ಒಂದೇ ವರ್ಷದಲ್ಲಿ 6.36 ಕೋಟಿ ಮೌಲ್ಯದ ವಸ್ತುಗಳ ಪತ್ತೆ;
ಬೆಳಗಾವಿ:
ಕಳುವಾಗಿ ಕಣ್ಮರೆಯಾಗಿದ್ದ ಚಿನ್ನಾಭರಣ, ವಾಹನ, ಮೊಬೈಲ್ ಫೋನ್ ಹಾಗೂ ನಗದು ಸೊತ್ತುಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಮರಳಿ ನೀಡುವ ಮೂಲಕ ಬೆಳಗಾವಿ ನಗರ ಪೊಲೀಸರು ಸಾರ್ವಜನಿಕರ ವಿಶ್ವಾಸವನ್ನು ಮತ್ತೊಮ್ಮೆ ಗಟ್ಟಿಗೊಳಿಸಿದ್ದಾರೆ.
2025ನೇ ಸಾಲಿನಲ್ಲಿ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕಳವು, ಮನೆಕಳ್ಳತನ, ವಾಹನ ಕಳವು ಮತ್ತು ಮೊಬೈಲ್ ಕಳವು ಪ್ರಕರಣಗಳ ತನಿಖೆ ಕೈಗೊಂಡಿದ್ದ ಪೊಲೀಸರು, ಒಟ್ಟು 6,36,93,743 ಮೌಲ್ಯದ ಸೊತ್ತುಗಳನ್ನು ಪತ್ತೆಹಚ್ಚಿರುವುದು ಇಲಾಖೆಯ ಸಾಧನೆಗೆ ಸಾಕ್ಷಿಯಾಗಿದೆ.

ನಗರ ಪೊಲೀಸ್ ಆಯುಕ್ತಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಕೇವಲ ಸಂಖ್ಯೆಗಳ ಮಟ್ಟಕ್ಕೆ ಸೀಮಿತಗೊಳಿಸದೆ, ಅವುಗಳ ಹಿಂದೆ ಇರುವ ನಾಗರಿಕರ ನಷ್ಟ, ಆತಂಕ ಮತ್ತು ಅಸಹಾಯಕತೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ತಂಡಗಳನ್ನು ರಚಿಸಿ ತನಿಖೆ ಮುಂದುವರಿಸಲಾಗಿದೆ. ಅದರ ಫಲವಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಮರುಪಡೆಯಲಾಗಿದೆ.
ಪತ್ತೆಯಾದ ಸೊತ್ತುಗಳಲ್ಲಿ 2,36,69,684 ಮೌಲ್ಯದ ಚಿನ್ನಾಭರಣಗಳು, 294 ಗ್ರಾಂ ಬೆಳ್ಳಿಯ ಆಭರಣಗಳು, 3,99,01,000 ಮೌಲ್ಯದ 85 ವಾಹನಗಳು, 1,10,000 ನಗದು ಸೇರಿವೆ.
ಜೊತೆಗೆ, ಸಿಇಐಆರ್ ಪೋರ್ಟಲ್ ನೆರವಿನಿಂದ ಸುಮಾರು 20 ಲಕ್ಷ ಮೌಲ್ಯದ 140 ಮೊಬೈಲ್ ಹ್ಯಾಂಡ್ಸೆಟ್ಗಳು ಪತ್ತೆಯಾಗಿವೆ. ತಂತ್ರಜ್ಞಾನದ ನೆರವಿನಿಂದ ತನಿಖೆಯನ್ನು ಗಟ್ಟಿಗೊಳಿಸಿರುವುದು ಈ ಸಾಧನೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.
ಕಳುವಾದ ಸೊತ್ತು ಪತ್ತೆಯಾಗುವುದು ಅಂದರೆ ಕೇವಲ ವಸ್ತು ಮರಳುವುದು ಮಾತ್ರವಲ್ಲ, ಅದರೊಂದಿಗೆ ನಾಗರಿಕರ ಮನಸ್ಸಿನಲ್ಲಿ ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯ ಮೇಲಿನ ನಂಬಿಕೆಯೂ ಮರಳಿ ಬರುವುದು. ಮನೆಕಳ್ಳತನ ಅಥವಾ ವಾಹನ ಕಳವು ಪ್ರಕರಣಕ್ಕೆ ಒಳಗಾದ ಕುಟುಂಬಗಳಿಗೆ ಆಥರ್ಿಕ ನಷ್ಟದ ಜೊತೆಗೆ ಮಾನಸಿಕ ಬೆದರಿಕೆಯೂ ಉಂಟಾಗುತ್ತದೆ. ಅಂಥ ಸಂದರ್ಭದಲ್ಲಿ ಸೊತ್ತುಗಳನ್ನು ಮರಳಿ ಪಡೆಯಿಸುವ ಕಾಯರ್ಾಚರಣೆ ಜನಪರ ಪೊಲೀಸ್ ವ್ಯವಸ್ಥೆಯ ಅರ್ಥವನ್ನೇ ಬಲಪಡಿಸುತ್ತದೆ.
ನಗರದಲ್ಲಿ ಹೆಚ್ಚುತ್ತಿರುವ ಸವಾಲುಗಳ ನಡುವೆಯೂ ಪ್ರಕರಣ ಪತ್ತೆ ಪ್ರಮಾಣ ಹೆಚ್ಚಿಸಲು ಪೊಲೀಸರ ಸಂಯೋಜಿತ ಕಾರ್ಯ, ಸ್ಥಳೀಯ ಮಾಹಿತಿಯ ಸಂಗ್ರಹ, ತಾಂತ್ರಿಕ ವಿಶ್ಲೇಷಣೆ ಹಾಗೂ ಮೇಲ್ವಿಚಾರಣೆಯ ಪಾತ್ರ ಮುಖ್ಯವಾಗಿದೆ. ಅಪರಾಧ ನಡೆದ ಬಳಿಕ ದಾಖಲಾತಿ ಮಾಡಿ ಕಡತ ಮುಚ್ಚುವ ಕ್ರಮವಲ್ಲ, ಪತ್ತೆಹಚ್ಚಿ ಫಲಿತಾಂಶ ತರುವುದು ಮುಖ್ಯ ಎನ್ನುವುದನ್ನು ಈ ಕಾಯರ್ಾಚರಣೆ ತೋರಿಸಿದೆ.
ಬೆಳಗಾವಿಯ ಪೊಲೀಸ್ ಮೈದಾನದಲ್ಲಿ ಕಳೆದ 2025 ನೇ ಸಾಲಿನಲ್ಲಿ ಜಪ್ತಿಯಾದ ಪ್ರಕರಣಗಳಲ್ಲಿ ಸಿಕ್ಕ ವಸ್ತುಗಳನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸುವ ಕೆಲಸ ಮಾಡಿದರು,

