Headlines

ಅನನ್ಯ ಕ್ಷಣ… ಅನುರಾಗದ ಭೇಟಿ…

Oplus_16908288

ವಿಲಾಸ ಜೋಶಿ.
ಮುಖ್ಯವರದಿಗಾರ.
ಸಂಯುಕ್ತ ಕರ್ನಾಟಕ. ಬೆಳಗಾವಿ.

ಹೈಕೋರ್ಟ್ ನ್ಯಾಯಮೂರ್ತಿ‌ಶ್ರೀಶಾನಂದರ ಜೊತೆ...

ಪತ್ರಕರ್ತನ ಬದುಕಿನಲ್ಲಿ ಅನೇಕ ಮುಖಗಳನ್ನು ನೋಡಲು ಸಿಗುತ್ತದೆ. ಅನೇಕ ವೇದಿಕೆಗಳನ್ನು ಕಾಣಲು ಸಿಗುತ್ತದೆ. ಅನೇಕ ಗಣ್ಯರನ್ನು ಭೇಟಿ ಮಾಡುವ ಅವಕಾಶವೂ ಬರುತ್ತದೆ. ಆದರೆ, ಕೆಲವು ಭೇಟಿಗಳು ಮಾತ್ರ ಮನಸ್ಸಿನೊಳಗೆ ಅಚ್ಚಳಿಯದೇ ಉಳಿಯುತ್ತವೆ. ಇಂದಿನ ದಿನವೂ ಅಂತಹದೇ ಒಂದು ಅಪೂರ್ವ ನೆನಪಿನ ಪುಟವಾಗಿ ಉಳಿಯಿತು.
ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕ ಹಾಗೂ ಸಿದ್ಧಾರೂಢ ಮಠದ ಟ್ರಸ್ಟ್ ಸಮಿತಿ ಹಮ್ಮಿಕೊಂಡಿದ್ದ “ವಸಂತ ಋತುಗಾನ ಕಲಾಯಾನ” ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಅವರನ್ನು ಭೇಟಿಯಾದ ಕ್ಷಣ ನಿಜಕ್ಕೂ ಅನನ್ಯ ಅನುಭವವಾಗಿ ಮನಸ್ಸನ್ನು ತಟ್ಟಿತು.

ನ್ಯಾಯಾಸನದ ಗಂಭೀರತೆಯೊಳಗೆ ಇರುವ ಮೃದು ಮಾನವೀಯತೆ ಹೇಗಿರಬಹುದು ಎಂಬುದಕ್ಕೆ ಅವರ ವ್ಯಕ್ತಿತ್ವವೇ ಸಾಕ್ಷಿಯಂತಿತ್ತು. ಹುದ್ದೆಯ ಎತ್ತರ ಇದ್ದರೂ ನಡೆನಲ್ಲಿ ಅಹಂಕಾರವಿಲ್ಲ, ಮಾತಿನಲ್ಲಿ ಕಠಿಣತೆ ಇಲ್ಲ, ಮುಖದಲ್ಲಿ ಮಂದಹಾಸ, ವ್ಯಕ್ತಿತ್ವದಲ್ಲಿ ಸಂಸ್ಕಾರದ ಹೊಳಪು—ಇವೆಲ್ಲವೂ ಅವರನ್ನು ವಿಭಿನ್ನವಾಗಿ ಗುರುತಿಸಿಸಿವೆ. ಅವರು ,VERY SOMPLE MAN..

ಅವರ ಬಗ್ಗೆ ಹಲವಾರು ಬಾರಿ ಕೇಳಿದ್ದೆ. YOUTUBE ನಲ್ಲಿ ಅವರ ಮಾತುಗಳನ್ನು ಸಾಕಷ್ಟು ಬಾರಿ ಆಲಿಸಿದ್ದೆ. ಅವರ ಮಾತಿನ ತೂಕದ ಬಗ್ಗೆ ತಿಳಿದಿದ್ದೆ. ಆದರೆ ಇಂದು ಅವರನ್ನು ಹತ್ತಿರದಿಂದ ಕಂಡ ಕ್ಷಣದಲ್ಲಿ —ನಿಜವಾದ ದೊಡ್ಡತನ ಹುದ್ದೆಯಲ್ಲಿ ಇರುವುದಿಲ್ಲ; ಅದು ಮನುಷ್ಯನ ಸರಳತೆಯಲ್ಲಿ, ಸೌಜನ್ಯದಲ್ಲಿ, ನಡೆಗಿನ ನಿಲುವಿನಲ್ಲಿ ಇರುತ್ತದೆ ಎಂಬುದು ಗೊತ್ತಾಯಿತು. ನ್ಯಾಯಮೂರ್ತಿ ಶ್ರೀಶಾನಂದರಲ್ಲಿ ಆ ಮೌಲ್ಯಗಳ ಸುಂದರ ಮೇಳಸೇರಿ ಕಂಡಂತಾಯಿತು.
“ವಸಂತ ಋತುಗಾನ ಕಲಾಯಾನ” ಕಾರ್ಯಕ್ರಮವೇ ಒಂದು ಸಾಂಸ್ಕೃತಿಕ ಹಬ್ಬದಂತೆ ಭಾಸವಾಗುತ್ತಿದ್ದರೆ, ಅದರಲ್ಲಿ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಒಂದು ವಿಶಿಷ್ಟ ಮೆರಗು ನೀಡಿತು. ಕಲೆ, ಸಂಸ್ಕೃತಿ, ಮೌಲ್ಯ, ಮಾನವೀಯತೆ—ಈ ನಾಲ್ಕೂ ಅಂಶಗಳು ಒಂದೇ ವೇದಿಕೆಯಲ್ಲಿ ಬೆರೆತ ಕ್ಷಣದಂತಿತ್ತು ಅದು.

ಪತ್ರಕರ್ತನಾಗಿ ಅನೇಕ ಸುದ್ದಿಗಳನ್ನು ಬರೆದಿದ್ದೇನೆ. ಅನೇಕ ಘಟನೆಗಳನ್ನು ವರದಿ ಮಾಡಿದ್ದೇನೆ. ಆದರೆ ಕೆಲವು ಕ್ಷಣಗಳು ಸುದ್ದಿಗಿಂತ ದೊಡ್ಡದಾಗಿಬಿಡುತ್ತವೆ. ಅವು ಅನುಭವವಾಗುತ್ತವೆ. ಅವು ನೆನಪಾಗುತ್ತವೆ. ಇಂದಿನ ನ್ಯಾಯಮೂರ್ತಿ ಶ್ರೀಶಾನಂದರ ಭೇಟಿ ನನ್ನ ಪಾಲಿಗೆ ಅಂತಹದೇ ಒಂದು ಸ್ಮರಣೀಯ ಅನುಭವ.

ಕೆಲವು ಭೇಟಿಗಳು ಕೈಕುಲುಕುವಲ್ಲಿ ಮುಗಿದುಹೋಗುತ್ತವೆ.
ಇನ್ನೂ ಕೆಲವು ಭೇಟಿಗಳು ಮನಸ್ಸಿನಲ್ಲಿ ಮೌನವಾಗಿ ನೆಲಸಿಬಿಡುತ್ತವೆ.
ಇಂದಿನ ಈ ಭೇಟಿ ನನ್ನ ಪಾಲಿಗೆ ಅಂತಹದೇ ಒಂದು ಅಮೂಲ್ಯ ಘಳಿಗೆ.

ಈ ಸಂದರ್ಭಕ್ಕೆ ಸಾಕ್ಷಿಯಾದವರು..ಲೋಕಶಿಕ್ಷಣ ಟ್ರಸ್ಟನ ಕಾರ್ಯದರ್ಶಿ ಶ್ರೀ ಹರಿ ಚನ್ನಕೇಶವ, ಸಂಪಾದಕರಾದ ಸೀತಾಳಬಾವಿ ಮಹಾಬಲ, ಸಿಇಓ ಮೋಹನ ಹೆಗಡೆ, ಪಿಆರ್ ಓ ಎನ್.ಎ.‌ಹೆಗಡೆ..!

spl thanks to ಸಂಯುಕ್ತ ಕರ್ನಾಟಕ

Leave a Reply

Your email address will not be published. Required fields are marked *

error: Content is protected !!