
ಮೇಯರ್ ಆಗಿ ಪ್ರೀತಿ ಕಾಮಕರ ಅಂತಿಮ ಉಪಮೇಯರ್ ಹುದ್ದೆಗೆ ಹನುಮಂತ ಕೊಂಗಾಲಿಗೆ ಮುದ್ರೆ
ಬೆಳಗಾವಿ:

ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಆಯ್ಕೆ ವಿಚಾರದಲ್ಲಿ ನಡೆದಿದ್ದ ತೀವ್ರ ಚರ್ಚೆಗಳಿಗೆ ಅಂತಿಮ ತೆರೆ ಬಿದ್ದಿದ್ದು, ಮೇಯರ್ ಹುದ್ದೆಗೆ ಪ್ರೀತಿ ಕಾಮಕರ ಹಾಗೂ ಉಪಮೇಯರ್ ಹುದ್ದೆಗೆ ಹನುಮಂತ ಮನನ ಕೊಂಗಾಲಿ ಹೆಸರುಗಳು ಅಂತಿಮಗೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಖಾಸಗಿ ಹೋಟೆಲ್ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಪಕ್ಷದ ನಾಯಕರ ನಡುವೆ ವಿಸ್ತೃತ ಚರ್ಚೆ ನಡೆದು, ಕೊನೆಗೂ ಈ ಎರಡು ಹೆಸರಿನ ಮೇಲೆ ಒಪ್ಪಂದ ಮೂಡಿದೆಯೆಂದು ಮೂಲಗಳು ತಿಳಿಸಿವೆ. ಆರಂಭದಲ್ಲಿ ಮೇಯರ್ ಹುದ್ದೆಗೆ ಹಲವು ಹೆಸರುಗಳು ಕೇಳಿಬಂದಿದ್ದರೂ, ಅಂತಿಮ ಕ್ಷಣದಲ್ಲಿ ಪ್ರೀತಿ ಕಾಮಕರ ಅವರ ಹೆಸರಿಗೆ ಮನ್ನಣೆ ದೊರೆತಿದೆ.

ಉಪಮೇಯರ್ ಹುದ್ದೆಯಲ್ಲಿಯೂ ಕೊನೆಯವರೆಗೂ ತೀವ್ರ ಪೈಪೋಟಿ ಕಂಡುಬಂದಿತ್ತು. ಆದರೆ ಸಮುದಾಯ ಸಮತೋಲನ, ಒಳಪಕ್ಷೀಯ ಲೆಕ್ಕಾಚಾರ ಹಾಗೂ ಸ್ಥಳೀಯ ರಾಜಕೀಯ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಹನುಮಂತ ಮನನ ಕೊಂಗಾಲಿ ಅವರ ಹೆಸರಿಗೇ ಅಂತಿಮ ಮುದ್ರೆ ಬಿದ್ದಿದೆ ಎನ್ನಲಾಗಿದೆ.

ಈ ಆಯ್ಕೆಯಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹೊಸ ರಾಜಕೀಯ ಸಮೀಕರಣಗಳಿಗೆ ವೇದಿಕೆ ಸಿದ್ಧವಾಗಿದ್ದು, ಆಡಳಿತಾರೂಢ ಪಾಳಯದಲ್ಲಿ ಹೊಸ ಉತ್ಸಾಹವೂ ಮೂಡಿದೆ. ಅಧಿಕೃತ ಘೋಷಣೆ ಹೊರಬಿದ್ದ ತಕ್ಷಣ ಪಾಲಿಕೆ ರಾಜಕೀಯ ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆ ಇದೆ.

