Headlines

ಮಂಟಪದ ಬಳಿ ನಿಂತ ‘ಅಕ್ಕ ಪಡೆ’: ಬಾಲ್ಯವಿವಾಹಕ್ಕೆ ಬ್ರೇಕ್!

ಮಂಟಪ ಕಂಡು ಅನುಮಾನಿಸಿದ ಅಕ್ಕ ಪಡೆ
▪️ 17 ವರ್ಷದ ಬಾಲಕಿಯ ಮದುವೆ ತಡೆ
▪️ ಬಾಲಕಿ ರಕ್ಷಣೆ; CWC ಮುಂದೆ ಹಾಜರು
▪️ ತಂದೆ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ


ಬೆಳಗಾವಿ |
ಗಸ್ತಿನಲ್ಲಿದ್ದ ‘ಅಕ್ಕ ಪಡೆ’ಯ ಜಾಗರೂಕತೆಯಿಂದ ಬೆಳಗಾವಿಯಲ್ಲಿ ಬಾಲ್ಯವಿವಾಹವೊಂದು ಕೊನೆಯ ಕ್ಷಣದಲ್ಲಿ ತಡೆಯಲ್ಪಟ್ಟಿದೆ.
ಏ.20ರಂದು ವಂಟಮುರಿ ಕಾಲನಿಯಲ್ಲಿ ಪೆಟ್ರೋಲಿಂಗ್ ಮಾಡುತ್ತಿದ್ದ ಅಕ್ಕಪಡೆಯ ಸಿಬ್ಬಂದಿಗೆ ಮನೆಯೊಂದರ ಮುಂದೆ ಮದುವೆ ಮಂಟಪ ಹಾಕಿರುವುದು ಗಮನಕ್ಕೆ ಬಂದಿದೆ.

ಅನುಮಾನಗೊಂಡು ವಿಚಾರಿಸಿದಾಗ, ಏ.21ರಂದು 17 ವರ್ಷ 4 ತಿಂಗಳ ಬಾಲಕಿಯ ಮದುವೆಯನ್ನು ಮಹಾರಾಷ್ಟ್ರದ ಪೂನಾ ನಿವಾಸಿಯೊಂದಿಗೆ ನಡೆಸಲು ಸಿದ್ಧತೆ ನಡೆದಿರುವುದು ಬೆಳಕಿಗೆ ಬಂದಿದೆ.
ತಕ್ಷಣ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ದಿಲೀಪ ಪಿ. ನಿಂಬಾಳಕರ ಅವರಿಗೆ ಮಾಹಿತಿ ನೀಡಲಾಯಿತು. ಅವರ ನಿರ್ದೇಶನದಂತೆ ಅಕ್ಕಪಡೆಯ ಸಿಬ್ಬಂದಿ, ಮಕ್ಕಳ ಸಹಾಯವಾಣಿ ತಂಡ ಹಾಗೂ ಮಾಳಮಾರುತಿ 112 ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮದುವೆ ತಡೆದರು.

ಬಾಲಕಿಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ. ಬಾಲ್ಯವಿವಾಹಕ್ಕೆ ಮುಂದಾಗಿದ್ದ ಬಾಲಕಿಯ ತಂದೆ ವಿರುದ್ಧ ಬೆಳಗಾವಿ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ:
ಸರಸ್ವತಿ ಕರಿಗಾರ, ಸ್ವಪ್ನಾ ಗೋಂಧಳಿ, ಮಲ್ಲಯ್ಯ ಕರಡಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಲ್ಲೇಶ ಕುಂದರಗಿ ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *

error: Content is protected !!