ಕ್ಲೀನ್ ಬೆಳಗಾವಿ ಆಪರೇಶನ್..!
20 ಮಂದಿಗೆ 17 ಪ್ರಕರಣ • ಚೂರಿ ಮೆರೆದರೆ ರೌಡಿಶೀಟರ್ ಖಚಿತ
ಬೆಳಗಾವಿ:
ಕುಂದಾನಗರಿಯನ್ನು ಸುರಕ್ಷಿತ ನಗರವನ್ನಾಗಿಸಲು ಬೆಳಗಾವಿ ಪೊಲೀಸರು ಡಬಲ್ ಆ್ಯಕ್ಷನ್‌ಗೆ ಇಳಿದಿದ್ದಾರೆ.
ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರ ನೇತೃತ್ವದಲ್ಲಿ ಡಿಸಿಪಿ, ಎಸಿಪಿಗಳ ತಂಡ ಖಡಕ್ ಕ್ರಮಕ್ಕೆ ಮುಂದಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುತ್ತಿದ್ದವರ ವಿರುದ್ಧ ವಿಶೇಷ ದಾಳಿ ನಡೆಸಿ ಒಟ್ಟು 20 ಮಂದಿಗೆ 17 ಪ್ರಕರಣ ದಾಖಲಿಸಲಾಗಿದೆ.

ಮಹಿಳೆಯರ ಗಟ್ಟಿದೂರಿಗೆ ಸ್ಪಂದನೆ:
“ಸಂಜೆಯ ಬಳಿಕ ಮಕ್ಕಳೊಂದಿಗೆ ಹೊರಗೆ ಹೋಗಲು ಅಸಹಜ ಪರಿಸ್ಥಿತಿ” ಎಂಬ ಮಹಿಳೆಯರ ಅಳಲು ಹಲವು ಸಭೆಗಳಲ್ಲಿ ಕೇಳಿಬಂದಿತ್ತು. ಇದನ್ನೇ ಆಧಾರವಾಗಿ ಪಡೆದು ಉದ್ಯಾನವನ, ರಸ್ತೆಬದಿ, ಜನಸಂಚಾರ ಪ್ರದೇಶಗಳಲ್ಲಿ ಅಚ್ಚರಿ ಕಾರ್ಯಾಚರಣೆ ನಡೆದಿದೆ.
ಚೂರಿ ಹಿಡಿದು ಮೆರೆದರೆ… ‘ರೌಡಿಶೀಟರ್’ ಫಿಕ್ಸ್!
ಇತ್ತೀಚೆಗೆ ಸಾರ್ವಜನಿಕವಾಗಿ ಚೂರಿ ಮತ್ತು ಮಾರಕಾಸ್ತ್ರ ಪ್ರದರ್ಶನ ಮಾಡಿ ಭೀತಿ ಹುಟ್ಟಿಸುವ ಘಟನೆಗಳು ಹೆಚ್ಚಾಗುತ್ತಿದ್ದ ಹಿನ್ನೆಲೆ ಪೊಲೀಸರು ‘ಮಾಸ್ಟರ್ ಪ್ಲಾನ್’ ಜಾರಿಗೆ ತಂದಿದ್ದಾರೆ.
✔️ ಚೂರಿ ಮೆರೆದರೆ ರೌಡಿಶೀಟರ್ ತೆರೆಯುವುದು
✔️ ನಿರಂತರ ಪೊಲೀಸ್ ನಿಗಾ
✔️ ಪ್ರಮುಖ ವೃತ್ತ, ಶಾಲೆ-ಕಾಲೇಜು, ಮಾರುಕಟ್ಟೆ ಸುತ್ತ ವಿಶೇಷ ಪಹರೆ
✔️ ಅನುಮಾನಾಸ್ಪದ ವ್ಯಕ್ತಿಗಳ ತಪಾಸಣೆ
ಪೊಲೀಸ್ ಸಂದೇಶ ಸ್ಪಷ್ಟ:
“ಕಾನೂನು ಉಲ್ಲಂಘನೆಗೆ ಶೂನ್ಯ ಸಹನೆ. ಸಾರ್ವಜನಿಕ ಸ್ಥಳಗಳು ಕುಟುಂಬಗಳಿಗೆ ಸುರಕ್ಷಿತವಾಗಿರಬೇಕು.”
ಯುವಕರು ತಪ್ಪು ದಾರಿಗೆ ಹೋಗದಂತೆ ಜಾಗೃತಿ ಕಾರ್ಯಕ್ರಮಗಳನ್ನೂ ಕೈಗೊಳ್ಳಲಾಗಿದೆ.
ಕುಂದಾನಗರಿಯಲ್ಲಿ ಪೊಲೀಸ್ ಖಡಕ್ ಎಚ್ಚರಿಕೆ ನೀಡಿದ್ದಾರೆ, ಪೊಲೀಸರ ಈ ಕ್ರಮ ಸಾರ್ವಜನಿಕರ ಶಾಂತಿ–ಸುವ್ಯವಸ್ಥೆಗೆ ಇದು ಹೊಸ ದಿಕ್ಕು ಎಂದು ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

