ಅಭಯ ಮಾತಿಗೆ ‘ಕೈ’ ನಿರುತ್ತರ…!

ಸಿಟೀಜ್ 2.0 ಗದ್ದಲ
ಅಭಯ ಪಾಟೀಲರ ನೇರ ಪ್ರಶ್ನೆಗಳಿಗೆ ಕಾಂಗ್ರೆಸ್ ಮೌನ!

📌 “ಕೇಂದ್ರದ ಶೇ.40 ಅನುದಾನ ಸಿದ್ಧ… ಪಾಲಿಕೆಯ ಶೇ.20 ಒಪ್ಪಿಗೆ… ರಾಜ್ಯದ ಪಾಲು ಎಲ್ಲಿದೆ?” – ಎಂದು ಪ್ರಶ್ನಿಸಿದ ಶಾಸಕ ಅಭಯ ಪಾಟೀಲ
📍 ಮಹಾನಗರ ಪಾಲಿಕೆ ಸಭೆಯಲ್ಲಿ ತೀವ್ರ ಚರ್ಚೆ
📍 ಅನುದಾನ ಗೊಂದಲದ ನಡುವೆ ರಾಜಕೀಯ ಆರೋಪ–ಪ್ರತ್ಯಾರೋಪ
📍 ಉತ್ತರ ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಲಿಲ್ಲ
.

ಸಿಟೀಜ್ 2.0 ಯೋಜನೆಗೆ ಸಂಬಂಧಿಸಿದ ಅನುದಾನ ಹಂಚಿಕೆ ವಿಚಾರದಲ್ಲಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಾಸಕ ಅಭಯ ಪಾಟೀಲ ಎತ್ತಿದ ಪ್ರಶ್ನೆಗಳಿಗೆ ಕಾಂಗ್ರೆಸ್ ನಾಯಕರು ಸಭೆಯಲ್ಲಿ ನಿರುತ್ತರರಾದ ದೃಶ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕೇಂದ್ರ ಸರ್ಕಾರ ತನ್ನ ಶೇ.40 ಪಾಲು ನೀಡಲು ಒಪ್ಪಿದ್ದು, ಮಹಾನಗರ ಪಾಲಿಕೆಯ ಶೇ.20 ಪಾಲು ಕೂಡ ಕಾಯ್ದಿರಿಸಲಾಗಿದೆ. ಆದರೆ ರಾಜ್ಯ ಸರ್ಕಾರ ತನ್ನ ಶೇ.40 ಅನುದಾನ ಬಿಡುಗಡೆ ಮಾಡದಿರುವುದರಿಂದ ಯೋಜನೆಗೆ ಸಂಕಷ್ಟ ಎದುರಾಗಿದೆ ಎಂಬ ಆರೋಪವನ್ನು ಅವರು ಪುನರಾವರ್ತಿಸಿದರು.
“ದುಡ್ಡು ಕೊಟ್ಟವರಿಗೆ ಧಿಕ್ಕಾರ… ಕೈ ಕೊಟ್ಟವರಿಗೆ ಜೈಕಾರ ಯಾಕೆ?” ಎಂದು ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ಸದಸ್ಯರು ಸ್ಪಷ್ಟ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದುದು ಗಮನಾರ್ಹವೆನಿಸಿದೆ.

Oplus_16908288

135 ಕೋಟಿ ರೂ. ಮಟ್ಟದಲ್ಲಿ ಚರ್ಚೆಯಾಗಿದ್ದ ಯೋಜನೆ 75 ಕೋಟಿ ರೂ. ಮಟ್ಟಕ್ಕೆ ಇಳಿದಿರುವುದು ಯಾರ ಹೊಣೆ? ಬೆಳಗಾವಿ ನಗರದ ಅಭಿವೃದ್ಧಿ ರಾಜಕೀಯ ಲೆಕ್ಕಾಚಾರಕ್ಕೆ ಬಲಿಯಾಗಬೇಕೇ?” ಎಂದು ಕಿಡಿಕಾರಿದರು.

ಸಿಟೀಜ್ 2.0 ಯೋಜನೆ ಬೆಳಗಾವಿಯ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಮುಖ ಯೋಜನೆ ಎಂದು ಪರಿಗಣಿಸಲಾಗುತ್ತಿದೆ. ರಸ್ತೆ, ಒಳಚರಂಡಿ, ಸ್ಮಾರ್ಟ್ ಸೌಲಭ್ಯಗಳ ಅಭಿವೃದ್ಧಿ ಸೇರಿದಂತೆ ಹಲವಾರು ಕಾಮಗಾರಿಗಳು ಈ ಯೋಜನೆಯಡಿ ಕೈಗೊಳ್ಳಬೇಕಿದೆ. ಆದರೆ ಅನುದಾನ ಗೊಂದಲದಿಂದ ಯೋಜನೆಯ ಗತಿ ಕುಂಠಿತವಾಗುವ ಸಾಧ್ಯತೆ ಎದುರಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!