪರಿಶೀಲಿಸುತ್ತೇವೆ. ಪಕ್ಷದ ನಾಯಕರೊಂದಿಗೆ ಚರ್ಚಿಸಿ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ,” ಎಂದು ಹೇಳಿದರು.
ಆದರೆ, ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ವಿರುದ್ಧ ತೃತೀಯ ವ್ಯಕ್ತಿಯ ಆಡಿಯೋ ಸೋರಿಕೆ ಆಧಾರವಾಗಿ ಬಿಜೆಪಿ ವಿಧಾನಸಭೆಯ ಒಳಗೂ ಹೊರಗೂ ತೀವ್ರ ಹೋರಾಟ ನಡೆಸಿದಂತೆ, ಇದೇ ತೀವ್ರತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆರೋಪಗಳ ವಿಷಯದಲ್ಲಿ ಕಾಣದಿರುವುದೇಕೆ ಎಂಬ ಪ್ರಶ್ನೆಗೆ ಅವರು ನೇರ ಉತ್ತರ ನೀಡಲಿಲ್ಲ.

‘₹5 ಸಾವಿರ ಕೋಟಿ ಎಲ್ಲಿ?’—ಹೊಸ ರಾಜಕೀಯ ರಣತಂತ್ರ
ಈ ನಡುವೆ, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ವಿತರಿಸಬೇಕಾದ ₹5 ಸಾವಿರ ಕೋಟಿ ಕುರಿತಾಗಿ ವಿಜಯೇಂದ್ರ ಮತ್ತೊಮ್ಮೆ ಪ್ರಶ್ನೆ ಎತ್ತಿದರು. ಹಿಂದಿನ ಅಧಿವೇಶನದಲ್ಲಿ ಧಾರವಾಡ ಶಾಸಕ ಮಹೇಶ ಟೆಂಗಿನಕಾಯಿ ಈ ವಿಷಯ ಪ್ರಸ್ತಾಪಿಸಿದ್ದರೂ ಸರ್ಕಾರ ಸ್ಪಷ್ಟನೆ ನೀಡಿಲ್ಲ ಎಂದು ಅವರು ಹೇಳಿದರು.
“₹5 ಸಾವಿರ ಕೋಟಿ ಎಲ್ಲಿಗೆ ಹೋಯಿತು? ದುರ್ಬಳಕೆ ಆಗಿದೆಯೇ? ಬೇರೆ ರಾಜ್ಯಗಳಿಗೆ ವರ್ಗಾಯಿಸಲಾಯಿತೇ? ಇಷ್ಟು ದೊಡ್ಡ ಮೊತ್ತ ಕಾಣೆಯಾಗಿರುವುದು ಎಂಟನೇ ಅದ್ಭುತದಂತಿದೆ,” ಎಂದು ಅವರು ವ್ಯಂಗ್ಯಿಸಿದರು. ಹಣಕಾಸು ಇಲಾಖೆಯನ್ನು ವಹಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಈ ವಿಷಯವನ್ನು ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ವಿವರವಾಗಿ ಬಹಿರಂಗಪಡಿಸುವುದಾಗಿ ಘೋಷಿಸಿದರು.

Leave a Reply

Your email address will not be published. Required fields are marked *

error: Content is protected !!