ಬ್ರಾಹ್ಮಣರಿಗೆ ‘ಕೈ’ ಕೊಟ್ಟ ಸಿದ್ದು ಬಜೆಟ್..!

ಸಾವಿರಾರು ಕೋಟಿ ಯೋಜನೆಗಳು ಬೇರೆ ವರ್ಗಗಳಿಗೆ… ಬ್ರಾಹ್ಮಣ ಸಮಾಜಕ್ಕೆ ಸ್ಪಷ್ಟ ಘೋಷಣೆ ಇಲ್ಲವೇ ಇಲ್ಲ.

ರಾಜ್ಯ ಬಜೆಟ್‌ನಲ್ಲಿ ಬ್ರಾಹ್ಮಣ ಸಮಾಜಕ್ಕೆ ಸ್ಪಷ್ಟ ಯೋಜನೆಗಳಿಲ್ಲ; ಹಕ್ಕುಗಳಿಗಾಗಿ ಈಗಾದರೂ ಸಮಾಜ ಸಂಘಟಿತರಾಗಬೇಕೆಂಬ ಚರ್ಚೆ

ಬ್ರಾಹ್ಮಣ ಅಭಿವೃದ್ಧಿ, ವೇದ ಪಾಠಶಾಲೆ, ವಿದ್ಯಾರ್ಥಿಗಳಿಗೆ ವಿಶೇಷ ನೆರವು ಕಾಣದೆ ಪ್ರಶ್ನೆ; ಸಮಾಜ ಹಕ್ಕಿಗಾಗಿ ಒಂದಾಗಬೇಕೆಂಬ ಮಾತು

ಬಜೆಟ್‌ನಲ್ಲಿ ಸಮಾಜದ ಹೆಸರೇ ಕಾಣದೆ ಅಸಮಾಧಾನ; ಬ್ರಾಹ್ಮಣರು ರಾಜಕೀಯವಾಗಿ ಸಂಘಟಿತರಾಗದಿದ್ದರೆ ಹಕ್ಕುಗಳು ಮರೆಯಾಗುವ ಆತಂಕ.

ಬೆಂಗಳೂರು,
ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್‌ನ್ನು ಸಮಗ್ರವಾಗಿ ಪರಿಶೀಲಿಸಿದಾಗ, ರಾಜ್ಯದ ಬ್ರಾಹ್ಮಣ ಸಮಾಜಕ್ಕೆ ಅದರಿಂದ ಬಿಡಿಗಾಸು ಸಹ ಪ್ರಯೋಜನ ಅಗಿಲ್ಲ.
ಸಮಾಜಕ್ಕೆ ಯಾವುದೇ ಮಹತ್ವದ ಯೋಜನೆ ಅಥವಾ ವಿಶೇಷ ಅನುದಾನ ಈ ಬಾರಿ ಕಾಣಿಸದಿರುವುದು ಸ್ಪಷ್ಟವಾಗಿದೆ.
ಅಂದರೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ಯ ಸಮಾಜಕ್ಕೆ ಎಲ್ಕವನ್ನೂ ಕೊಟ್ಟು ಬ್ರಾಹ್ಮಣ‌ ಮತ್ತು ಮೇಲ್ವರ್ಗದ ಸಮಾಜಗಳಿಗೆ ಕೈ ಕೊಟ್ಟಿದೆ ಎನ್ನುವುದು ಸ್ಪಷ್ಟ.
ಇಲ್ಲಿ ಸರ್ಕಾರ ಹಲವು ವರ್ಗಗಳಿಗೆ ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಿದರೂ, ಬ್ರಾಹ್ಮಣ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳು ಬಜೆಟ್‌ನಲ್ಲಿ ಪ್ರಾಯೋಗಿಕವಾಗಿ ಕಾಣಿಸದೇ ಹೋಗಿವೆ ಎಂಬ ಚರ್ಚೆ ಸಾಮಾಜಿಕ ವಲಯಗಳಲ್ಲಿ ಆರಂಭವಾಗಿದೆ.

ಈ ಬಜೆಟ್‌ನಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳು ಘೋಷಣೆಯಾಗಿವೆ. ಆದರೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ವೇದ ಪಾಠಶಾಲೆಗಳು, ಪೌರೋಹಿತ್ಯ ವೃತ್ತಿಗೆ ನೆರವು, ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿಶೇಷ ಸಹಾಯಧನ ಮೊದಲಾದ ವಿಷಯಗಳು ಬಜೆಟ್‌ನಲ್ಲಿ ಪ್ರಸ್ತಾಪವಾಗದಿರುವುದು ಗಮನ ಸೆಳೆಯುತ್ತಿದೆ.
ರಾಜ್ಯದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಿದ್ದರೂ, ಅದಕ್ಕೆ ಬಲವಾದ ಆರ್ಥಿಕ ಪೂರೈಕೆ ಅಥವಾ ಹೊಸ ಯೋಜನೆಗಳ ಘೋಷಣೆ ಈ ಬಾರಿ ಕಾಣಿಸಿಲ್ಲ ಎಂಬುದು ಸಮಾಜದ ಸಂಘಟನೆಗಳ ಅಭಿಪ್ರಾಯವಾಗಿದೆ.

ಶಿಕ್ಷಣ – ಅವಕಾಶ ಇದ್ದರೂ ವಿಶೇಷ ಯೋಜನೆ ಇಲ್ಲ
ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಹೆಚ್ಚಿಸಿರುವುದು ಸತ್ಯ. ಆದರೆ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ವಿದ್ಯಾರ್ಥಿವೇತನ ಅಥವಾ ವಸತಿ ವ್ಯವಸ್ಥೆಗಳಂತಹ ಯಾವುದೇ ವಿಶೇಷ ಕಾರ್ಯಕ್ರಮ ಘೋಷಣೆ ಆಗಿಲ್ಲ.

ಪೌರೋಹಿತ್ಯ ಮತ್ತು ವೇದ ಪರಂಪರೆ ಕಡೆಗಣನೆ?

ಸಾಂದರ್ಭಿಕ ಪೊಟೊ

ರಾಜ್ಯದ ಅನೇಕ ದೇವಾಲಯಗಳಲ್ಲಿ ಪೌರೋಹಿತ್ಯ ಸೇವೆ ಸಲ್ಲಿಸುವ ಸಾವಿರಾರು ಕುಟುಂಬಗಳು ಬ್ರಾಹ್ಮಣ ಸಮುದಾಯಕ್ಕೆ ಸೇರಿವೆ. ಆದರೂ ವೇದ ಪಾಠಶಾಲೆಗಳ ಅಭಿವೃದ್ಧಿ, ಪೌರೋಹಿತರ ಕಲ್ಯಾಣ ನಿಧಿ ಅಥವಾ ಸಂಶೋಧನಾ ಕೇಂದ್ರಗಳಂತಹ ಯಾವುದೇ ಸ್ಪಷ್ಟ ಯೋಜನೆ ಈ ಬಜೆಟ್‌ನಲ್ಲಿ ಕಾಣಿಸಿಲ್ಲ

ಸಮಾಜದ ಒಳಚರ್ಚೆ ಆರಂಭ
“ಬಜೆಟ್‌ನಲ್ಲಿ ನಮ್ಮ ಸಮುದಾಯದ ಅಗತ್ಯಗಳ ಬಗ್ಗೆ ಮಾತೇ ಇಲ್ಲ” ಎಂಬ ಅಭಿಪ್ರಾಯವನ್ನು ಕೆಲವು ಬ್ರಾಹ್ಮಣ ಸಂಘಟನೆಗಳು ವ್ಯಕ್ತಪಡಿಸುತ್ತಿವೆ. ಶಿಕ್ಷಣದಲ್ಲಿ ಮುಂದಿರುವ ಸಮುದಾಯವಾಗಿದ್ದರೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಅಂಕಿಅಂಶಗಳನ್ನು ಅವರು ಉಲ್ಲೇಖಿಸುತ್ತಿದ್ದಾರೆ.

ಜಾಗೃತಿಯ ಅವಶ್ಯಕತೆ
ರಾಜಕೀಯವಾಗಿ ಸಂಘಟಿತ ಒತ್ತಡವಿಲ್ಲದಿದ್ದರೆ ಯಾವುದೇ ಸಮುದಾಯದ ಸಮಸ್ಯೆಗಳು ಸರ್ಕಾರದ ಗಮನಕ್ಕೆ ಬರಲು ಕಷ್ಟ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಆದ್ದರಿಂದ ತಮ್ಮ ಹಕ್ಕುಗಳು ಮತ್ತು ಅವಕಾಶಗಳ ಬಗ್ಗೆ ಬ್ರಾಹ್ಮಣ ಸಮಾಜವು ಸಮಗ್ರವಾಗಿ ಚರ್ಚೆ ನಡೆಸಿ ಸರ್ಕಾರದ ಗಮನ ಸೆಳೆಯಬೇಕಾದ ಅಗತ್ಯವಿದೆ ಎಂಬ ಮಾತು ಕೇಳಿಬರುತ್ತಿದೆ.
ಒಟ್ಟಿನಲ್ಲಿ, ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಬ್ರಾಹ್ಮಣ ಸಮಾಜಕ್ಕೆ ನೇರವಾಗಿ ಸಿಗುವಂತಹ ಸ್ಪಷ್ಟ ಯೋಜನೆಗಳು ಕಾಣಿಸದಿರುವುದು ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜ ಜಾಗೃತಿಯಾಗಿ ತನ್ನ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಬೇಕೆಂಬ ಅಭಿಪ್ರಾಯ ಬಲವಾಗಿ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!