
ಬೆಳಗಾವಿ:
ಬಾಂಡ್ ಆಧಾರಿತ ಪಿಐಡಿಗಳಿಗೆ ಬ್ರೇಕ್ ಹಾಕುವ ಹೆಸರಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ದಕ್ಷಿಣ ವಲಯದಲ್ಲಿ 31 ಪಿಐಡಿಗಳನ್ನು ರದ್ದುಪಡಿಸಿರುವುದು ಈಗ ಆಡಳಿತಾತ್ಮಕ ಕ್ರಮಕ್ಕಿಂತ ಹೆಚ್ಚು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಪ್ರಶ್ನೆ ಸರಳವಾಗಿದೆ: ಬಾಂಡ್ ಆಧಾರಿತ ಪಿಐಡಿಗಳು ದಕ್ಷಿಣದಲ್ಲೇ ಮಾತ್ರವೇ ಇವೆ? ಉತ್ತರ ಭಾಗದಲ್ಲಿ ಇಂತಹ ಪ್ರಕರಣಗಳಿಲ್ಲವೇ? ಇದ್ದರೆ ಅವುಗಳ ಮೇಲೆ ಪಾಲಿಕೆ ಮೌನ ಏಕೆ?
ಜನರಿಗೆ ತೊಂದರೆ ಉಂಟು ಮಾಡುವ ಯಾವುದೇ ಕ್ರಮ ದಕ್ಷಿಣದಿಂದಲೇ ಆರಂಭವಾಗುತ್ತದೆ; ಉತ್ತರದಲ್ಲಿ ಮಾತ್ರ ‘ಬಾರಾ ಕೂನ್ ಮಾಫ್’ ಎಂಬ ಭಾವನೆ ನಾಗರಿಕರಲ್ಲಿ ಬಲವಾಗುತ್ತಿದೆ. ಶಾಸಕ ಅಭಯ ಪಾಟೀಲರ ಜನಪ್ರಿಯತೆಯನ್ನು ಕುಗ್ಗಿಸಲು ಆಡಳಿತಾತ್ಮಕ ಕ್ರಮಗಳ ಹೆಸರಿನಲ್ಲಿ ದಕ್ಷಿಣದ ಜನರ ಮೇಲೆ ಒತ್ತಡ ತರುವ ವ್ಯವಸ್ಥಿತ ಹುನ್ನಾರವೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.

ಪಾಲಿಕೆ ಚುಕ್ಕಾಣಿ ಹಿಡಿದವರೂ ಈ ಸೂಕ್ಷ್ಮತೆಯನ್ನು ಅರಿತಿದ್ದರೂ ಮೌನವಾಗಿರುವುದು ಅಚ್ಚರಿಯ ಸಂಗತಿ. ಪಿಐಡಿ ಎಂದರೆ ಕೇವಲ ಸಂಖ್ಯೆ ಅಲ್ಲ; ಅದು ಆಸ್ತಿ ಹಕ್ಕು, ತೆರಿಗೆ, ಬ್ಯಾಂಕ್ ವ್ಯವಹಾರಗಳೊಂದಿಗೆ ನೇರವಾಗಿ ಸಂಬಂಧಿಸಿದೆ.
ಆಯುಕ್ತರು ದಕ್ಷಿಣದಲ್ಲಿ ಮಾತ್ರವಲ್ಲ, ಉತ್ತರ–ದಕ್ಷಿಣದ ಎಲ್ಲ ಬಾಂಡ್ ಪಿಐಡಿಗಳ ಪಟ್ಟಿಯನ್ನು ಬಹಿರಂಗಪಡಿಸಿ ಸಮಗ್ರ ತಪಾಸಣೆ ನಡೆಸಬೇಕು. ಇಲ್ಲದಿದ್ದರೆ, ಈ ಕ್ರಮ ‘ದಾಖಲೆ ಶುದ್ಧೀಕರಣ’ವಲ್ಲ, ‘ದಕ್ಷಿಣ ಟಾರ್ಗೆಟ್’ ಎಂಬ ಆರೋಪಕ್ಕೆ ಇನ್ನಷ್ಟು ಬಲ ಸಿಗಲಿದೆ.

